8ಕ್ಕೆ ಜೆಡಿಎಸ್​ ಶಕ್ತಿ ಪ್ರದರ್ಶಿಸೋಣ / DODABALLAPUR

ಜೆಡಿಎಸ್​ ಬೆಳ್ಳಿಹಬ್ಬದ ಅಂಗವಾಗಿ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಹಿರಿಯ ಮುಖಂಡ ಟಿ.ಹುಸ್ಕೂರು ಆನಂದ್​ ಮಾತನಾಡಿದರು.  ಮುಖಂಡರಾದ ಚನ್ನೇಗೌಡ, ಹನುಮಂತರಾಜು, ರಾಜಣ್ಣ, ಸುರೇಶ, ಮೂರ್ತಿ, ನಾರಾಯಣಸ್ವಾಮಿ, ನಾರಾಯಣ್​, ರಾಜು, ಹನುಮಂತರಾಯಪ್ಪ, ಅಶ್ವತ್ಥ್​, ನಾಗರಾಜ್​, ಜಗದೀಶ್​ ಇದ್ದರು.
ಜೆಡಿಎಸ್​ ಬೆಳ್ಳಿಹಬ್ಬದ ಅಂಗವಾಗಿ ದೊಡ್ಡಬಳ್ಳಾಪುರ ತಾಲೂಕು ದೊಡ್ಡಬೆಳವಂಗಲದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಹಿರಿಯ ಮುಖಂಡ ಟಿ.ಹುಸ್ಕೂರು ಆನಂದ್​ ಮಾತನಾಡಿದರು. ಮುಖಂಡರಾದ ಚನ್ನೇಗೌಡ, ಹನುಮಂತರಾಜು, ರಾಜಣ್ಣ, ಸುರೇಶ, ಮೂರ್ತಿ, ನಾರಾಯಣಸ್ವಾಮಿ, ನಾರಾಯಣ್​, ರಾಜು, ಹನುಮಂತರಾಯಪ್ಪ, ಅಶ್ವತ್ಥ್​, ನಾಗರಾಜ್​, ಜಗದೀಶ್​ ಇದ್ದರು.
Published on
ದೊಡ್ಡಬಳ್ಳಾಪುರ : ಪಕ್ಷ ವಿರೋಧಿ ಚಟುವಟಿಕೆ ಮಾಡುವ ಬಣ ಒಂದಾದರೆ ಪಕ್ಷಕ್ಕೆ ನಿಷ್ಠ್ಠಾವಂತರಾಗಿ ದುಡಿಯುವ ಬಣ ಮತ್ತೊಂದಾಗಿದೆ. ಈ ಎರಡೂ ಬಣಗಳನ್ನು ಒಟ್ಟಾಗಿ ಮುನ್ನಡೆಸಿಕೊಂಡು ಹೋಗುವ ದೊಡ್ಡತನವನ್ನು ಜೆಡಿಎಸ್​ ಜಿಲ್ಲಾಧ್ಯಕ್ಷರು ತೋರಬೇಕು ಎಂದು ಪಕ್ಷದ ಹಿರಿಯ ಮುಖಂಡ ಹುಸ್ಕೂರು ಆನಂದ್​ ಹೇಳಿದರು.
ದೊಡ್ಡಬೆಳವಂಗಲದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜೆಡಿಎಸ್​ನ ಬೆಳ್ಳಿಹಬ್ಬದ ಸಮಾಲೋಚನಾ ಸಭೆಯಲ್ಲಿ ಮಾತನಾಡಿ, ಮೇ 8ರಂದು ಜೆಡಿಎಸ್​ ಯುವ ಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ನೇತೃತ್ವದ ಸಭೆಯಲ್ಲಿ ನಿಷ್ಠಾವಂತ ಕಾರ್ಯಕರ್ತರು ಭಾಗವಹಿಸಿ ಸಮಾವೇಶ ಯಶಸ್ವಿಗೊಳಿಸಬೇಕು. ವಿರೋಧಿ ಚಟುವಟಿಕೆ ಮಾಡಿದವರಿಗೆ ತಾಲೂಕಿನ ಜೆಡಿಎಸ್​ ಪ್ರಮುಖರಾಗಿರುವ ಬಿ.ಮುನೇಗೌಡ ಅವರೊಂದಿಗೆ ಚರ್ಚೆ ನಡೆಸಿ ಒಮ್ಮತದ ತೀರ್ಮಾನ ಕೈಗೊಳ್ಳಬೇಕು. ಜೆಡಿಎಸ್​ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಭಾಗವಹಿಸುವ ಮೂಲಕ ನಮ್ಮ ಶಕ್ತಿ ತೋರಿಸಬೇಕು ಎಂದರು.
ಜೆಡಿಎಸ್​ ಯುವ ಮುಖಂಡ ಶ್ರೀನಿವಾಸಗೌಡ ಮಾತನಾಡಿ, ಮೇ 8ರಂದು ಭಗತ್​ಸಿಂಗ್​ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಯುವ ಟಕದ ಅಧ್ಯಕ್ಷ ನಿಖಿಲ್​ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ನಾವು ಯಾವ ಬಣದ ಯಾರ ವಿರೋಧಿಗಳೂ ಅಲ್ಲ. ಎಲ್ಲರ ಜತೆಗೂಡಿ ಪಕ್ಷ ಸಂಟನೆ ಮಾಡಬೇಕು ಎನ್ನುವುದಷ್ಟೇನಮ್ಮ ಆಗ್ರಹ. ಅಂದು ನಡೆಯುವ ಬೆಳ್ಳಿಹಬ್ಬ ಸಮಾರಂಭದಲ್ಲಿ ಎಲ್ಲರೂ ಭಾಗವಹಿಸುತ್ತೇವೆ. ಆದರೆ, ವೇದಿಕೆ ಹಂಚಿಕೊಳ್ಳುವುದಿಲ್ಲ ಎಂದರು.
ವಕೀಲ ಸತೀಶ್​ ಮಾತನಾಡಿ, ತಾಲೂಕಿನಲ್ಲಿ 35 ವರ್ಷಗಳಿಂದ ನಿರಂತರವಾಗಿ ಪಕ್ಷ ಕಟ್ಟಿದ್ದೇವೆ. ಇದುವರೆಗೂ ಯಾವುದೇ ಅಧಿಕಾರ ಬಯಸಿಲ್ಲ. ತಾಲೂಕಿನಲ್ಲಿ ಬಮುಲ್​ ಚುನಾವಣೆಯಲ್ಲಿ ಸೋಲಾಗಿರುವುದು ನೋವುಂಟುಮಾಡಿದೆ. ಹುಸ್ಕೂರು ಆನಂದ್​ ಬಮುಲ್​ ಚುನಾವಣೆಗೆ ಸ್ಪರ್ಧಿಸಿದ್ದರು. ಆದರೆ, ಅವರಿಗೆ ಕೊಟ್ಟ ಬಳುವಳಿ ಸೋಲು. ಇವರ ಸೋಲಿಗೆ ಕಾರಣರಾದವರೇ ಇಂದು ಪಕ್ಷದಲ್ಲಿ ಅಧಿಕಾರ ಪಡೆದಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net