ಜಾತಿ, ಮತ, ಪಂಥ ಭೇದ ಬಿಟ್ಟು ಒಗ್ಗಟ್ಟಾಗಿರಿ / VIJAYAPUR

ವಿಜಯಪುರದ ಬಸವಕಲ್ಯಾಣ ಮಠದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯಶಿಬಿರದಲ್ಲಿ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಬಸವಕಲ್ಯಾಣ ಮಠದ ಕಿರಿಯ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಇತರರು ಇದ್ದರು.
ವಿಜಯಪುರದ ಬಸವಕಲ್ಯಾಣ ಮಠದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯಶಿಬಿರದಲ್ಲಿ ರಾಜ್ಯ 5ನೇ ಹಣಕಾಸು ಆಯೋಗದ ಅಧ್ಯಕ್ಷ ಸಿ.ನಾರಾಯಣಸ್ವಾಮಿ ಅವರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಬಸವಕಲ್ಯಾಣ ಮಠದ ಕಿರಿಯ ಶ್ರೀ ಸದಾಶಿವ ಸ್ವಾಮೀಜಿ ಹಾಗೂ ಇತರರು ಇದ್ದರು.
Published on
ವಿಜಯಪುರ : ಬಸವಣ್ಣನ ತತ್ವಚಿಂತನೆಗಳು, ಶಿವಕುಮಾರಶ್ರೀಗಳ ಜೀವನದ ನಡೆ, ಬಸವಕಲ್ಯಾಣ ಮಠಾಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿ ಅವರ ಬದುಕು ಆದರ್ಶಮಯ ಎಂದು ಶ್ರೀವನಕಲ್ಲು ಮಲ್ಲೇಶ್ವರ ಸಂಸ್ಥಾನ ಮಠದ ಪೀಠಾಧ್ಯಕ್ಷ ಶ್ರೀ ಬಸವ ರಮಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಬಸವಕಲ್ಯಾಣ ಮಠದಲ್ಲಿ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಶ್ರೀಗಳ 119ನೇ ಜನ್ಮದಿನೋತ್ಸವ, ಬಸವಕಲ್ಯಾಣ ಮಠದ 37ನೇ ಪೀಠಾರೋಹಣ ಮಹೋತ್ಸವ, ಬಸವ ಜಯಂತಿ, ಎಂ.ಮರಿಯಮ್ಮ ಅವರ 9ನೇ ಸ್ಮರಣೋತ್ಸವ, ಶ್ರೀ ಮಹದೇವ ಸ್ವಾಮೀಜಿ 67ನೇ ವರ್ಧಂತ್ಯೋತ್ಸವ ಹಾಗೂ ಗುರುಪೂರ್ಣಿಮೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ರಮಾನಂದಶ್ರೀ, ಶರಣರು ಶ್ರದ್ಧೆ ಹಾಗೂ ಭಕ್ತಿಯಿಂದ ಶಿವಪೂಜೆ ನೆರವೇರಿಸಿದಾಗ ಪಾಪಗಳೆಲ್ಲವೂ ಕಳೆದು, ಅಪಮೃತ್ಯು ಸಂಭವಿಸದೆ ಮೋಕ್ಷ ದೊರೆಯುತ್ತದೆ ಎಂದು ತಿಳಿಸಿದರು.
ಬಸವಕಲ್ಯಾಣ ಮಠದ ಅಧ್ಯಕ್ಷ ಶ್ರೀ ಮಹದೇವ ಸ್ವಾಮೀಜಿ ಮಾತನಾಡಿ, ಜಾತಿ, ಮತ, ಪಂಥ ಹಾಗೂ ಭೇದ&ಭಾವವಿಲ್ಲದೆ ಒಗ್ಗಟ್ಟಿನಿಂದ ಸಮಾಜಮುಖಿಯಾಗಿರಬೇಕು. ಭಕ್ತರು ಶ್ರೀಮಠದ ಏಳಿಗೆ ಹಾಗೂ ಕಿರಿಯ ಶ್ರೀ ಸದಾಶಿವ ಸ್ವಾಮೀಜಿಗೆ ಸಹಕಾರ ನೀಡಬೇಕು ಎಂದು ಕೋರಿದರು.
ಅಲಂಕೃತ ಮೆರವಣಿಗೆ: ಬೆಳಗ್ಗೆ 8.30ಕ್ಕೆ ಬಸವೇಶ್ವರನಗರದ ವಿನಾಯಕ ದೇವಾಲಯದಿಂದ ಶ್ರೀ ಮಹದೇವ ಸ್ವಾಮೀಜಿ, ಶ್ರೀ ಬಸವ ರಮಾನಂದ ಸ್ವಾಮೀಜಿ ಹಾಗೂ ಶ್ರೀ ಸದಾಶಿವ ಸ್ವಾಮೀಜಿ ಅವರನ್ನು ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಪಲ್ಲಕ್ಕಿ ಮೆರವಣಿಗೆ ಮಾಡಿ ಮಠಕ್ಕೆ ಕರೆತರಲಾಯಿತು.
ಉಚಿತ ಆರೋಗ್ಯ ತಪಾಸಣೆ: ದೃಷ್ಟಿ ಆಸ್ಪತ್ರೆ, ಅಪೋಲೋ ಮೆಡಿಕಲ್​ ಸ್ಟೋರ್​ ಹಾಗೂ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರದ ಜಂಟಿ ಆಶ್ರಯದಲ್ಲಿ ಸಾರ್ವಜನಿಕರಿಗೆ ಕಣ್ಣಿನ ತಪಾಸಣೆ, ರಕ್ತದೊತ್ತಡ ಹಾಗೂ ಮಧುಮೇಹ ತಪಾಸಣೆ ನಡೆಸಲಾಯಿತು. ಡಾ.ಸಂತೋಷ್​ ನೇತೃತ್ವದಲ್ಲಿ ಉಚಿತ ಔಷಧ ವಿತರಿಸಲಾಯಿತು. ವಿಜಯಪುರದ ಬಸವಕಲ್ಯಾಣ ಮಠದ ಸಂಪೂರ್ಣ ಮಾಹಿತಿ ಒಳಗೊಂಡ ಕ್ಯೂ ಆರ್​ ಕೋಡ್​ ಸ್ಕಾ$ನರ್​ ಬಿಡುಗಡೆಗೊಳಿಸಲಾಯಿತು.
ಸಾಧಕರಿಗೆ ಸನ್ಮಾನ: ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ನಿವೃತ್ತ ಯೋಧ ಎಚ್​.ಆರ್​.ನಾರಾಯಣಪ್ಪ, ಬೊಮ್ಮಸಂದ್ರದ ವಿ.ಎಂ.ಗುಮ್​ಕಾರ್​, ಕೆಂಗೇರಿಯ ಪ್ರಕಾಶ್​ ಹಾಗೂ ವಿಶ್ವನಾಥ್​, ಅರ್ಪುದರಾಜ್​, ಜಾಲಹಳ್ಳಿ ಬಿ.ಎಂ.ಶಂಕರಪ್ಪ, ಪಿ.ಸಿ.ರಮೇಶ್​, ವಸಂತ್​ ಕುಮಾರ್​, ಉದ್ಯಮಿ ರಾಜಪ್ಣ ಅವರನ್ನು ಸನ್ಮಾನಿಸಲಾಯಿತು.
ಅಂಡ್ರಕಳ್ಳಿ ಶ್ರೀ ಪಂಚಾಕ್ಷರಿ ಸ್ವಾಮೀಜಿ, ಚಕ್ರಭಾವಿ ಮಠದ ಶ್ರೀ ಸಿದ್ದಲಿಂಗ ಸ್ವಾಮೀಜಿ, ದೊಡ್ಡಬಳ್ಳಾಪುರ ಖಾನಿಮಠದ ಶ್ರೀ ಬಸವರಾಜ ಸ್ವಾಮೀಜಿ, ಶ್ರೀ ಬಸವೇಶ್ವರ ಮಹಾಸಂಸ್ಥಾನ ಮಠದ ಶ್ರೀ ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿ, ಮರಳವಾಡಿ ಮಠದ ಶ್ರೀ ಮೃತ್ಯುಂಜಯ ಸ್ವಾಮೀಜಿ, ಶ್ರೀ ಶಿವಲಿಂಗ ಸ್ವಾಮೀಜಿ, ದೇವನಹಳ್ಳಿ ಪುರಸಭೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹನುಮಂತಪ್ಪ, ಕವಿ ಮ.ಸುರೇಶ್​ ಬಾಬು, ಭಾರತೀಯ ಸೇವಾ ಸಮಿತಿ ರಾಮಚಂದ್ರ, ಜಾಂಬವ ಯುವಸೇನೆ ಗೌರವಾಧ್ಯಕ್ಷ ನಾರಾಯಣಸ್ವಾಮಿ, ಅಂಕತಟ್ಟಿ ನಾರಾಯಣಸ್ವಾಮಿ, ಬೇಕರಿ ಆನಂದಪ್ಪ, ಅಕ್ಕನ ಬಳಗದ ದಾಕ್ಷಾಯಣಮ್ಮ, ಅಂಬಾಭವಾನಿ, ಭಕ್ತರಹಳ್ಳಿ ಬಿ.ವಿ.ಬಸವರಾಜು, ಮಠದ ಕಾರ್ಯದರ್ಶಿ ಜಯಕುಮಾರ್​, ಬಿ.ರಾಜಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net