ಮಾದಕ ವಸ್ತುಗಳ ಸಹವಾಸ ಜೀವನ ಸರ್ವನಾಶ / HOSAKOTE

ಹೊಸಕೋಟೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಪೊಲೀಸ್​ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವಿರೋಧಿ ಸಪ್ತಾಹದಲ್ಲಿ ಬೆಂ. ಗ್ರಾಮಾಂತರ ಜಿಲ್ಲಾ ಪೊಲೀಸ್​ ಅಧೀಕ್ಷಕ ಚಂದ್ರಕಾಂತ್​, ನಟ ಕೋಮಲ್​, ಡಿವೈಎಸ್ಪಿ ಮಲ್ಲೇಶ್​, ಇನ್​ಸ್ಪೆಕ್ಟರ್​ ಗೋವಿಂದ್​, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ ಎಚ್​.ಎಂ.ಸುಬ್ಬರಾಜ್​ ಇದ್ದರು.
ಹೊಸಕೋಟೆ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಪೊಲೀಸ್​ ಇಲಾಖೆಯಿಂದ ಹಮ್ಮಿಕೊಂಡಿದ್ದ ಮಾದಕ ವಸ್ತುಗಳ ವಿರೋಧಿ ಸಪ್ತಾಹದಲ್ಲಿ ಬೆಂ. ಗ್ರಾಮಾಂತರ ಜಿಲ್ಲಾ ಪೊಲೀಸ್​ ಅಧೀಕ್ಷಕ ಚಂದ್ರಕಾಂತ್​, ನಟ ಕೋಮಲ್​, ಡಿವೈಎಸ್ಪಿ ಮಲ್ಲೇಶ್​, ಇನ್​ಸ್ಪೆಕ್ಟರ್​ ಗೋವಿಂದ್​, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ ಎಚ್​.ಎಂ.ಸುಬ್ಬರಾಜ್​ ಇದ್ದರು.
Published on
ಹೊಸಕೋಟೆ : ಮಾದಕವಸ್ತುಗಳು ಯುವಕರ ಶಕ್ತಿ, ಕ್ರಿಯಾಶೀಲತೆ, ಜ್ಞಾನ, ವಿಧ್ಯೆ ಹಾಗೂ ಅವರ ಜೀವನವನ್ನೇ ನಾಶ ಮಾಡುತ್ತದೆ, ಆದುದರಿಂದ ಯುವಕರು ಮಾದಕ ವಸ್ತುಗಳಿಗೆ ದಾಸರಾಗಬೇಡಿ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್​ ಅಧೀಕ್ಷಕ ಚಂದ್ರಕಾಂತ್​ ಎಚ್ಚರಿಸಿದರು.
ನಗರದ ಚನ್ನಬೈರೇಗೌಡ ಕ್ರಿಡಾಂಗಣದಲ್ಲಿ ಮಾದಕ ವಸ್ತುಗಳ ವಿರುದ್ದ ಜನಜಾಗೃತಿ ಕಾರ್ಯಕ್ರಮ ಸಂಭಂದ ಮಾದಕವಸ್ತುಗಳ ವಿರೋಧಿ ಸಪ್ತಾಹ ಹಾಗೂ ಮ್ಯಾರಥಾನ್​ ಓಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮಾದಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸಲು ಪ್ರತಿಯೊಬ್ಬ ಭಾರತೀಯ ನಾಗರಿಕ ಮುಂದೆ ಬರಬೇಕು. ಮಾದಕವಸ್ತುಗಳಿಂದಾಗುತ್ತಿರುವ ಅನಾಹುತಗಳನ್ನು ಗಮನದಲ್ಲಿಟ್ಟು ಅದರ ನಿಷೇಧಕ್ಕೆ ಮುಂದಾಗಬೇಕು. ಯುವಕರು ಕ್ಷಣಿಕ ಸುಖಕ್ಕಾಗಿ ಮಾದಕವಸ್ತುಗಳ ದಾಸರಾಗುತಿದ್ದಾರೆ. ಅದರಿಂದ ಅವರ ವಿಧ್ಯಾಭ್ಯಾಸ, ಕೌಶಲ ಹಾಗೂ ದುಡಿಮೆಗೆ ಧಕ್ಕೆಯಾಗುತ್ತದೆ. ದೇಶದ ಅಭಿವೃದ್ಧಿಗೂ ಕಂಟಕವಾಗಲಿದೆ ಎಂದರು.
ಜಾಗೃತಿ ಮೂಡಿಸಿ : ಮಾದಕ ವಸ್ತುಗಳಿಂದಾಗುವ ಸಮಸ್ಯೆಗಳ ಬಗ್ಗೆ ನಿಮಗೆ ತಿಳಿದಿರುವ ವಿಚಾರಗಳನ್ನು ಕನಿಷ್ಠ 100 ಜನರಿಗೆ ತಲುಪಿಸಿ ಹಾಗೂ ಪ್ರತಿಯೊಬ್ಬರೂ ಮೊಬೈಲ್​ ಬಳಸುವುದರಿಂದ ಮಾದಕ ವಸ್ತುಗಳಿಂದಾಗುವ ತೊಂದರೆಗಳ ಬಗ್ಗೆ ಸಾಮಾಜಿಕ ಜಾಲ ತಾಣಗಳ ಮೂಲಕವೂ ಅರಿವು ಮೂಡಿಸಬೇಕು. ಸಮಾಜವನ್ನು ಮಾದಕ ವಸ್ತುಗಳಿಂದ ಮುಕ್ತಗೊಳಿಸುವ ಪ್ರತಿಜ್ಞೆ ಮಾಡಬೇಕು ಎಂದು ಎಸ್ಪಿ ತಿಳಿಸಿದರು.
ಹೊಸಕೋಟೆ ಪೊಲೀಸ್​ ಉಪವಿಭಾಗದ ಡಿವೈಎಸ್ಪಿ ಮಲ್ಲೇಶ್​, ಇನ್​ಸ್ಪೆಕ್ಟರ್​ ಗೋವಿಂದ್​, ಯೋಜನಾ ಪ್ರಾಧಿಕಾರದ ನಿರ್ದೇಶಕ ಡಾ ಎಚ್​.ಎಂ.ಸುಬ್ಬರಾಜ್​, ಮಾಜಿ ಅಧ್ಯಕ್ಷ ಡಾ.ಸಿ.ಜಯರಾಜ್​, ತಾಲೂಕಿನ ಎಲ್ಲ ಠಾಣೆಯ ಅಧಿಕಾರಿಗಳು, ಸಿಬ್ಬಂದಿ, ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಮ್ಯಾರಥಾನ್​ನಲ್ಲಿ ಭಾಗವಹಿಸಿದ್ದರು.
"ನಮ್ಮ ಪೊಲೀಸ್​ ನಮ್ಮ ನಗರ' : ಮಾದಕವಸ್ತುಗಳಿಂದ ಯುವಕರ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿ ನೋವು ಅನುಭವಿಸುವುದು ಕೇವಲ ಕ್ಷಣಿಕ ಸುಖಕ್ಕಾಗಿ. ಮಾದಕ ವಸ್ತುಗಳ ವಿರುದ್ಧ ಜಾಗೃತಿಗಾಗಿ "ನಮ್ಮ ಪೊಲೀಸ್​ ನಮ್ಮ ನಗರ' ನೂತನ ಕಾರ್ಯಕ್ರಮ ಜಾರಿಯಾಗಿದೆ. ಮಾದಕ ವಸ್ತುಗಳ ಬಳಕೆ, ಮಾರಾಟ ಕಂಡು ಬಂದಲ್ಲಿ ಪೊಲೀಸರಿಗೆ ಮಾಹಿತಿ ನೀಡಬೇಕು. ಮುಂದಿನ ಕ್ರಮವನ್ನು ಪೊಲೀಸರು ಕೈಗೊಳ್ಳುತ್ತಾರೆ ಹಾಗೂ ದೂರು ನೀಡಿದವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಎಸ್ಪಿ ತಿಳಿಸಿದರು.

ಮಾದಕ ವಸ್ತುಗಳಿಂದಾಗುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ನಾನು ಸಹ ಹೆಚ್ಚಿನ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ಅಳಿಲು ಸೇವೆ ಮಾಡುತಿದ್ದೇನೆ. ಮುಂದಿನ ದಿನಗಳಲ್ಲಿ ಮಾದಕ ವಸ್ತುಗಳಿಂದಾಗುವ ಸಮಸ್ಯೆಗಳ ಬಗ್ಗೆ ಒಂದು ಗೀತೆಯನ್ನು ಹೊರತರಲಾಗುವುದು. ಮಾದಕ ವಸ್ತುಮುಕ್ತ ಸಮಾಜಕ್ಕೆ ನನ್ನ ಬೆಂಬಲ ಸದಾ ಇರಲಿದೆ.

— > ಕೋಮಲ್​ ಕನ್ನಡ ಚಲನಚಿತ್ರ ನಟ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net