ಹಕ್ಕು ರಕ್ಷಣೆಗಾಗಿ ಹೋರಾಡೋಣ rights

ಹಕ್ಕು ರಕ್ಷಣೆಗಾಗಿ ಹೋರಾಡೋಣ rights
ಹಕ್ಕು ರಕ್ಷಣೆಗಾಗಿ ಹೋರಾಡೋಣ rights
Published on
ಬಂಗಾರಪೇಟೆ: ಭೋವಿ ಸಮುದಾಯದ ಹಕ್ಕು ರಕ್ಷಣೆ, ಮುಂದಿನ ಪೀಳಿಗೆಗೆ ಸರ್ಕಾರದ ಸೌಲಭ್ಯಗಳು ಸಮರ್ಪಕವಾಗಿ ದೊರಕುವ ಕುರಿತು, ಸಮಾಜದ ಸಂಘಟನೆ ಬಲಪಡಿಸುವ ಉದ್ದೇಶದಿಂದ ನಡೆದ ಸಭೆಯಲ್ಲಿ ಮಾಜಿ ಶಾಸಕ, ಸಮುದಾಯ ಮುಖಂಡ ಎಂ.ನಾರಾಯಣಸ್ವಾಮಿ ಒಳಮೀಸಲಾತಿ ವಿರುದ್ಧ ರಾಜ್ಯಮಟ್ಟದ ಹೋರಾಟಕ್ಕೆ ಕರೆ ನೀಡಿದರು.rights
ನಗರದ ಸಂಜಯಗಾಂಧಿ ನಗರದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಭೋವಿ ಸಮುದಾಯದ ಸಭೆಯಲ್ಲಿ ಮಾತನಾಡಿ, ಸಮುದಾಯದ ಏಕತೆ ಮತ್ತು ಸಂಘಟನೆಯ ಬಲವೇ ಸಮಾಜದ ಅಭಿವೃದ್ಧಿಗೆ ಮೂಲ ಆಧಾರ ಎಂದು ಹೇಳಿದರು.
ಸಮಾಜದೊಳಗಿನ ಭಿನ್ನಾಭಿಪ್ರಾಯಗಳು, ಗುಂಪುಗಾರಿಕೆ ಹಾಗೂ ವೈಯಕ್ತಿಕ ಲಾಭಕ್ಕಾಗಿ ನಡೆಯುತ್ತಿರುವ ಪ್ರತ್ಯೇಕ ಚಟುವಟಿಕೆಗಳು ಸಮುದಾಯದ ಹಿತಾಸಕ್ತಿಗೆ ಧಕ್ಕೆ ತರುತ್ತದೆ ಎಂದು ಹೇಳಿದರು.
ಸದಾಶಿವ ಆಯೋಗದ ಒಳಮೀಸಲಾತಿ ಶಿಫಾರಸು ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಆದೇಶ ಜಾರಿಗೆ ಬಂದಲ್ಲಿ ಭೋವಿ ಸಮುದಾಯದ ಯುವಕರಿಗೆ ಶಿಕ್ಷಣ, ಉದ್ಯೋಗ ಮತ್ತು ಸರ್ಕಾರದ ವಿವಿಧ ಯೋಜನೆಗಳಲ್ಲಿ ದೊರೆಯಬೇಕಾದ ಅವಕಾಶಗಳಿಗೆ ಕೊಕ್ಕೆ ಬೀಳಲಿದೆ. ಈಗಾಗಲೇ ಸಮಾಜ ಹಲವು ಹಂತಗಳಲ್ಲಿ ಹಿಂದುಳಿದಿದ್ದು, ಇಂತಹ ಯೋಜನೆಗಳಿಂದ ಮತ್ತೆ ಅನ್ಯಾಯವಾಗಬಹುದು ಎಂದು ತಿಳಿಸಿದರು.
ಸಮುದಾಯದ ಹಕ್ಕುಗಳಿಗೆ ಧಕ್ಕೆಯಾದರೆ ಮೌನವಾಗಿರುವ ಪ್ರಶ್ನೆಯೇ ಇಲ್ಲ. ಮುಂದಿನ ಪೀಳಿಗೆಗೆ ಸೌಲಭ್ಯಗಳು ಸಿಗಬೇಕು ಎಂದರೆ ನಾವು ಈಗಲೇ ಸಂಘಟಿತ ಹೋರಾಟಕ್ಕೆ ಸಜ್ಜಾಗಬೇಕು. ಒಳಮೀಸಲಾತಿ ಜಾರಿ ವಿಚಾರದಲ್ಲಿ ಸರ್ಕಾರ ಸಮುದಾಯದ ಅಭಿಪ್ರಾಯ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ಇದು ಕೇವಲ ಇಂದಿನ ಪೀಳಿಗೆಯ ಹೋರಾಟವಲ್ಲ. ನಮ್ಮ ಮಕ್ಕಳ ಭವಿಷ್ಯಕ್ಕಾಗಿ ನಡೆಯುವ ಹೋರಾಟ. ಎಲ್ಲರೂ ಕೈಜೋಡಿಸಿ ಹಕ್ಕುಗಳಿಗೆ ಒಂದೇ ವೇದಿಕೆಯಲ್ಲಿ ಹೋರಾಟ ಮಾಡೋಣ. ಸಮಾಜಕ್ಕೆ ಆಗ ನ್ಯಾಯ ಸಿಗುತ್ತದೆ ಎಂದು ಹೇಳಿದರು.
ಘಟಕಗಳ ರಚನೆ: ಬಂಗಾರಪೇಟೆ ಭೋವಿ ಸಂಘ ಗೌರವಾಧ್ಯಕ್ಷ$ ಕೃಷ್ಣಪ್ಪ ಗಾಜಗ, ಅಧ್ಯಕ್ಷ ಕೆ.ಜಿ.ಮಂಜುನಾಥ್​ ಕಣಿಂಬೆಲೆ, ಹಿರಿಯ ಉಪಾಧ್ಯಕ್ಷ ರಾಮಕೃಷ್ಣಪ್ಪ ಚಿಕ್ಕಹೊಸಹಳ್ಳಿ, ಉಪಾಧ್ಯಕ್ಷ ವೆಂಕಟೇಶ್​ ಶ್ರೀರಂಗಬಂಡಹಳ್ಳಿ ಮತ್ತು ಅನಿಗಾನಹಳ್ಳಿ ವೆಂಕಟಾಚಲಪತಿ, ಪ್ರಧಾನ ಕಾರ್ಯದರ್ಶಿ ಮಂಜುನಾಥ್​ ಅಮರಾವತಿ, ಜಂಟಿ ಕಾರ್ಯದರ್ಶಿ ರಾಮಮೂರ್ತಿ ತಮ್ಮೇನಹಳ್ಳಿ, ವೆಂಕಟೇಶ್​ ದಾಸರಹೊಸಹಳ್ಳಿ, ಕಾರ್ಯದರ್ಶಿ ಮುನಿರಾಮ್​ ರೆಡ್ಡಿಹಳ್ಳಿ, ಸಹಕಾರ್ಯದರ್ಶಿ ಲೋಕೇಶ್​ ತೊಪ್ಪನಹಳ್ಳಿ ಮತ್ತು ಬಾಬು ಕಾಮಸಮುದ್ರ, ಸಂಘಟನಾ ಕಾರ್ಯದರ್ಶಿ ಪಿಳ್ಳಪ್ಪ ಬೋಯಿಲೂರು, ಗೋವಿಂದಪ್ಪ, ಮುತ್ತೇನಹಳ್ಳಿ, ಕಾಶಿ ಗುಲ್ಲಹಳ್ಳಿ ಮತ್ತು ನಾರಾಯಣಸ್ವಾಮಿ ಕೊಮ್ಮೇನಹಳ್ಳಿ, ಪ್ರಕಾಶ್​ ಬಾವರಹಳ್ಳಿ ಮತ್ತು ಗೋವಿಂದಪ್ಪ ನೆತ್ತಬೆಲೆ ಅವರನ್ನು ನೇಮಕ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net