ಕಾರ್ಮಿಕರಿಗೆ ಗೌರವ ಸಲ್ಲಿಸೋಣ workers

ಕಾರ್ಮಿಕರಿಗೆ ಗೌರವ ಸಲ್ಲಿಸೋಣ workers
ಕಾರ್ಮಿಕರಿಗೆ ಗೌರವ ಸಲ್ಲಿಸೋಣ workers
Published on
ಮುಳಬಾಗಿಲು: ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ ಮೇಲೆ ಅವಲಂಭಿತವಾಗಿದೆ ಎಂದು ರಾಜ್ಯ ಬಹುಜನ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ, ದಲಿತ ಮುಖಂಡ ಸಂಗಸಂದ್ರ ವಿಜಯ್​ ಕುಮಾರ್​ ಹೇಳಿದರು.workers
ನಗರದ ನೇತಾಜಿ ಕ್ರೀಡಾಂಗಣದಲ್ಲಿ ಬಹುಜನ ಸಂಘಟನೆಗಳ ಒಕ್ಕೂಟ, ಕರ್ನಾಟಕ ಕಟ್ಟಡ ಮತ್ತು ಇತರೆ ನಿಮಾರ್ಣ ಕಾರ್ಮಿಕರ ಕಲ್ಯಾಣ ಸಂಘದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಮಿಕರ ದಿನಾಚರಣೆಯಲ್ಲಿ ಮಾತನಾಡಿ, ಪ್ರಥಮವಾಗಿ ಕ್ರಿ.ಶ.1800ರ ಸಮಯ ಅಮೆರಿಕದಲ್ಲಿ ಕೈಗಾರಿಕಾ ಕ್ರಾಂತಿ ಆರಂಭವಾಯಿತು ಎಂದರು.
ಬಂಡವಾಳಶಾಹಿಗಳು ಅರ್ನಿದಿಷ್ಟ ಅವಧಿಯ ತನಕ ದುಡಿಸಿಕೊಳ್ಳುತ್ತಿದ್ದರು, ಇದಕ್ಕೆ ವಿರೋಧಿಸಿ ಕಾರ್ಮಿಕರು 8 ಗಂಟೆ ದುಡಿಯುವ ಬೇಡಿಕೆ ಮುಂದಿಟ್ಟರು. ಆ ಬೇಡಿಕೆ ಮುಂದಿಟ್ಟು ಅಮೇರಿಕದ ಚಿಕಾಗೋ ನಗರದಲ್ಲಿ 1ಮೇ 1886ರಲ್ಲಿ ಸಹಸ್ರ ಸಂಖ್ಯೆಯಲ್ಲಿ ತೀವ್ರ ಹೋರಾಟ ಮಾಡಿದರು. ಆ ಹೋರಾಟದ ನೆನಪಿಗಾಗಿ ಮೇ 1 ರಂದು ಕಾರ್ಮಿಕರ ದಿನಾಚರಣೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಚರಿಸಲಾಯಿತು ಎಂದರು.
ಲೇಬರ್​ ಕಿಸಾನ್​ ಪಾರ್ಟಿ ಆಫ್​ ಹಿಂದೂಸ್ಥಾನ್​ ಅಡಿಕಾರ್ಮಿಕರ ದಿನಾಚರಣೆ ಆಚರಿಸಲಾಯಿತು. ಪ್ರಪಂಚದ ಹಲವೆಡೆ ಮೇ 1ರಂದು ಸರ್ಕಾರಿ ರಜೆಯೆಂದು ಘೋಷಿಸಲಾಯಿತು. 2025ರ ಈ ವರ್ಷದ ಥೀಮ್​ ನೋಡುವುದಾರೆ ಕಾರ್ಮಿಕರ ಸುರಕ್ಷತೆ ಮತ್ತು ಆರೋಗ್ಯ ಎಂಬುದಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಸೇವೆ ಸಲ್ಲಿಸುವ ಕಾರ್ಮಿಕರಿಗೆ ಗೌರವ ಸಲ್ಲಿಸೋಣ ಎಂದರು.
ಬಹುಜನ ಸಂಘಟನೆಗಳ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಶಾಮಣ್ಣ, ವಿಭಾಗ ಸಂಚಾಲಕಿ ಸರಸಮ್ಮ, ಕೋಲಾರ ಜಿಲ್ಲಾಧ್ಯಕ್ಷೆ ನಾಗವೇಣಮ್ಮ, ತಾಲೂಕು ಅಧ್ಯಕ್ಷ ಸೋಮಶೇಖರ್​, ಮುಖಂಡರಾದ ಮಾಲೂರು ಎಲ್ಲೇಶ್​, ಶ್ರೀನಿವಾಸಪುರ ವೆಂಕಟರವಣಪ್ಪ, ಚೌಡಪ್ಪ, ಗೋಪಾಲ್​, ಖಲೀಲ್​ ಅಪ್ಸರ್​, ರಾಜಣ್ಣ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net