ಪ್ರವಚನದಿಂದ ಬದುಕು ಪಾವನ

ಭಾಲ್ಕಿ ತಾಲೂಕಿನ ಆನಂದವಾಡಿಯಲ್ಲಿ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಪ್ರವಚನ ಕಾರ್ಯಕ್ರಮದಲ್ಲಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಗಣಪತಿ ಭೂರೆ, ಬಾಬುರಾವ ಭೂರೆ, ಜಗನ್ನಾಥ ಸಿದ್ದೇಶ್ವರೆ ಇತರರಿದ್ದರು.
ಭಾಲ್ಕಿ ತಾಲೂಕಿನ ಆನಂದವಾಡಿಯಲ್ಲಿ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಪ್ರವಚನ ಕಾರ್ಯಕ್ರಮದಲ್ಲಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು, ಗಣಪತಿ ಭೂರೆ, ಬಾಬುರಾವ ಭೂರೆ, ಜಗನ್ನಾಥ ಸಿದ್ದೇಶ್ವರೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಗುರುಬಸವ ಪಟ್ಟದ್ದೇವರು ನುಡಿ
  • ಆನಂದವಾಡಿಯಲ್ಲಿ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ
ಭಾಲ್ಕಿ: ಪ್ರವಚನ ಆಲಿಸುವುದರಿಂದ ಮನುಷ್ಯನ ಬದುಕು ಪಾವನವಾಗಿ ಜೀವನದಲ್ಲಿ ಸುಖ, ಶಾಂತಿ ಮತ್ತು ನೆಮ್ಮದಿ ದೊರೆಯುತ್ತದೆ ಎಂದು ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು ನುಡಿದರು.
ತಾಲೂಕಿನ ಆನಂದವಾಡಿಯಲ್ಲಿ ಮಂಗಳವಾರ ಆಯೋಜಿಸಿದ್ದ ನಮ್ಮೂರಿನಲ್ಲಿ ಶ್ರಾವಣ ಸಂಭ್ರಮ ಪ್ರವಚನ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಪೂಜ್ಯರು, ಆಧ್ಯಾತ್ಮಿಕ ಚಿಂತನೆಗಳು ಮತ್ತು ಶರಣರ ವಚನಗಳು ನಮ್ಮ ಮನಸ್ಸನ್ನು ಪರಿಶುದ್ಧಗೊಳಿಸುತ್ತವೆ. ಆದ್ದರಿಂದ ಪ್ರತಿಯೊಬ್ಬರೂ ಶ್ರಾವಣ ಮಾಸದಲ್ಲಿ ಆಲಿಸಿದ ಶರಣರ ವಾಣಿಯನ್ನು ಆಲಿಸಿ ಬದುಕಿನಲ್ಲಿ ಪರಿವರ್ತನೆ ತಂದು ಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಿರಿಯ ಸಾಹಿತಿ ಗಣಪತಿ ಭೂರೆ ಪ್ರಾಸ್ತಾವಿಕ ಮಾತನಾಡಿದರು. ಪ್ರಮುಖರಾದ ಬಾಬುರಾವ ಭೂರೆ, ಜಗನ್ನಾಥ ಸಿದ್ದೇಶ್ವರೆ, ಶಿವರಾಜ ಭೂರೆ, ಷಣ್ಮುಖಪ್ಪ ಭೂರೆ, ಕಾಶಿನಾಥ ಭೂರೆ, ಸಂಗಮೇಶ ಭೂರೆ, ಜಗದೀಶ ಭೂರೆ, ಸಾಗರ ಭೂರೆ, ಜ್ಞಾನದೇವಿ ಭೂರೆ, ತಂಗೆಮ್ಮ ಭೂರೆ, ಜಗದೇವಿ ಭೂರೆ, ಶೋಭಾವತಿ ಭೂರೆ, ವಿಜಯಕುಮಾರ ಭೂರೆ, ಕಲ್ಲಪ್ಪ ಭೂರೆ, ಸತೀಶ ಸಿದ್ದೇಶ್ವರೆ, ದೀಪಕ ಗೋಧೆ, ಮಾರುತೆಪ್ಪ ಚಿಕಲೆ, ಮಾರುತಿ ಭೂರೆ, ದೀಪಕ ಠಮಕೆ ಸೇರಿದಂತೆ ಹಲವರು ಇದ್ದರು. ಶ್ರೀನಿವಾಸ ಭೂರೆ ಸ್ವಾಗತಿಸಿದರು. ಬಸವರಾಝ ಮಡಿವಾಳ ನಿರೂಪಣೆ ಮಾಡಿದರು. ಹಣಮಶೆಟ್ಟಿ ಸಿದ್ದೇಶ್ವರೆ ವಂದಿಸಿದರು. ಕರಡ್ಯಾಳ ಚನ್ನಬಸವೇಶ್ವರ ಗುರುಕುಲದ ಶಿಕ್ಷಕರು ನಡೆಸಿಕೊಟ್ಟ ಜೈ ಜವಾನ್​ ಕಿರು ನಾಟಕ ನೋಡುಗರ ಗಮನ ಸೆಳೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net