ಬಾಲಕಾರ್ಮಿಕತೆ ವಿರುದ್ಧ ಹೋರಾಡೋಣ

ಚಿಂಚೋಳಿ ಸಾರಿಗೆ ಟಕದಲ್ಲಿ ಬಾಲ ಕಾರ್ಮಿಕ ವಿರೋಧಿ ದಿನದ ನಿಮಿತ್ತ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸುರೇಶ ತೇಗಲತಿಪ್ಪಿ, ಬಸವರಾಜ ಪಾಟೀಲ್​, ಮಲ್ಲಮ್ಮ, ಸಂತೋಷ ಬೀರಾಪುರ, ಮಹಾದೇವ ನರನಾಳ, ಹಣಮಂತ ಇತರರಿದ್ದರು.
ಚಿಂಚೋಳಿ ಸಾರಿಗೆ ಟಕದಲ್ಲಿ ಬಾಲ ಕಾರ್ಮಿಕ ವಿರೋಧಿ ದಿನದ ನಿಮಿತ್ತ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಸುರೇಶ ತೇಗಲತಿಪ್ಪಿ, ಬಸವರಾಜ ಪಾಟೀಲ್​, ಮಲ್ಲಮ್ಮ, ಸಂತೋಷ ಬೀರಾಪುರ, ಮಹಾದೇವ ನರನಾಳ, ಹಣಮಂತ ಇತರರಿದ್ದರು.
Published on
ಚಿಂಚೋಳಿ: ಪ್ರತಿ ಮಗುವಿಗೂ ಹಕ್ಕು, ಕರ್ತವ್ಯ ಕಲ್ಪಿಸಲಾಗಿದೆ. ಅವುಗಳನ್ನು ಪ್ರತಿಯೊಬ್ಬರು ಅರಿಯಬೇಕು. ಮಕ್ಕಳನ್ನು ಕಾರ್ಮಿಕನ್ನಾಗಿಸದೆ, ಶಿಕ್ಷಿತರನ್ನಾಗಿಸಬೇಕು ಎಂದು ಸಾರಿಗೆ ಘಟಕ ವ್ಯವಸ್ಥಾಪಕ ಸುರೇಶ ತೇಗಲತಿಪ್ಪಿ ಹೇಳಿದರು. ಸಾರಿಗೆ ಟಕದಲ್ಲಿ ಬಾಲ ಕಾರ್ಮಿಕ ವಿರೋಧಿ ದಿನದ ನಿಮಿತ್ತ ಶುಕ್ರವಾರ ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಅವರು, ಚಾಲಕರು&ನಿರ್ವಾಹಕರಿಗೆ ಎಲ್ಲಾದರೂ ಬಾಲ ಕಾರ್ಮಿಕರು ಸೇವೆ ಸಲ್ಲಿಸುವುದು ಕಂಡುಬಂದರೆ ತಣ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಸಾರ್ವಜನಿಕರು ಬಾಲ ಕಾರ್ಮಿಕ ವ್ಯವಸ್ಥೆ ವಿರುದ್ಧ ಹೋರಾಡಬೇಕು ಎಂದರು. ಸಿಬ್ಬಂದಿ ಬಸವರಾಜ ಪಾಟೀಲ್​, ಮಲ್ಲಮ್ಮ, ಸಂತೋಷ ಬೀರಾಪುರ, ಮಹಾದೇವ ನರನಾಳ, ಹಣಮಂತ, ಪ್ರಮುಖರಾದ ಗೋಪಾಲ ಎಂ.ಪಿ.ಗಾರಂಪಳ್ಳಿ, ಶಿವಕುಮಾರ ಮಲ್ಕೋಡ, ಪ್ರಭು ಬಸಗೊಂಡ, ಅಮೃತ ಮಡಿವಾಳ, ಮೋಹನ ಗುತ್ತೇದಾರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net