ಸಿಂದಗಿ ನಗರದ ಎಚ್.ಜಿ. ಕಾಲೇಜ್ ಆವರಣದಲ್ಲಿ ನಡೆದ 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಮೊದಲ ಮಹಿಳಾ ಚಿಂತನಾ ಗೋಷ್ಠಿಯನ್ನು ಡಾ. ಲಕ್ಷ್ಮೀ ಅಲ್ಕೋಡ ಉದ್ಘಾಟಿಸಿದರು. ಸರ್ವಾಧ್ಯಕ್ಷ ಹ.ಮ. ಪೂಜಾರ, ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕು ಅಧ್ಯಕ್ಷ ವೈ.ಸಿ. ಮಯೂರ, ಡಾ. ಆನಂದ ಕುಲಕರ್ಣಿ, ಡಾ. ಸುನೀಲ ಕಲ್ಲೂರ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಡಾ. ಲಕ್ಷ್ಮೀ ದೇವಿ ಅಲ್ಕೋಡ ಹೇಳಿಕೆ
ಮಹಿಳಾ ಚಿಂತನ ಗೋಷ್ಠಿಗೆ ಚಾಲನೆ
ಸಿಂದಗಿ: ಪ್ರಸ್ತುತ ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರ ಬಗೆಗಿನ ಚಿಂತನಾ ಕೊರತೆ ಕಾಣುತ್ತಿದೆ ಎಂದು ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಲಕ್ಷ್ಮೀ ಅಲ್ಕೋಡ ಹೇಳಿದರು.
ನಗರದ ಎಚ್.ಜಿ. ಕಾಲೇಜ್ ಆವರಣದ ದಿ. ಎಂ.ಸಿ. ಮನಗೂಳಿ ವೇದಿಕೆಯಲ್ಲಿ ಮಂಗಳವಾರ ಮಧ್ಯಾಹ್ನ ಜರುಗಿದ 21ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಮಹಿಳಾ ಚಿಂತನ ಗೋಷ್ಠಿಗೆ ಚಾಲನೆ ನೀಡಿ ಮಾತನಾಡಿದರು.
ಮಹಿಳೆಯರ ಚಿಂತನೆಗೆ ಹೊಸ ಆಯಾಮದ ಅವಶ್ಯಕತೆಯಿದೆ. ಇಂದಿಗೂ ನಾವು ಬಾಲ್ಯ ವಿವಾಹಗಳ ವಿರುದ್ಧ ನಾವು ಧ್ವನಿ ಎತ್ತಲು ಆಗುತ್ತಿಲ್ಲ. ಸಮಾಜದಲ್ಲಿ ಮಹಿಳೆಯರು, ಪುರುಷರ ಸಹಕಾರದಿಂದಲೇ ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ ಎಂದರು.
ಮಹಿಳೆಯರ ಧ್ವನಿ ಕುರಿತು ಮಾತನಾಡಿದ ಡಾ. ದೀಪಮಾಲಾ ಪಾಟೀಲ, ವಚನ ಸಾಹಿತ್ಯದಲ್ಲಿ ಅಕ್ಕಮಹಾದೇವಿಯ ಗಟ್ಟಿ ಧ್ವನಿ ಕುರಿತು ಮಾತನಾಡಿದರು. ಹೊನವಾಡದ ಶಿಕ್ಷಕಿ ಶರಣಮ್ಮ ಹಾದಿಮನಿ ಮಾತನಾಡಿ, ಮಹಿಳೆಯರ ಸ್ಥಾನಮಾನ ಅಂದು-ಇಂದು ವಿಷಯ ಪ್ರಸ್ತಾಪಿಸಿ, ಮಹಿಳೆಯರನ್ನು ಕಾಣುವ ದೃಷ್ಟಿಕೋನ ಹಿಂದೆಂದಿಗಿಂತಲೂ ಪ್ರಸ್ತುತವಾಗಿ ಗೌರವ ಮೂಡಿಸಿದೆ ಎಂದರು.
ವಿಶ್ರಾಂತ ಪ್ರಾಚಾರ್ಯ ಡಾ. ವಿ.ಡಿ. ಐಹೊಳ್ಳಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯ ಸಾಹಿತಿಗಳನ್ನು ಜಿಲ್ಲಾ ಸಾಹಿತಿಗಳಾದ ಡಾ. ಎಂ.ಎಸ್. ಮಾಗಣಗೇರಿ, ರಾ.ಶಿ. ವಾಡೆದ, ಡಿ.ಬಿ. ಬಿರಾದಾರ, ಈರಣ್ಣ ಬೆಕಿನಾಳ, ಸಿದ್ಧರಾಮ ಉಪ್ಪಿನ, ಶಶಿಕಲಾ ಸೇರಿ ಮತ್ತಿತರರಿಗೆ ಸನ್ಮಾನಿಸಲಾಯಿತು.
ಸರ್ವಾಧ್ಯಕ್ಷ ಹ.ಮ. ಪೂಜಾರ, ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕು ಅಧ್ಯಕ್ಷ ವೈ.ಸಿ. ಮಯೂರ, ಡಾ. ಆನಂದ ಕುಲಕರ್ಣಿ, ಡಾ. ಸುನೀಲ ಕಲ್ಲೂರ, ಮುಕ್ತಾಯಕ್ಕ ಕತ್ತಿ, ಆಶಾ ಬಿರಾದಾರ ಇದ್ದರು. ಜಯಶ್ರೀ ಹಿರೇಮಠ ಸ್ವಾಗತಿಸಿದರು. ಡಾ. ಶೈಲಾ ಬಳಗಾನೂರ ನಿರೂಪಿಸಿದರು. ಡಿ.ಬಿ. ಬಿರಾದಾರ ವಂದಿಸಿದರು.
"
ಹನ್ನೆರಡನೇ ಶತಮಾನದಲ್ಲಿ ವರ್ಗ, ವರ್ಣ ಮತ್ತು ಲಿಂಗ ರಹಿತ ಸಮಾಜವನ್ನು ಕಟ್ಟಿದ ಬಸವಾದಿ ಪ್ರಮಥರ ವೈಚಾರಿಕ ನಿಲುವು ಎಂದೆಂದಿಗೂ ಪ್ರಸ್ತುತ. ಅವರು ವಚನಗಳ ಮೂಲಕ ಸ್ವಾಸ್ಥೃ ಸಮಾಜವನ್ನು ನಿರ್ಮಾಣ ಮಾಡಿದರು. ಅಂದಿನ ಕವಯತ್ರಿ ಅಕ್ಕ ಮಹಾದೇವಿ ತನ್ನ ದಿಟ್ಟ ನಿಲುವಿನ ಮೂಲಕ ಭವಿಷ್ಯದ ಕವಯತ್ರಿಯರಿಗೆ ಮಾರ್ಗದರ್ಶಕಳಾದಳು.