ಒಕ್ಕಲುತನ ಉಳಿದರೆ ಹಸನಾಗಲಿದೆ ಬದುಕು

ರಾಯಚೂರಿನ ಕೃಷಿ ವಿವಿ ಆವರಣದಲ್ಲಿ ರೈತರಿಂದ ರೈತರಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ, ವಿವಿ ಕುಲಪತಿ ಡಾ.ಎಂ.ಹನುಮಂತ, ಏಮ್ಸ್ ಹೋರಾಟ ಸಮಿತಿ ಸಂಚಾಲಕ ಡಾ.ಬಸವರಾಜ ಕಳಸ, ಹೋರಾಟಗಾರ ರಾಘವೇಂದ್ರ ಕುಷ್ಟಗಿ, ಡಾ.ಎಚ್.ಡಿ.ಪ್ರಶಾಂತ, ಸಿರಿಗೆರೆ ಪನ್ನರಾಜು, ಡಾ.ರಜಾಕ್ ಉಸ್ತಾದ್ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಅಭಿಮತ
  • ರೈತರಿಂದ ರೈತರಿಗೆ ಕಾರ್ಯಕ್ರಮ
ರಾಯಚೂರು: ಸರ್ಕಾರಗಳು ರೈತರ ಸಮಸ್ಯೆ ಹಾಗೂ ಸವಾಲುಗಳನ್ನು ಅರಿತರೆ ಮಾತ್ರ ಪರಿಹಾರ ಕಂಡುಕೊಳ್ಳಲು ಸಾಧ್ಯ. ಒಕ್ಕಲುತನ ಉಳಿದರಷ್ಟೇ ಸಕಲ ಜೀವರಾಶಿಗಳ ಬದುಕು ಹಸನಾಗಿರುತ್ತದೆ ಎಂದು ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಹನುಮನಗೌಡ ಬೆಳಗುರ್ಕಿ ಹೇಳಿದರು.
ನಗರದ ಕೃಷಿ ವಿವಿ ಆವರಣದಲ್ಲಿ ಆಯೋಜಿಸಿದ್ದ ರೈತರಿಂದ ರೈತರಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಆಧುನಿಕ ಕೃಷಿ ಪದ್ಧತಿ ರೈತರ ಒಕ್ಕಲುತನಕ್ಕೆ ಹಲವು ಸವಾಲು ಹಾಕಿದೆ. ಎಲ್ಲ ಹಂತದಲ್ಲೂ ರೈತರ ಶೋಷಣೆ ನಡೆಯುತ್ತಿದೆ. ನೆರೆ, ಬರದ ಜತೆಗೆ ನೀತಿಗಳು, ಬಿಕ್ಕಟ್ಟುಗಳು ಕೃಷಿಗೆ ಸಂಕಟ ತಂದಿದೆ. ಅನ್ನದಾತರ ಹಿತ ಕಾಯುವ ಯೋಜನೆ ಜಾರಿಗೊಳಿಸಬೇಕಿದೆ ಎಂದರು.
ಮಾಹಿತಿ ಆಯೋಗದ ಆಯುಕ್ತ ಬಿ.ವೆಂಕಟಸಿಂಗ್ ಮಾತನಾಡಿ, ಕಲ್ಯಾಣ ಕರ್ನಾಟಕ ಶೋಚನೀಯ ಸ್ಥಿತಿ ಎದುರಿಸುತ್ತಿದ್ದು ಕೃಷಿ ಬಿಕ್ಕಟ್ಟು ಮತ್ತಷ್ಟು ಬಿಗಡಾಯಿಸಿದೆ. ಶೇ.65 ಹಿಂದುಳಿದ ತಾಲೂಕುಗಳಿದ್ದು ತೆಲಂಗಾಣ ಮಾದರಿಯಲ್ಲಿ ಕೇಂದ್ರ ಸರ್ಕಾರ ಅನುದಾನ ಕೊಡಬೇಕು. ನೀರಾವರಿಗೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ರಾಯಚೂರು ಕೃಷಿ ವಿವಿ ಕುಲಪತಿ ಡಾ.ಎಂ.ಹನುಮಂತ, ಹೋರಾಟಗಾರರಾದ ಡಾ.ಬಸವರಾಜ ಕಳಸ, ರಾಘವೇಂದ್ರ ಕುಷ್ಟಗಿ, ಡಾ.ಎಚ್.ಡಿ.ಪ್ರಶಾಂತ, ಸಿರಿಗೆರೆ ಪನ್ನರಾಜು, ಡಾ.ರಜಾಕ್ ಉಸ್ತಾದ್ ಹಾಗೂ ಗವಿಸಿದ್ದಪ್ಪ ಹೊಸಮನಿ, ರಾವುತ್‌ರಾವ್ ಬರೂರ್, ಸದಾಶಿವಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net