ತಾಯಿ ಆರೈಕೆ ಮಾಡಿದರೆ ಬದುಕು ಸಾರ್ಥಕ

ಔರಾದ್​ ತಾಲೂಕಿನ ವಡಗಾಂವ(ದೇ)ದಲ್ಲಿ ಭಾನುವಾರ ಆಯೋಜಿಸಿದ್ದ ವಿಶ್ವ ತಾಯಂದಿರ ದಿನ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮದಲ್ಲಿ ತಾಯಂದಿರನ್ನು ಸನ್ಮಾನಿಸಲಾಯಿತು. ನಸೀಮಾ ಬೇಗಂ, ಸೀರಾಜ್​ ಬೇಗಂ, ಖಾಜಾ ಖಲಿಲುಲ್ಲಾ, ಶ್ರೀದೇವಿ ಗೌಡ, ಮುಖ್ಯಗುರು ಸವಿತಾ ಪಾಟೀಲ್​, ಡಾ.ಸಿದ್ದರಡ್ಡಿ , ನವೀಲಕುಮಾರ ಉತ್ಕಾರ, ಚಂದ್ರಕಾಂತ ಫುಲೆ, ಬಸವ ಚಿಕಲಿಂಗೆ, ಕಲೀಮ ಉಲ್ಲಾ, ಸೆಫಿಯುಲ್ಲಾ, ಇದ್ದರು.

Published on
ಔರಾದ್​: ತಾಯಿಗಿಂತ ಮಿಗಿಲಾದ ಶಕ್ತಿ ಇನ್ನೊಂದಿಲ್ಲ. ಪ್ರತಿಯೊಬ್ಬರೂ ಜನ್ಮ ನೀಡಿದ ತಾಯಿಗೆ ನೋವು ಕೊಡದಂತೆ ಒಳ್ಳೆಯ ರೀತಿಯಲ್ಲಿ ಆರೈಕೆ ಮಾಡಿದಾಗ ಮಾತ್ರ ಮಾನವನ ಬದುಕು ಸಾರ್ಥಕವಾಗುತ್ತದೆ ಎಂದು ಜೋಜನಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಸವಿತಾ ಪಾಟೀಲ್​ ಹೇಳಿದರು.
ವಡಗಾಂವ(ದೇ)ದಲ್ಲಿ ಕೆಎಎಸ್​ ಅಧಿಕಾರಿ ಖಾಜಾ ಖಲಿಲುಲ್ಲಾ ಗೆಳೆಯರ ಬಳಗದಿಂದ ಭಾನುವಾರ ಆಯೋಜಿಸಿದ್ದ ವಿಶ್ವ ತಾಯಂದಿರ ದಿನ ಮತ್ತು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಪಡೆದ ವಿದ್ಯಾರ್ಥಿಗಳ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದದರು.
ಸಂಪನ್ಮೂಲ ಶಿಕ್ಷಕಿ ಸಿರಾಜ್​ ಬೇಗಂ ಮಾತನಾಡಿ, ತಾಯಿಯ ಋಣ ಈ ಜನ್ಮದಲ್ಲಿ ತೀರಿಸಲು ಸಾಧ್ಯವಿಲ್ಲ. ಮಕ್ಕಳ ಒಳ್ಳೆಯದರಲ್ಲಿಯೇ ತನ್ನ ಒಳಿತನ್ನು ಕಂಡು ಸಂತಸಪಡುವ ತಾಯಿಯ ಮಹಿಮೆ ಅಪಾರವಾಗಿದೆ ಎಂದರು.
ಸಂತಪುರ ಸಿದ್ದರಾಮೇಶ್ವರ ಕಾಲೇಜಿನ ಪ್ರಾಂಶುಪಾಲ ನವೀಲಕುಮಾರ ಉತ್ಕಾರ ಪ್ರಾಸ್ತಾವಿಕ ಮಾತನಾಡಿದರು. ನಸೀಮಾ ಬೇಗಂ, ಕೆಎಎಸ್​ ಅಧಿಕಾರಿ ಖಾಜಾ ಖಲಿಲುಲ್ಲಾ, ಶ್ರೀದೇವಿ ಗೌಡ, ಇರ್ಫಾನಾ ಬೇಗಂ, ಸುವರ್ಣ ಫುಲೆ, ರಜೀಯಾ ಬೇಗಂ, ಡಾ.ಸಿದ್ದರೆಡ್ಡಿ , ನವೀಲಕುಮಾರ ಉತ್ಕಾರ, ಚಂದ್ರಕಾಂತ ಫುಲೆ, ಲಕ್ಷಿ$್ಮಬಾಯಿ ಫುಲೆ, ಕಲೀಮ ಉಲ್ಲಾ, ಸೆಫಿಯುಲ್ಲಾ, ಓಂಕಾರ ಮೇತ್ರೆ, ಬಬಲ್ಲೂಖಾನ್​ ಇದ್ದರು. ಪಿಡಿಒ ಚಂದ್ರಕಾಂತ ಫುಲೆ ಸ್ವಾಗತಿಸಿದರು. ಬಸವ ಚಿಕಲಿಂಗೆ ನಿರೂಪಣೆ ಮಾಡಿದರು.
ಸುಮಾರು 100ಕ್ಕಿಂತ ಹೆಚ್ಚಿನ ತಾಯಂದಿರಿಗೆ ಉಡಿತುಂಬಿ ಸನ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅಗ್ರಶ್ರೇಣಿ ಪಡೆದವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net