ಪ್ರತಿದಿನವೂ ನಾವು ಉತ್ತಮರಾಗೋಣ / DEVANAHALLI

ಐಐಬಿಎಸ್​ ಕಾಲೆಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿರಣ್​ ಬೇಡಿ, ಐಐಬಿಎಸ್​ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಜಯಪ್ರಕಾಶ್​, ಬಿಗ್​ಬ್ಯಾಸ್ಕೆಟ್​ ಸಂಸ್ಥೆಯ ರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಜೀವಾನಂದ ಕುಮಾರ ಸದಾಸನ್​, ಇತರರು ಇದ್ದರು.
ಐಐಬಿಎಸ್​ ಕಾಲೆಜಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕಿರಣ್​ ಬೇಡಿ, ಐಐಬಿಎಸ್​ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ.ಜಯಪ್ರಕಾಶ್​, ಬಿಗ್​ಬ್ಯಾಸ್ಕೆಟ್​ ಸಂಸ್ಥೆಯ ರಾಷ್ಟ್ರೀಯ ವಿಭಾಗದ ಮುಖ್ಯಸ್ಥ ಜೀವಾನಂದ ಕುಮಾರ ಸದಾಸನ್​, ಇತರರು ಇದ್ದರು.
Published on

ದೇವನಹಳ್ಳಿ :

ಜೀವನದಲ್ಲಿ ಯಶಸ್ಸು ಸಾಧಿಸಲು ಪ್ರತಿದಿನದ ಉತ್ತಮ ಅಭ್ಯಾಸ, ಶಿಸ್ತುಬದ್ಧ ಜೀವನ ಮತ್ತು ನಿರಂತರ ಆತ್ಮವಿಕಾಸ ಅತ್ಯಂತ ಮುಖ್ಯ ಎಂದು ವಿಶ್ವಸಂಸ್ಥೆಯ ನಾಗರಿಕ ಪೊಲೀಸ್​ ಸಲಹೆಗಾರ್ತಿ, ಭಾರತದ ಪ್ರಥಮ ಮಹಿಳಾ ಐಪಿಎಸ್​ ಡಾ.ಕಿರಣ್​ ಬೇಡಿ ಹೇಳಿದರು.

ಇಂಟರ್​ನ್ಯಾಷನಲ್​ ಇನ್​ಸ್ಟಿಟ್ಯೂಟ್​ ಆಪ್​ ಬಿಸಿನೆಸ್​ ಸ್ಟಡಿಸ್​ನಲ್ಲಿ ಹಮ್ಮಿಕೊಂಡಿದ್ದ ಪಿ.ಜಿ.ಡಿ.ಎಂ ಕೋಹೋರ್ಟ್​ 2026&28 ವಿದ್ಯಾರ್ಥಿಗಳ ವ್ಯಾಲಿಡಿಕ್ಟರಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬ ವಿದ್ಯಾರ್ಥಿಯೂ ತನ್ನ ವ್ಯಕ್ತಿತ್ವವನ್ನು ಸದೃಢಗೊಳಿಸಲು ಹಾಗೂ ಉತ್ತಮ ನಾಯಕನಾಗಿ ಬೆಳೆಯಲು ದೈಹಿಕಶಕ್ತಿ, ಮಾನಸಿಕಶಕ್ತಿ, ಭಾವನಾತ್ಮಕಶಕ್ತಿ, ಆಧ್ಯಾತ್ಮಿಕ ಶಕ್ತಿ ಹಾಗೂ ಸಾಮಾಜಿಕಶಕ್ತಿ ಈ ಐದು ಆಯಾಮಗಳಲ್ಲಿ ಸಮತೋಲನ ಸಾಧಿಸಿದಾಗ ಮಾತ್ರ ವ್ಯಕ್ತಿ ತನ್ನ ಜೀವನದಲ್ಲಿ ಶ್ರೇಷ್ಠತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ. ಪ್ರತಿಯೊಬ್ಬ ವಿದ್ಯಾರ್ಥಿಯೂ ಪ್ರತಿದಿನ ತನ್ನನ್ನು ತಾನು ಉತ್ತಮಗೊಳಿಸಿಕೊಳ್ಳುವ ಪ್ರಯತ್ನಮಾಡಬೇಕು. ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು, ಮನಸ್ಸನ್ನು ಸದೃಢವಾಗಿರಿಸಿಕೊಳ್ಳುವುದು. ಭಾವನೆಗಳನ್ನು ಸಮತೋಲನದಲ್ಲಿ ಇಡುವುದು. ಆಧ್ಯಾತ್ಮಿಕ ಚಿಂತನೆ ಮೂಲಕ ಆತ್ಮವಿಶ್ವಾಸಬೆಳೆಸಿಕೊಳ್ಳುವುದು ಹಾಗೂ ಸಮಾಜದೊಂದಿಗೆ ಉತ್ತಮ ಬಾಂಧವ್ಯ ಬೆಳೆಸಿಕೊಳ್ಳುವುದು ವ್ಯಕ್ತಿತ್ವವಿಕಸನಕ್ಕೆ ಮೂಲಾಧಾರಗಳಾಗಿವೆ ಎಂದು ತಿಳಿಸಿದರು.

ಸ್ಮಾರ್ಟ್​ಇಡಿ ಮತ್ತು ಸೋಫಿರಾ ಎಐ ಸಂಸ್ಥೆಯ ಸಂಸ್ಥಾಪಕ ಹಾಗೂ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಉಪ್ಪತ್ತಿಸಾಯಿ ಶ್ರೀಕರ್​, ಐಐಬಿಎಸ್​ ಕಾರ್ಯನಿರ್ವಾಹಕ ನಿರ್ದೇಶಕ ಮಹೇಶ್ವರರಡ್ಡಿ, ಪ್ರವೇಶ ನಿರ್ದೇಶಕ ಅಮರ್​ ಜೀತ್ಗೌತಮ್​, ನಿರ್ದೇಶಕ ಡಾ.ತ್ರಿಪುರನೇನಿ ಜಗ್ಗಯ್ಯ, ಆಡಳಿತ ನಿರ್ದೇಶಕ ರಿಜ್ವಾನ್​ಅಲಿ ಬೇಗ್​ ಹಾಗೂ ಪಿ.ಜಿ.ಡಿ.ಎಂ ಪ್ರಾಂಶುಪಾಲ ಡಾ.ಎಂ.ಕೇತ್​ನ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net