ಪೌರಕಾರ್ಮಿಕರನ್ನು ಗೌರವಿಸೋಣ / DODABALLAPUR

ದೊಡ್ಡಬಳ್ಳಾಪುರದ ಡಾ.ರಾಜ್​ ಕಲಾ ಮಂದಿರದಲ್ಲಿ ಮಹಿಳಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್​.ರಮೇಶ್​, ಸಂಘಟನಾ ಕಾರ್ಯದರ್ಶಿ ಅರವಿಂದ್​, ರಾಜ್ಯ ಮುಖಂಡ ಪಿ.ವಾಸು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಾಧಮ್ಮ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜಿತ್​ ಗೌಡ, ತಾಲೂಕು ಘಟಕದ ಅಧ್ಯಕ್ಷ ವಿನಯ್​ ಆರಾದ್ಯ ಇದ್ದರು.
ದೊಡ್ಡಬಳ್ಳಾಪುರದ ಡಾ.ರಾಜ್​ ಕಲಾ ಮಂದಿರದಲ್ಲಿ ಮಹಿಳಾ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು. ಕರವೇ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್​.ರಮೇಶ್​, ಸಂಘಟನಾ ಕಾರ್ಯದರ್ಶಿ ಅರವಿಂದ್​, ರಾಜ್ಯ ಮುಖಂಡ ಪಿ.ವಾಸು, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ರಾಧಮ್ಮ, ಜಿಲ್ಲಾ ಯುವ ಘಟಕದ ಅಧ್ಯಕ್ಷ ರಂಜಿತ್​ ಗೌಡ, ತಾಲೂಕು ಘಟಕದ ಅಧ್ಯಕ್ಷ ವಿನಯ್​ ಆರಾದ್ಯ ಇದ್ದರು.
Published on
ದೊಡ್ಡಬಳ್ಳಾಪುರ : ನಗರದ ಸ್ವಚ್ಛತೆಯಲ್ಲಿ ಪೌರಕಾರ್ಮಿಕರ ಪಾಲು ಹೆಚ್ಚಿದ್ದು, ಅವರನ್ನು ಗೌರವಯುತವಾಗಿ ಕಾಣುವ ಮನೋಭಾವ ಜನರಲ್ಲಿರಬೇಕು ಎಂದು ನಗರಸಭೆ ಮಾಜಿ ಸದಸ್ಯೆ ಪ್ರಮೀಳಾ ಮಹದೇವನ್​ ಹೇಳಿದರು.
ನಗರದ ಡಾ.ರಾಜ್​ ಕಲಾ ಮಂದಿರದಲ್ಲಿ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆಯಿಂದ ಮಂಗಳವಾರ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಪೌರಕಾರ್ಮಿಕರಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಹಿಳಾ ದಿನ ಒಂದು ದಿನಕ್ಕೆ ಸೀಮಿತವಲ್ಲ. ಪ್ರತಿದಿನವೂ ಮಹಿಳಾ ದಿನಾಚರಣೆ. ಮಹಿಳಾ ಪೌರಕಾರ್ಮಿಕರಿಗೂ ಸ್ವಾಭಿಮಾನವಿದೆ. ಅವರನ್ನು ಗೌರವಿಸುವುದು ಅಗತ್ಯ. ಮಹಿಳೆಯರಲ್ಲಿ ಪ್ರಶ್ನಿಸುವ ಸಾಮರ್ಥ್ಯ ಬರಬೇಕು. ಮಹಿಳೆಯರಿಗೆ ಯಾವ ಹಕ್ಕುಗಳು ಸುಲಭವಾಗಿ ದೊರೆತಿದ್ದಲ್ಲ. ಪ್ರತಿಯೊಂದು ಹಕ್ಕುಗಳಿಗೂ ಹೋರಾಟದ ಇತಿಹಾಸವಿದೆ. ಮಹಿಳೆಯರೂ ಚುನಾವಣೆಗಳಲ್ಲಿ ಪಾಲ್ಗೊಳ್ಳಬೇಕು. ಸಾಮಾನ್ಯ ಜನರ ಪ್ರಶ್ನೆಗೂ, ಅಧಿಕಾರ ಇರುವವರ ಪ್ರಶ್ನೆಗೂ ಬಹಳ ವ್ಯತ್ಯಾಸವಿದೆ. ಸಮಾಜದಲ್ಲಿ ತುಳಿಯುವವರ ಸಂಖ್ಯೆ ಹೆಚ್ಚಿದೆ. ಅದನ್ನೆಲ್ಲ ಮೆಟ್ಟಿ ಸಮಾಜದ ಮುನ್ನೆಲೆಗೆ ಮಹಿಳೆಯರು ಬರಬೇಕು ಎಂದರು.
ಉಪನ್ಯಾಸಕ ರವಿಕಿರಣ್​ ಮಾತನಾಡಿ, ಮಾಡುವ ಕೆಲಸದಲ್ಲಿ ಶ್ರದ್ಧೆ ಇರಬೇಕು. ಸಮಾಜ ಮಹಿಳೆಯರ ವಿಷಯದಲ್ಲಿ ಮಿಶ್ರ ಪ್ರತಿಕ್ರಿಯೆ ನೀಡುತ್ತ ಬಂದಿದೆ. ಹೆಣ್ಣು ದೇವರೆಂದು ಪೂಜಿಸುವ ಸಮಾಜದಲ್ಲೆ ಸತಿ ಪದ್ಧತಿ ಜಾರಿಯಲಿತ್ತು. ಇಂದು ಸಮಾಜದ ಪ್ರಮುಖ ಸ್ತರಗಳಲ್ಲಿ ಮಹಿಳೆಯರಿದ್ದಾರೆ. ಹಿಂದೆ ಮಹಿಳೆಯರು ಸಾಮಾಜಿಕ, ಆರ್ಥಿಕ, ಶೈಕ್ಷಣಿಕವಾಗಿ ಶೋಷಣೆಗೆ ಒಳಗಾಗಿದ್ದವರು. ಮಹಿಳೆಯರು ಜಾಗೃತರಾಗಿ ಹಕ್ಕುಗಳ ದಕ್ಕಿಸಿಕೊಳ್ಳುವುದು, ಹಿಂದುಳಿದವರನ್ನು ಮೇಲೆತ್ತುವುದು ಮುಖ್ಯ. ಎಷ್ಟೋ ಸವಾಲುಗಳ ಮಧ್ಯೆ ಸ್ತ್ರೀ ಸಮಾಜ ಎದ್ದು ನಿಂತಿರುವುದು ಶ್ಲಾಘನೀಯ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net