ಹುಲಸೂರು ಸಮೀಪದ ಭಾಲ್ಕಿ ತಾಲೂಕಿನ ಲಾದಾದಲ್ಲಿ ಮಂಗಳವಾರ ಸಂಜೆ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮವನ್ನು ಶ್ರೀ ಡಾ.ಶಿವಾನಂದ ಸ್ವಾಮೀಜಿ ಉದ್ಘಾಟಿಸಿದರು. ಡಾ. ಇಂದ್ರಜಿತರಾವ ಪಂಚಾಳ, ಅನಿಲಕುಮಾರ ಜಗತಾಪ, ಚಂದ್ರಕಾಂತ ಪಾಟೀಲ, ರವೀಂದ್ರ ಪಾಟೀಲ, ಸುನಿಲಕುಮಾರ ಜಪತಾಪ, ಶಿವರಾಜ ಮಾಳಚಾಪುರೆ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿ
ಲಾದಾದಲ್ಲಿ ಧಾರ್ಮಿಕ ಕಾರ್ಯಕ್ರಮ
ಹುಲಸೂರು: ಕಾಯಕ ಮಾಡಿದರೆ ಮಾತ್ರ ನೆಮ್ಮದಿ ಜೀವನ ಸಾಗಿಸಲು ಸಾಧ್ಯ. ಪ್ರತಿಯೊಬ್ಬರೂ ಕಾಯಕ ನಿಷ್ಠರಾಗಬೇಕು ಎಂದು ಗುರು ಬಸವೇಶ್ವರ ಸಂಸ್ಥಾನ ಮಠದ ಪೀಠಾಧಿಪತಿ ಶ್ರೀ ಡಾ.ಶಿವಾನಂದ ಸ್ವಾಮೀಜಿ ನುಡಿದರು.
ಸಮೀಪದ ಭಾಲ್ಕಿ ತಾಲೂಕಿನ ಲಾದಾ ಗ್ರಾಮದಲ್ಲಿ ಮಂಗಳವಾರ ಸಂಜೆ ಶ್ರೀ ಸೋಮೇಶ್ವರ ದೇವಸ್ಥಾನದ ಕಳಸಾರೋಣ ನಿಮಿತ್ತ ಆಯೋಜಿಸಿದ್ದ ಧಾರ್ಮಿಕ ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದ ಪೂಜ್ಯರು,12ನೇ ಶತಮಾನದ ಶರಣ ಲದ್ದಿಯ ಸೋಮಣ್ಣ ಇಲ್ಲಿಂದ ಹುಲ್ಲು ಹುಲಸೂರಕ್ಕೆ ತಂದು ಮಾರಾಟದಿಂದ ಬಂದ ದುಡ್ಡಿನಲ್ಲಿ ದಾಸೋಹ ಮಾಡುತ್ತಿದ್ದರು. ಅವರ ಸರಳ ವ್ಯಕ್ತಿತ್ವ ಎಲ್ಲರಿಗೂ ಪ್ರೇರಣೆ ಆಗಬೇಕು ಎಂದರು.
ಶರಣ ಲದ್ದಿ ಸೋಮಣ್ಣ ಯಾವಾಗಲೂ ಕಾಯಕ ನಿರತರಾಗಿರುತ್ತಿದ್ದರು. ತಾವು ಯಾವುದೇ ಕಾಯಕ ಮಾಡಿದ್ದರು ಪರವಾಗಿಲ್ಲ. ಆದರೆ ಸೋಮಾರಿತನ ಮಾಡದೆ ನಿಷ್ಠಯಿಂದ ಮಾಡಿದ ಕಾಯಕದಿಂದ ಬಂದ ಸಂಪಾದನೆಯಿಂದ ಗುರು&ಲಿಂಗ&ಜಂಗಮಕ್ಕೆ ದಾಸೋಹ ಮಾಡಬೇಕು ಎಂದು ಹೇಳಿದರು.
ಗ್ರಾಮದಲ್ಲಿ ಎಲ್ಲರೂ ಸೇರಿ ಭವ್ಯವಾದ ಶ್ರೀ ಸೋಮೇಶ್ವರ ದೇವಸ್ಥಾನ ನಿರ್ಮಿಸಿ ಕಳಸಾರೋಹಣ ಮಾಡುತ್ತಿರುವುದು ಸಂತಸ ತಂದಿದೆ ಎಂದರು.
ಡಾ.ಇಂದ್ರಜಿತರಾವ ಪಂಚಾಳ ಅಧ್ಯತೆ ವಹಿಸಿದ್ದರು. ಮಾಜಿ ಸೈನಿಕ ಗೋಪಾಳ ರಾವ ಮಾತನಾಡಿದರು.
ಅನಿಲಕುಮಾರ ಜಗತಾಪ, ಚಂದ್ರಕಾಂತ ಪಾಟೀಲ, ಸುನಿಲಕುಮಾರ ಜಗತಾಪ, ಶಿವರಾಜ ಮಾಳಚಾಪುರೆ, ವಿಜಯಕುಮಾರ ಇಂಚೂರೆ, ಅನಿಲಕುಮಾರ ಸಾಳಂಕೆ ಇದ್ದರು. ರವೀಂದ್ರ ಪಾಟೀಲ ಸ್ವಾಗತಿಸಿದರು. ವಿಶ್ವ ಎಸ್.ಟೋಕರೆ ನಿರೂಪಣೆ ಮಾಡಿದರು.