ಕಾಲು ಜಾರಿ ಬಿದ್ದು ಲೈನ್‌ಮ್ಯಾನ್ ಸಾವು

ಮುತ್ತು ಹನುಮಂತ ಡಾಂಗೆ
ಮುತ್ತು ಹನುಮಂತ ಡಾಂಗೆ
Published on
ಸಿಂದಗಿ: ನಗರದ ಹೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ರಾತ್ರಿ ಕರ್ತವ್ಯದಲ್ಲಿದ್ದ ಲೈನ್‌ಮ್ಯಾನ್ ಸಾವ ನ್ನಪ್ಪಿರುವ ಘಟನೆ ಶನಿವಾರ ಬೆಳಕಿಗೆ ಬಂದಿದೆ.
ಮೃತ ಹೆಸ್ಕಾಂ ನೌಕರ ಮುತ್ತು ಹನುಮಂತ ಡಾಂಗೆ (35) ಎಂದು ಗುರುತಿಸಲಾಗಿದ್ದು, ಕಳೆದ 12 ವರ್ಷದಿಂದಲೂ ಲೈನ್‌ಮ್ಯಾನ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಶುಕ್ರವಾರ ರಾತ್ರಿ ಕಚೇರಿ ಕಟ್ಟಡದ ಮೇಲೆ ತೆರಳಿದ್ದ ವೇಳೆ ಕಾಲು ಜಾರಿ ಕೆಳಗೆ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ.
ರಾತ್ರಿ 2 ಗಂಟೆಗೆ ಹೆಸ್ಕಾಂ ಕಚೇರಿಯಲ್ಲಿನ ಕ್ವಾಟರ್ಸ್‌ನ ಸಿಬ್ಬಂದಿ ರಕ್ತದ ಮಡುವಿನಲ್ಲಿ ಬಿದ್ದ ಮುತ್ತು ಡಾಂಗೆ ವರನ್ನು ಗುರುತಿಸಿ ಅಧಿಕಾರಿಗಳಿಗೆ, ಮೃತನ ಕುಟುಂಬಸ್ಥರಿಗೆ ಸಾವಿನ ಸುದ್ದಿ ಮುಟ್ಟಿಸಿದ್ದಾರೆ.
ಘಟನಾ ಸ್ಥಳಕ್ಕಾಗಮಿಸಿದ ಮುತ್ತು ಡಾಂಗೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಸಿಂದಗಿ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಪ್ರಕರಣದ ಕುರಿತು ಮತನ ಕುಟುಂಬಸ್ಥರು, ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net