ನಗರದ ಬೆಮೆಲ್ ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡ ಮಿತ್ರರು ಆಶ್ರಯದಲ್ಲಿ 70ನೇ ರಾಜ್ಯೋತ್ಸವ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಸಾಂಸತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಮಾತನಾಡಿ, ಕೆಜಿಎಫ್ ಒಂದೆಡೆ ತಮಿಳು ಮತ್ತೊಂದೆಡೆ ತೆಲುಗು ಭಾಷೆಗಳನ್ನಾಡುವ ಜನರಿಂದ ಸುತ್ತುವರೆದಿದ್ದು, ಇಲ್ಲಿ ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಕೆಲಸವಾಗಬೇಕಿದ್ದು, ಈ ಕಾರ್ಯಕ್ಕೆ ಅಗತ್ಯವಾದ ನೆರವು ಮತ್ತು ಸಹಕಾರವನ್ನು ನೀಡುವುದಾಗಿ ತಿಳಿಸಿದರು.