ರೈತರ ಸಮಸ್ಯೆಗೆ ಸ್ಪಂದಿಸುವ ಮನೋಭಾವ ಬರಲಿ Farmers

ಬಂಗಾರಪೇಟೆ ತಾಲೂಕು Farmers ಅನಿಗಾನಹಳ್ಳಿ ಬಳಿಯ ಸಭಾಂಗಣದಲ್ಲಿ ಅರಣ್ಯ ಇಲಾಖೆ ದೌರ್ಜನ್ಯಕ್ಕೆ ಒಳಗಾದ 3 ತಾಲೂಕಿನ ರೈತರನ್ನು ಉದ್ದೇಶಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಸಿಪಿಎಂ ಗೋಪಾಲ್​ ಮಾತನಾಡಿದರು. ಸಂಚಾಲಕ ಆರ್​.ಶ್ರೀನಿವಾಸ್​ ಇದ್ದರು.
ಬಂಗಾರಪೇಟೆ ತಾಲೂಕು Farmers ಅನಿಗಾನಹಳ್ಳಿ ಬಳಿಯ ಸಭಾಂಗಣದಲ್ಲಿ ಅರಣ್ಯ ಇಲಾಖೆ ದೌರ್ಜನ್ಯಕ್ಕೆ ಒಳಗಾದ 3 ತಾಲೂಕಿನ ರೈತರನ್ನು ಉದ್ದೇಶಿಸಿ ಭೂ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಸಿಪಿಎಂ ಗೋಪಾಲ್​ ಮಾತನಾಡಿದರು. ಸಂಚಾಲಕ ಆರ್​.ಶ್ರೀನಿವಾಸ್​ ಇದ್ದರು.
Published on
ಬಂಗಾರಪೇಟೆ: ರೈತರನ್ನು ಈ ದೇಶದ ಬೆನ್ನೆಲುಬು ಎಂದು Farmers ಬಿಂಬಿಸುತ್ತಾರೆ ಆದರೆ ಅವರ ಕಷ್ಟ&ಸುಖಗಳಿಗೆ ಸ್ಪಂದಿಸುವ ಮನೋಭಾವ ಪ್ರತಿಯೊಬ್ಬರಲ್ಲೂ ಬರಬೇಕು ಎಂದು ಭೂ ಸಂತ್ರಸ್ತರ ಹೋರಾಟ ಸಮಿತಿ ಸಂಚಾಲಕ ಸಿಪಿಎಂ ಗೋಪಾಲ್​ ಹೇಳಿದರು.
ತಾಲೂಕಿನ ಅನಿಗಾನಹಳ್ಳಿ ಬಳಿಯ ಸಭಾಂಗಣದಲ್ಲಿ ಅರಣ್ಯ ಇಲಾಖೆ ದೌರ್ಜನ್ಯಕ್ಕೆ ಒಳಗಾದ 3 ತಾಲೂಕಿನ ರೈತರನ್ನು ಉದ್ದೇಶಿಸಿ ಮಾತನಾಡಿ, ಈಗಾಗಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಜಿಲ್ಲಾಧಿಕಾರಿಗಳು ಸರ್ಕಾರದ ಆದೇಶ ಪಾಲಿಸುವಂತೆ ಸೂಚಿಸಿದ್ದಾರೆ. ಆದರೂ ರೈತರ ಭೂಮಿ ಮೇಲೆ ಒತ್ತುವರಿಯ ಹೆಸರಿನಲ್ಲಿ ದೌರ್ಜನ್ಯ ನಡೆಯುತ್ತಿದೆ. ಆದ್ದರಿಂದ ಮುಂದಿನ ಪ್ರತಿಭಟನೆಗೆ ಎಲ್ಲರೂ ಸಿದ್ಧರಾಗಬೇಕು ಎಂದು ತಿಳಿಸಿದರು.
ಸಂಚಾಲಕ ಆರ್​.ಶ್ರೀನಿವಾಸ್​ ಮಾತನಾಡಿ, ಸ್ವಾತಂತ್ರ ಪೂರ್ವ ಹಾಗೂ ಸ್ವಾತಂತ್ರ ನಂತರ ಕಂದಾಯ ಇಲಾಖೆಯ ಸರ್ಕಾರಿ ಗೋಮಾಳ ಜಮೀನುಗಳಲ್ಲಿನ ಅಧಿಸೂಚನೆ ರದ್ದುಗೊಳಿಸಬೇಕು ಎಂದರು.
ಮುಖಂಡ ಪಾಪೇಗೌಡರು ಮಾತನಾಡಿ, ಅರಣ್ಯ ಇಲಾಖೆ ತಮ್ಮ ಇಲಾಖೆಗೆ ಬಂದ ಅನುದಾನಗಳನ್ನು ಸರಿಯಾಗಿ ಬಳಕೆ ಮಾಡಿದ್ದರೆ ವಾತಾವರಣದಲ್ಲಿ ಯಾವುದೇ ಏರುಪೇರು ಆಗುತ್ತಿರಲಿಲ್ಲ ಎಂದು ಹೇಳಿದರು.
ಡಾ.ಗೋವಿಂದಪ್ಪ ಮಾತನಾಡಿ, ಕಿರು ಅರಣ್ಯ, ಜಿಲ್ಲಾ ಅರಣ್ಯಗಳು ಸ್ವತಂತ್ರ ಪೂರ್ವದಲ್ಲಿ ಮಾರ್ಪಾಡಾಗಿದೆ. ಇದು ಅರಣ್ಯ ಇಲಾಖೆಯವರಿಗೆ ಅರ್ಥವೇ ಆಗುತ್ತಿಲ್ಲ ಎಂದು ಹೇಳಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net