ವಿಜಯಪುರದಲ್ಲಿ ಅಲ್ಪ ಮಳೆ / VIJAYAPUR

ವಿಜಯಪುರದಲ್ಲಿ ಕೇವಲ ನಾಲ್ಕಾರು ನಿಮಿಷಗಳ ಕಾಲ ಗುಡುಗು ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮರಗಳಲ್ಲಿನ ರೆಂಬೆಕೊಂಬೆಗಳು ನೆಲದ ಮೇಲೆ ಬಿದ್ದಿರುವುದು.
ವಿಜಯಪುರದಲ್ಲಿ ಕೇವಲ ನಾಲ್ಕಾರು ನಿಮಿಷಗಳ ಕಾಲ ಗುಡುಗು ಬಿರುಗಾಳಿ ಸಹಿತ ಸುರಿದ ಮಳೆಯಿಂದ ಮರಗಳಲ್ಲಿನ ರೆಂಬೆಕೊಂಬೆಗಳು ನೆಲದ ಮೇಲೆ ಬಿದ್ದಿರುವುದು.
Published on
ವಿಜಯಪುರ : ಕೆಲ ದಿನಗಳಿಂದ ಬಿಸಿಲಿನ ತಾಪಕ್ಕೆ ಕಾದ ಕೆಂಡದಂತಾಗಿದ್ದ ರಸ್ತೆಗಳು ಮಂಗಳವಾರ ಹಾಗೂ ಬುಧವಾರ ಮೋಡ ಕವಿದ ವಾತಾವರಣವಿದ್ದು, ಕೆಲ ಕಾಲ ಸುರಿದ ಮಳೆಗೆ ವಾತಾವರಣ ತಂಪಾಗಿದೆ.
ಗುಡುಗು- ಸಹಿತ ಬಿರುಗಾಳಿ ಬೀಸಿದ್ದು, ಜೋರಾದ ಮಳೆ ನಿರೀೆಯಲ್ಲಿದ್ದ ಜನರಿಗೆ ನಿರಾಸೆಯಾಗಿದೆ. ಜೋರಾಗಿ ಬೀಸಿದ ಬಿರುಗಾಳಿಗೆ ಗಿಡಮರಗಳ ರೆಂಬೆ ಕೊಂಬೆಗಳು ಉದುರಿ ರಸ್ತೆಗೆ ಬಿದ್ದಿವೆ.
ಪಟ್ಟಣದಲ್ಲೆಡೆ ಅಂತರ್ಜಲ ಕುಸಿತಗೊಂಡು ಕೊಳವೆಬಾವಿಗಳಲ್ಲಿ ನೀರಿಲ್ಲದಂತಾಗಿದೆ. ಮೋಡ ಕವಿದ ವಾತಾವರಣ ನೋಡಿ ಕೃಷಿ ಮಾಡಲು ಮುಂದಾಗಿದ್ದ ರೈತರ ಕನಸು ಕನಸಾಗಿಯೇ ಉಳಿದಿದೆ.
ಕನಿಷ್ಠ ಅರ್ಧಗಂಟೆ ಅಥವಾ ಒಂದು ಗಂಟೆಯಾದರೂ ಮಳೆಯಾಗಿದ್ದರೆ ಭೂಮಿ ತಂಪಾಗಿ ಜನರು ಖುಷಿಪಡುತ್ತಾರೆ. ಕೇವಲ ನಾಲ್ಕಾರು ನಿಮಿಷಗಳ ಮಳೆ ಭೂಮಿಯ ಬಿಸಿಯನ್ನು ಇನ್ನೂ ಹೆಚ್ಚಿಸುತ್ತದೆ ಹೊರತು ಜನರಿಗೆ ನೆಮ್ಮದಿ ಕೊಡುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net