ಸಕಾರಾತ್ಮಕ ಚಿಂತನೆಯಿಂದ ಬದುಕು ಸುಂದರ Campaign

ಹುಳಿಯಾರಿನ Campaign ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ನಶಾಮುಕ್ತರಾಗುವ ಮಹಾ ಅಭಿಯಾನದಲ್ಲಿ ಕೆಪಿಎಸ್​ ಕಾಲೇಜಿನ ಉಪನ್ಯಾಸಕ ಶಶಿಭೂಷಣ್​, ಪಪಂ ಅಧ್ಯೆ ಪ್ರೀತಿ ರಾಘವೇಂದ್ರ, ನಿವೃತ್ತ ಶಿಕ್ಷಕ ತಿಮ್ಮಯ್ಯ, ಯೋಗ ತರಬೇತುದಾರ ಎಚ್​.ಡಿ.ದುರ್ಗರಾಜ್​ ಇದ್ದರು.
ಹುಳಿಯಾರಿನ Campaign ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ನಶಾಮುಕ್ತರಾಗುವ ಮಹಾ ಅಭಿಯಾನದಲ್ಲಿ ಕೆಪಿಎಸ್​ ಕಾಲೇಜಿನ ಉಪನ್ಯಾಸಕ ಶಶಿಭೂಷಣ್​, ಪಪಂ ಅಧ್ಯೆ ಪ್ರೀತಿ ರಾಘವೇಂದ್ರ, ನಿವೃತ್ತ ಶಿಕ್ಷಕ ತಿಮ್ಮಯ್ಯ, ಯೋಗ ತರಬೇತುದಾರ ಎಚ್​.ಡಿ.ದುರ್ಗರಾಜ್​ ಇದ್ದರು.
Published on

ಹುಳಿಯಾರು:

ಸಕಾರಾತ್ಮಕ ಚಿಂತನೆಯಿಂದ ಬದುಕು ಸುಂದರವಾಗುತ್ತದೆ. ನಮ್ಮಲ್ಲಿರುವುದರಲ್ಲೇ

Campaign

ಸಂತೋಷ ಹಾಗೂ ಖುಷಿಯನ್ನು ಕಾಣುವುದು ಅತ್ಯಂತ ಮುಖ್ಯ ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಮುಖ್ಯಸ್ಥೆ ಗೀತಾ ತಿಳಿಸಿದರು.

ಹೋಬಳಿಯ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ "ನಶಾಮುಕ್ತರಾಗುವ ಮಹಾ ಅಭಿಯಾನ ಉದ್ಘಾಟಿಸಿ ಮಾತನಾಡಿ, ಆಧ್ಯಾತ್ಮದಡೆಗೆ ಹೆಚ್ಚಿನ ಗಮನ ನೀಡಿ, ಗುಣ ಮತ್ತು ಶ್ರೇಷ್ಠ ಮೌಲ್ಯಗಳಿಗೆ ಬೆಲೆ ಕೊಡುವ ಮೂಲಕ ಜಗತ್ತಿಗೆ ಆಧ್ಯಾತ್ಮದ ಸಂದೇಶ ನೀಡಿದ ನಮ್ಮ ದೇಶದಲ್ಲಿ, ಇಂದಿನ ಯುವಜನತೆ ವಿದೇಶಿ ಸಂಸತಿಯ ವ್ಯಾಮೋಹಕ್ಕೆ ಒಳಗಾಗಿ ಮಾದಕ ವಸ್ತುಗಳ ವ್ಯಸನಿಗಳಾಗುತ್ತಿರುವುದು ತೀವ್ರ ನೋವಿನ ಸಂಗತಿ ಎಂದು ವಿಷಾದಿಸಿದರು.
ಮಾದಕ ವ್ಯಸನಕ್ಕೆ ತುತ್ತಾಗುತ್ತಿರುವ ಯುವಕರನ್ನು ಸೂಕ್ತ ಜಾಗೃತಿಯ ಮೂಲಕ ಪಾರು ಮಾಡಬೇಕಿದೆ. ಪ್ರತಿಯೊಬ್ಬರೂ ತಮ್ಮೊಳಗಿರುವ ಶಕ್ತಿಯನ್ನು ಕಂಡುಕೊಳ್ಳಬೇಕು.
ಶಾಂತಿ ಮತ್ತು ಆನಂದ ಪಡೆಯಲು ಸಾಧನೆಯೇ ಸೂಕ್ತ ಮಾರ್ಗ. ಬದುಕನ್ನು ಶ್ರೇಷ್ಠ ಹಾಗೂ ಆದರ್ಶಮಯವಾಗಿಸಿಕೊಳ್ಳಲು ನಮ್ಮ ಆಲೋಚನೆ ಮತ್ತು ಚಿಂತನೆಗಳನ್ನು ಬದಲಾಯಿಸಿಕೊಳ್ಳಬೇಕು.
ಪ್ರಕೃತಿಯನ್ನು ಮಲಿನಗೊಳಿಸುವುದು ನಮ್ಮ ವಿಕೃತಿಯನ್ನು ತೋರಿಸುತ್ತದೆ. ವಿಶಾಲ ಮನೋಭಾವ ಮತ್ತು ಶಾಂತ ಚಿತ್ತದಿಂದ ಸಾಗಿದರೆ ಎಲ್ಲವೂ ಸುಂದರವಾಗುತ್ತದೆ. ಇತರರು ಅನುಕರಿಸುವಂತೆ ನಮ್ಮ ಬದುಕು ಇರಬೇಕು ಹಾಗೂ ದಯೆ, ಕರುಣೆಯೊಂದಿಗೆ ಜೀವನ ಸಾಗಿಸಬೇಕು ಎಂದು ಕರೆ ನೀಡಿದರು.
ಧ್ಯಾನ ಮತ್ತು ಯೋಗದ ಮೂಲಕ ಮನಶಾಂತಿ ಹಾಗೂ ವಿಶ್ವಶಾಂತಿಯತ್ತ ಸಾಗುವುದು ವಿಶ್ವವಿದ್ಯಾಲಯದ ಮುಖ್ಯ ಉದ್ದೇಶವಾಗಿದೆ. ನಮ್ಮ ವಿದ್ಯಾಲಯದಿಂದ ದೇಶದಾದ್ಯಂತ ಆ.2 ರಿಂದ 20 ರವರೆಗೆ ನಶಾಮುಕ್ತ ಮಹಾ ಅಭಿಯಾನ ನಡೆಯುತ್ತಿದ್ದು, ದೇಶದ 10 ಕೋಟಿ ಜನರನ್ನು ನಶಾಮುಕ್ತರಾಗಿಸುವ ಗುರಿ ಹೊಂದಲಾಗಿದೆ. ಇದರ ಭಾಗವಾಗಿ ಶಾಲಾ-ಕಾಲೇಜುಗಳಲ್ಲಿ ಪ್ರತಿಜ್ಞಾವಿಧಿ ಬೋಧಿಸುವ ಕಾರ್ಯಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net