ಪುಸ್ತಕದೊಂದಿಗೆ ಪ್ರಪಂಚದ ಅರಿವಿರಲಿ Book

ಬೂದಿಕೋಟೆ ಗ್ರಾಮದ ಕೆಪಿಎಸ್​ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರು-ಪಾಲಕರ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಬಿ.ಆರ್​ ಮಂಜುನಾಥ್​, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ, ಪ್ರಾಂಶುಪಾಲೆ ದಾಕ್ಷಾಯಿಣಿ, ಸರ್ಕಾರಿ ನೌಕರರ ಸಂಘದ Book ಅಧ್ಯಕ್ಷ ರವಿ ಇದ್ದರು.
ಬೂದಿಕೋಟೆ ಗ್ರಾಮದ ಕೆಪಿಎಸ್​ ಆವರಣದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರು-ಪಾಲಕರ ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಬಿ.ಆರ್​ ಮಂಜುನಾಥ್​, ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಕಲಾ, ಪ್ರಾಂಶುಪಾಲೆ ದಾಕ್ಷಾಯಿಣಿ, ಸರ್ಕಾರಿ ನೌಕರರ ಸಂಘದ Book ಅಧ್ಯಕ್ಷ ರವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಸ್​.ಎನ್​ ನಾರಾಯಣಸ್ವಾಮಿ ಹೇಳಿಕೆ
ಬೂದಿಕೋಟೆ: ಸರ್ಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಐಎಎಸ್​, ಐಪಿಎಸ್​, ಕೆಎಎಸ್​ ಆಗುತ್ತಾರೆ. ಆದರೆ ಖಾಸಗಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಗುಮಾಸ್ತರಾಗುತ್ತಾರೆ ಇದು Book ಸರ್ಕಾರಿ ಶಾಲೆಗಿರುವ ಗತ್ತು ಎಂದು ಶಾಸಕ ಎಸ್​.ಎನ್​ ನಾರಾಯಣಸ್ವಾಮಿ ಹೇಳಿದರು.
ಗ್ರಾಮದ ಕೆಪಿಎಸ್​ ಆವರಣದಲ್ಲಿ ಮಕ್ಕಳ ದಿನ ಪ್ರಯುಕ್ತ ಹಮ್ಮಿಕೊಂಡಿದ್ದ ಶಿಕ್ಷಕರ ಪಾಲಕರ ಸಭೆಯಲ್ಲಿ ಮಾತನಾಡಿದ ಅವರು, ಸಂತೋಷ ಸಂಭ್ರಮಗಳನ್ನು ನೋಡಬೇಕಾದರೆ ಅದು ಕೇವಲ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸಾಧ್ಯ. ಗ್ರಾಮಾಂತರ ಭಾಗದಲ್ಲಿ ಬೆಳೆದಿರುವ ಮಕ್ಕಳಿಗೆ ಪುಸ್ತಕದ ಜತೆ ಜತೆಗೆ ಹೊರಗಿನ ಪ್ರಪಂಚದ ಬಗ್ಗೆಯೂ ಚೆನ್ನಾಗಿ ಗೊತ್ತಿರುತ್ತದೆ. ಆದರೆ ನಗರಗಳಲ್ಲಿ ಬೆಳೆದಿರುವ ಮಕ್ಕಳಿಗೆ ಹೊರಗಿನ ಪ್ರಪಂಚ ಗೊತ್ತಿರುವುದಿಲ್ಲ ಎಂದರು.
ನಮ್ಮ ಸರ್ಕಾರ ಬಂದ ನಂತರ ಬಡವರಿಗೆ ಅನೇಕ ಯೋಜನೆ ನೀಡುತ್ತಿದ್ದೇವೆ.
ಅದೇ ರೀತಿ ಇದೀಗ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಂದು ಕೆಪಿಎಸ್​ ಶಾಲೆ ತೆರೆಯಲು ನಮ್ಮ ಸರ್ಕಾರ ನಿರ್ಧಾರ ಮಾಡಿದ್ದೇವೆ ಇದರಿಂದ ಅನೇಕರು ವಿದ್ಯಾವಂತರಾಗಲು ಸಹಕಾರವಾಗುತ್ತದೆ ಎಂದರು.
ಮಕ್ಕಳ ವಿದ್ಯಾಭ್ಯಾಸದ ಹಿತದೃಷ್ಟಿಯಿಂದಾಗಿ ಒಳ್ಳೆಯ ಆಟದ ಮೈದಾನ, ಸುಸಜ್ಜಿತ ಕಟ್ಟಡಗಳು, ಕಂಪ್ಯೂಟರ್​ ಕ್ಲಾಸ್​, ಉತ್ತಮ ಶಿಕ್ಷಕರು ಹಾಗೂ ಮಕ್ಕಳನ್ನು ಕರೆತರಲು ಬಸ್ಸಿನ ವ್ಯವಸ್ಥೆ, ಆಂಗ್ಲ ಮಾಧ್ಯಮ ಇವೆಲ್ಲವನ್ನೂ ಒಂದು ಕಡೆ ಮಾಡಿ ಮಾದರಿ ಕೆಪಿಎಸ್​ ಶಾಲೆಯನ್ನು ಮಾಡಬೇಕೆಂದು ನಮ್ಮ ಸರ್ಕಾರ ಯೋಚಿಸುತ್ತಿದೆ ಎಂದರು.
ಕೆಪಿಎಸ್​ನಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳಿಗೆ ಪುಸ್ತಕ, ಸಮವಸ್ತ್ರ, ಬಿಸಿ ಊಟ, ಶೂ, ಕುಡಿಯುವ ನೀರು ಸೇರಿ ಎಲ್ಲವೂ ಉಚಿತವಾಗಿ ನೀಡುತ್ತಿದ್ದೇವೆ ಆದರೆ ಖಾಸಗಿ ಶಾಲೆಗಳಲ್ಲಿ ಲಕ್ಷಾಂತರ ರೂಪಾಯಿ ಪಾವತಿಸಬೇಕಾಗಿದೆ ಹಾಗಾಗಿ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡುವಂತೆ ಅಕ್ಕ ಪಕ್ಕದ ಮನೆಯವರಿಗೂ ತಿಳಿಸಿ ಎಂದರು.
ಮುಖ್ಯ ಶಿಕ್ಷಕ ಸೀತಾರಾಮ್​, ವಿಜಯ ಕುಲಕರ್ಣಿ, ಪಿಡಿಒ ಕಿಶೋರ್​, ಶಿಕ್ಷಕ ನಾಗರಾಜ್​, ಎಸ್ಡಿಎಂಸಿ ಉಪಾಧ್ಯಕ್ಷ ಶೋಬನ್​ ಬಾಬು, ಯಳೆಸಂದ್ರ ವಿಎಸ್ಸೆಸ್ಸೆಎನ್​ ಅಧ್ಯಕ್ಷ ಟಿ.ಮಹದೇವಪ್ಪ, ಆಲಂಬಾಡಿ ಜ್ಯೊತೆನಹಳ್ಳಿ ವಿಎಸ್ಸೆಸ್ಸೆಎನ್​ ಅಧ್ಯಕ್ಷ ಮುನಿಸ್ವಾಮಿಪ್ಪ, ಸಮಾಜ ಸೇವಕ ಎ.ಬಾಬು, ಮುಖಂಡರಾದ ಬಿ.ಕೃಷ್ಣಪ್ಪ ಶೆಟ್ಟಿ, ಆರ್​.ವಿಜಯ್​ ಕುಮಾರ್​, ಅನು, ಶ್ರೀನಿವಾಸ್​, ಸುರೇಶ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net