ಕಟಾವಿನ ನಂತರ ಗದ್ದೆಗಳಲ್ಲಿ ಬದನೆ, ಮೆಣಸು, ಮೂಲಂಗಿ, ನೂಕೋಲು , ಸೋರೆಕಾಯಿ, ಸೌತೆಕಾಯಿ, ಅಲಸಂದೆ, ಬೀನ್ಸ್, ಬಸಳೆ , ಸಿಹಿ ಕುಂಬಳ, ಬೂದಿ ಕುಂಬಳ, ಮಂಗಳೂರು ಸೌತೆ , ತೊಂಡೆಕಾಯಿ ಬೆಳೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ತರಕಾರಿ ಬೆಳೆಯುವ ಪ್ರಮಾಣ ಅಲ್ಪಮಟ್ಟಿಗೆ ಕಡಿಮೆಯಾಗಿದ್ದು ಉತ್ತಮ ಮಾರುಕಟ್ಟೆ ಬೆಲೆ ದೊರಕದಿರುವುದು ಹಾಗೂ ಕೀಟಬಾಧೆಯಿಂದ ಉತ್ತಮ ಫಸಲು ದೊರೆಯುತ್ತಿಲ್ಲ. ಬೆಳೆದಂತಹ ತರಕಾರಿಗಳನ್ನು ಗ್ರಾಹಕರಿಗೆ ನೇರವಾಗಿ ಮಾರುತ್ತಾರೆ. ಉಳಿದಿದ್ದನ್ನು ವಿರಾಜಪೇಟೆ ತರಕಾರಿ ಮಾರುಕಟ್ಟೆಗೆ ಮಾರಾಟ ಮಾಡುವ ಮೂಲಕ ಆದಾಯ ಕಂಡುಕೊಂಡಿದ್ದಾರೆ.