ಇವೆಲ್ಲವೂ ವಿಶ್ವವಿದ್ಯಾಲಯದ ಹಂತದಲ್ಲಿ ನಡೆಯಲಿದೆ. ಆದರೆ, ಇಂದು ದೇಶದ ಶೇ.20 ರಿಂದ 30 ರಷ್ಟು ಯುವಕರು ಮದ್ಯಪಾನ, ಧೂಮಪಾನ ಮತ್ತು ಡ್ರಗ್ಸ್‌ನ ದಾಸರಾಗಿ ಜೀವ ಮತ್ತು ಜೀವನ ಕಳೆದುಕೊಳ್ಳುತ್ತಿರುವುದು ಸಮೀಕ್ಷೆಗಳಿಂದ ತಿಳಿದುಬಂದಿದೆ. ಈ ಕಾರಣದಿಂದ ರಾಷ್ಟ್ರಮಟ್ಟದಲ್ಲಿ ಅಭಿಯಾನ ಕೈಗೊಳ್ಳುವ ಉದ್ದೇಶ ಹೊಂದಲಾಗಿದೆ ಎಂದರು.