ಜಾನಪದ ಕಲೆ ಉಳಿವಿಗೆ ಅವಕಾಶ ಕಲ್ಪಸಲಿ

Let's create a chance for folk art to survive.
Let's create a chance for folk art to survive.
Published on
ಪಾವಗಡ: ಜಾನಪದ ಕಲೆ ಉಳಿಯಬೇಕಾದರೆ ಕಲಾವಿದರಿಗೆ ಮಾಸಾಶನ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು ಎಂದು ತಾಲೂಕು ಕಸಾಪ ಅಧ್ಯಕ್ಷ ಕಟ್ಟಾ ನರಸಿಂಹಮೂರ್ತಿ ತಿಳಿಸಿದರು.
ತಾಲೂಕಿನ ಕಸಬಾ ಹೋಬಳಿ ಯರಪಾಳ್ಯ ಗ್ರಾಮದಲ್ಲಿ ಸಿದ್ಧಾರ್ಥ ಚಾರಿಟಬಲ್​ ಟ್ರಸ್ಟ್​ನಿಂದ ಹಮ್ಮಿಕೊಂಡಿದ್ದ ಗಡಿನಾಡ ಜಾನಪದ ಸಿರಿ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ನಶಿಸುತ್ತಿರುವ ಜಾನಪದ ಕಲೆಗಳನ್ನು ಉಳಿಸಲು ಗ್ರಾಮೀಣ ಕಲಾವಿದರಿಗೆ ವೇದಿಕೆ ನೀಡಿ ಅವಕಾಶ ಕಲ್ಪಿಸಬೇಕು ಎಂದರು.
ವೀರಲಗೊಂದಿ ಜಾನಪದ ಬಯಲಾಟ ಕಲಾವಿದ ಡಿ.ನಾಗರಾಜು ಮಾತನಾಡಿ, ತಾಲೂಕಿನಲ್ಲಿ ಜಾನಪದ ಕಲೆಗಳಾದ ಕೋಲಾಟ, ಬಯಲಾಟ, ಸೋಬಾನೇ ಪದಗಳು, ಅರೆವಾದ್ಯ, ತಮಟೆಕಲೆ, ಮಣೀವುಕುಣಿತ ಮೊದಲಾದ ಕಲೆಗಳು ಇಂದಿಗೂ ಜೀವಂತವಾಗಿದ್ದು. ಈ ಕಲೆಗಳು ಮುಂದಿನ ಪೀಳಿಗೆಗೆ ಉಳಿಯಬೇಕಾದರೆ ಜನಪದ ಕಲಾವಿದರೆ ಕಲೆಗಳ ದಾಖಲೀಕರಣ ಆಗಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಹಂಸವೇಣಿ ತಂಡದವರಿಂದ ಭರತನಾಟ್ಯ, ವೀರಲಗೊಂದಿ ನಾಗರಾಜ್​ ತಂಡದವರಿಂದ ಜಾನಪದ ಗಾಯನ, ಹನುಮಕ್ಕ ಮತ್ತು ತಂಡದವರಿಂದ ಕೋಲಾಟ, ಮಲ್ಲನಾಯಕನಹಳ್ಳಿ ದ್ಯಾವರಪ್ಪ ಮತ್ತು ತಂಡದವರಿಂದ ತತ್ವಪದ ಗಾಯನ, ಪದ್ಮಕ್ಕ ಮತ್ತು ತಂಡದವರಿಂದ ಸೋಬಾನೆ ಪದ, ಅರೆವಾದ್ಯ ನರೇಶ್​ ಮತ್ತು ನರಸಿಂಹಪ್ಪ ತಂಡದವರಿಂದ, ಸೋಮನಕುಣಿತ, ಮರಿಸ್ವಾಮಿ ಮತ್ತು ತಂಡದವರಿಂದ ಭಜನೆ, ಈರಣ್ಣ ರಂಗ ಗೀತೆಗಳ ಮೂಲಕ ರಂಜಿಸಿದರು.
ಯಾರಪಾಳ್ಯ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ರಂಗನಾಥ, ದ್ಯಾವ್ರಪ್ಪ, ತಿಮ್ಮರಾಯಪ್ಪ, ಬಾಣದ ರಂಗಪ್ಪ, ಮೃದಂಗ ಕಲಾವಿರಾದ ಶಿವಗಂಗಪ್ಪ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net