ಜೀವನ ಪರಿವರ್ತನೆಗೆ ಸಾಹಿತ್ಯ ಮಾರ್ಗದರ್ಶನ

ಗುಳೇದಗುಡ್ಡದಲ್ಲಿ ಡಾ. .ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕೃತಿಗಳ ಅವಲೋಕನ ಕಾರ್ಯಕ್ರಮವನ್ನು ಗುರೂಜಿ ಬಸವರಾಜ ಹಡಗಲಿ ಉದ್ಘಾಟಿಸಿದರು. ಡಾ. ವಿ.ಎ. ಬೆನಕನಾಳ, ರಂಗಪ್ಪ ಶೇಬಿನಕಟ್ಟಿ, ಡಾ. ರಾಜಶೇಖರ ಬಸುಪಟ್ಟದ ಇತರರಿದ್ದರು.
ಗುಳೇದಗುಡ್ಡದಲ್ಲಿ ಡಾ. .ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ತಾಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಕೃತಿಗಳ ಅವಲೋಕನ ಕಾರ್ಯಕ್ರಮವನ್ನು ಗುರೂಜಿ ಬಸವರಾಜ ಹಡಗಲಿ ಉದ್ಘಾಟಿಸಿದರು. ಡಾ. ವಿ.ಎ. ಬೆನಕನಾಳ, ರಂಗಪ್ಪ ಶೇಬಿನಕಟ್ಟಿ, ಡಾ. ರಾಜಶೇಖರ ಬಸುಪಟ್ಟದ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರೂಜಿ ಬಸವರಾಜ ಹಡಗಲಿ ಹೇಳಿಕೆ
  • ಕೃತಿ ಅವಲೋಕನ ಕಾರ್ಯಕ್ರಮ ಆಯೋಜನೆ
ಗುಳೇದಗುಡ್ಡ: ಸಾಹಿತ್ಯಾವಲೋಕನ ಕಾರ್ಯಕ್ರಮಗಳು ನಮ್ಮ ಸುತ್ತಮುತ್ತಲಿನ ಪ್ರಪಂಚವನ್ನು ಅರಿಯಲಿಕ್ಕೆ ಸಹಾಯ ಮಾಡುತ್ತವೆ. ಡಾ. ವಿ.ಎ. ಬೆನಕನಾಳ ತಮ್ಮ ವಿಶ್ರಾಂತ ಬದುಕಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಅಭಿನಂದನೀಯ ಎಂದು ಗುರೂಜಿ ಬಸವರಾಜ ಹಡಗಲಿ ಹೇಳಿದರು.
ಪಟ್ಟಣದ ಡಾ. .ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್ ತಾಲೂಕು ಘಟಕದ ವತಿಯಿಂದ ಡಾ. ವಿ ಎ. ಬೆನಕನಾಳ ಅವರ ಓದುಮನೆಯಲ್ಲಿ ಹಮ್ಮಿಕೊಂಡಿದ್ದ ನೋವುಂಡು ನಲಿದವರು ಮತ್ತು ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆ ಕೃತಿಗಳ ಅವಲೋಕನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಹಿತ್ಯ ನಮ್ಮ ಜೀವನದ ಪರಿವರ್ತನೆಗೆ ಮಾರ್ಗದರ್ಶನ ನೀಡುತ್ತದೆ. ಕೃತಿಯ ತತ್ವಗಳನ್ನು ಕೇಳಿ ಮರೆಯುವುದಕ್ಕಿಂತ ಅವುಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.
ಡಾ. .ಗು. ಹಳಕಟ್ಟಿ ರಾಷ್ಟ್ರೀಯ ಟ್ರಸ್ಟ್‌ನ ತಾಲೂಕು ಘಟಕದ ಅಧ್ಯಕ್ಷ ಡಾ. ವಿ.ಎ. ಬೆನಕನಾಳ ಮಾತನಾಡಿ, ಅಧ್ಯಯನ, ಬರಹಗಳು ನನ್ನ ವಿಶ್ರಾಂತ ಬದುಕಿನ ಚೈತನ್ಯಶೀಲತೆಗೆ ಕಾರಣವಾಗಿವೆ. ಟ್ರಸ್ಟ್ ವತಿಯಿಂದ ನಾವು ವಿಭಿನ್ನವಾದ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಗುಳೇದಗುಡ್ಡದ ಸಾಂಸ್ಕೃತಿಕ ಲೋಕಕ್ಕೆ ಹೊಸ ಕಳೆಯನ್ನು ತರಬೇಕೆನ್ನುವ ಉದ್ದೇಶ ಹೊಂದಿದ್ದೇವೆ ಎಂದು ಹೇಳಿದರು.
ನೋವುಂಡು ನಲಿದವರು ಕೃತಿ ಅವಲೋಕನ ಮಾಡಿದ ಪ್ರಾಧ್ಯಾಪಕ ಡಾ. ರಮೇಶ ಯಾನಮಶೆಟ್ಟಿ, ರಂಗಪ್ಪ ಶೇಬಿನಕಟ್ಟಿ ಆದರ್ಶಮಯ, ಪರಿಶ್ರಮದ ಜೀವನ ಸಾಗಿಸಿ ಸಂಘಟನೆ, ಸಮಾಜಸೇವೆಗಾಗಿ ತಮ್ಮನ್ನು ಸಮರ್ಪಿಸಿಕೊಂಡವರು. ಈ ಗ್ರಂಥ ಗುಳೇದಗುಡ್ಡದ ಸಾಂಸ್ಕೃತಿಕ ಚರಿತ್ರೆ ಒಳಗೊಂಡ ಮಹತ್ವಪೂರ್ಣ ಕೃತಿಯಾಗಿದೆ ಎಂದು ವಿಶ್ಲೇಷಿಸಿದರು.
ರಾಷ್ಟ್ರ ನೇತಾರ ಅಟಲ್ ಬಿಹಾರಿ ವಾಜಪೇಯಿ ಜೀವನ ಚರಿತ್ರೆ ಕೃತಿ ವಿಮರ್ಶಿಸಿದ ಪ್ರಾಧ್ಯಾಪಕ ಪ್ರೊ. ಚಂದ್ರಶೇಖರ ಹೆಗಡೆ, ಪಕ್ಷಾತೀತ, ಧರ್ಮಾತೀತ, ಜಾತ್ಯಾತೀತ, ದೇಶಾತೀತ ಅಜಾತಶತ್ರು ಎಂದು ಕರೆಸಿಕೊಂಡವರು ವಾಜಪೇಯಿ. ರಾಜಕಾರಣಿ ಮಾತ್ರವಾಗಿರದೇ ಕವಿ, ದಾರ್ಶನಿಕ, ತತ್ವಜ್ಞಾನಿ, ರಾಜಧರ್ಮಿಯಾಗಿದ್ದರಿಂದ ಜಾಗತಿಕ ರಾಜಕಾರಣದ ಇತಿಹಾಸದಲ್ಲಿ ಅವರ ಹೆಸರು ಅಜರಾಮರವಾಗಿದೆ ಎಂದರು.
ರಂಗಪ್ಪ ಶೇಬಿನಕಟ್ಟಿ, ಅಧ್ಯಕ್ಷತೆ ವಹಿಸಿದ್ದ ಡಾ. ರಾಜಶೇಖರ ಬಸುಪಟ್ಟದ ಮಾತನಾಡಿದರು.
ಪ್ರೊ. ಸಿದ್ಧಲಿಂಗಪ್ಪ ಬರಗುಂಡಿ, ಸುರೇಶ ಪರ್ವತೀಕರ, ವಿನೋದ ಅಂಬೇಕರ, ರಾಜಶೇಖರ ಪಾಗಿ, ಮುರುಗೇಶ ಶೇಖಾ, ಶಾಂತಾ ಕರಡಿಗುಡ್ಡ, ಶಂಕರ ರೂಡಗಿ, ಪುತ್ರಪ್ಪ ಬೀಳಗಿ ಸಂಗಮೇಶ ಚಿಕ್ಕಾಡಿ, ಬಸವರಾಜ ಚವಡಿ, ಮಹಾದೇವ ಜಗತಾಪ, ಶೈಲಶ್ರೀ ಬೆನಕನಾಳ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net