ದುಶ್ಚಟದಿಂದ ಬದುಕು ನಾಶ

life-is-ruined-by-addiction
life-is-ruined-by-addiction
Published on
ಪಾವಗಡ : ದುಶ್ಚಟ ವ್ಯಕ್ತಿಯ ಜೀವನವನ್ನಲ್ಲದೆ ಕುಟುಂಬ ಮತ್ತು ಸಮಾಜದ ಶಾಂತಿ ಹಾಳು ಮಾಡುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ಇಂತಹ ಚಟಗಳಿಗೆ ಬಲಿಯಾಗಬೇಡಿ ಎಂದು ನಗರ ವೃತ್ತನಿರೀಕ್ಷಕ ಸುರೇಶ್​ ತಿಳಿಸಿದರು.
ಪಟ್ಟಣದ ಎಸ್​.ಎಸ್​.ಕೆ.ಬಯಲು ರಂಗಮಂದಿರದಲ್ಲಿ ಸೋಮವಾರ ಸರ್ಕಾರಿ ಪದವಿ ಪೂರ್ವ ಕಾಲೇಜು, ಶಾಂತಿ ಪಿಯು ಕಾಲೇಜು ಹಾಗೂ ಪೊಲಿಸ್​ ಇಲಾಖೆಯ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಶಾ ಮುಕ್ತ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವಪೀಳಿಗೆ ಮಾದಕ ವಸ್ತುಗಳಿಗೆ ದಾಸರಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಮೊಬೈಲ್​ ಬಳಕೆ ಹೆಚ್ಚಾಗುತ್ತಿದ್ದು, ಇದು ಸಹ ಒಂದು ರೀತಿಯ ಚಟವಾಗಿ ಪರಿಣಮಿಸದೆ. ಪ್ರಸ್ತುತ ದಿನಗಳಲ್ಲಿ ಕೆಲವು ಚಲನಚಿತ್ರಗಳಲ್ಲಿ ಅಪರಾಧ ಮತ್ತು ಕಾನೂನು ಬಾಹಿರ ದೃಶ್ಯಗಳನ್ನು ವೈಭವಿಕರಿಸಲಾಗುತ್ತಿದ್ದು, ಯುವ ಪೀಳಿಗೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿವೆ ಎಂದು ತಿಳಿಸಿದರು.
ಗ್ರಾಮಾಂತರ ವೃತ್ತ ನಿರೀಕ್ಷಕ ಗಿರೀಶ್​ ಮಾತನಾಡಿ, ವಿದ್ಯಾರ್ಥಿಗಳು ಮಾಧಕ, ದುಶ್ಚಟಗಳನ್ನು ಮೊದಲಿಗೆ ಸ್ನೇಹಿತನ ಬಲವಂತದಿಂದ ಶುರುವಾಗಿ ಕ್ರಮೇಣವಾಗಿ ನಿಮ್ಮನ್ನು ದಾಸನಾಗಿ, ಕಳ್ಳನಾಗಿ, ದರೋಡೆಕೋರನನ್ನಾಗಿ ಸೆಳೆಯುತ್ತದೆ ಹಾಗಾಗಿ ಅಂತಹ ಚಟಗಳಿರುವವರಿಂದ ದೂರವಿದ್ದರೆ ಸಾಕು. ಸಮಾಜದಲ್ಲಿ ನಡೆಯುವ ಎಲ್ಲ ರೀತಿಯ ಅಪರಾಧಗಳನ್ನು ತಡೆಯಬಹುದಾಗಿದೆ. ವಿದ್ಯಾರ್ಥಿಗಳಲ್ಲಿ ಕಾನೂನು ಅರಿವಿನ ಅಗತ್ಯವಿದ್ದು, ಎಲ್ಲರೂ ಕಡ್ಡಾಯವಾಗಿ ನಿಯಮ ಪಾಲಿಸಿ ಎಂದರು.
ವಿದ್ಯಾರ್ಥಿಗಳಿಗೆ ಮಾಧಕ ವಸ್ತುಗಳ ಸೇವನೆಯಿಂದಾಗುವ ದುಷ್ಪಾರಿಣಾಮಗಳ ಕುರಿತು ಕಿರುಚಿತ್ರಗಳ ಪ್ರದರ್ಶನ ಮತ್ತು "ಬೇಡ ಬೇಡ ನಶೆ ಬೇಡ', "ಬೇಕು ಬೇಕು ಉತ್ತಮ ಆರೋಗ್ಯ ಬೇಕು', "ಮಾಧಕ ವಸ್ತುವಿಗೆ ಬಾಯ್​ ಬಾಯ್​', "ಉತ್ತಮ ಆರೋಗ್ಯಕ್ಕೆ ಹಾಯ್​ ಹಾಯ್​', ಘೋಷವಾಕ್ಯಗಳನ್ನು ಭೋದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net