ಸಮ ಸಮಾಜಕ್ಕಾಗಿ ಎಲ್ಲರೂ ಒಂದಾಗಿರಿ / SULIBLE

ಸೂಲಿಬೆಲೆ ಹೋಬಳಿ ದೊಡ್ಡಕೋಲಿಗ ಗ್ರಾಮದ ಶ್ರೀ ವೀರಬ್ರಹ್ಮೇಂದ್ರಸ್ವಾಮಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ   ಶ್ರೀ ಶಿವಸುಜ್ಞಾನ ತೀರ್ಥಸ್ವಾಮಿಜಿ, ವೀರಭದ್ರಸ್ವಾಮಿಜಿ, ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ, ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ಗೌಡ ಇತರರು ಇದ್ದರು.
ಸೂಲಿಬೆಲೆ ಹೋಬಳಿ ದೊಡ್ಡಕೋಲಿಗ ಗ್ರಾಮದ ಶ್ರೀ ವೀರಬ್ರಹ್ಮೇಂದ್ರಸ್ವಾಮಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶ್ರೀ ಶಿವಸುಜ್ಞಾನ ತೀರ್ಥಸ್ವಾಮಿಜಿ, ವೀರಭದ್ರಸ್ವಾಮಿಜಿ, ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ, ಬಮುಲ್​ ನಿರ್ದೇಶಕ ಬಿ.ವಿ.ಸತೀಶ್​ಗೌಡ ಇತರರು ಇದ್ದರು.
Published on
ಸೂಲಿಬೆಲೆ : ಮನುಷ್ಯ ಇಂದು ದುಡಿಮೆ ಇಲ್ಲದ ಸಂಪತ್ತು, ತ್ಯಾಗವಿಲ್ಲದ ಪೂಜೆ, ತತ್ವ ರಹಿತ ರಾಜಕೀಯ, ಕರ್ಮ ಇಲ್ಲದ ಯೋಗ, ಸಮಾನತೆ ಇಲ್ಲದ ಬದುಕನ್ನು ಅರ್ಥ ಮಾಡಿಕೊಂಡಿಲ್ಲ ಎಂದರೆ ಸಮಾಜ ಜಡವಾಗುತ್ತದೆ. ಪ್ರತಿಯೊಬ್ಬರೂ ಒಂದಾದರೆ ಮಾತ್ರ ಸಮಸಮಾಜ ನಿರ್ಮಾಣ ಸಾಧ್ಯ ಎಂದು ವಿಶ್ವಕರ್ಮ ಜಗದ್ಗುರು ಶ್ರೀ ಸುಜ್ಞಾನಪ್ರಭು ಪೀಠದ ಅಧ್ಯಕ್ಷ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಹೇಳಿದರು.
ಸೂಲಿಬೆಲೆ ಹೋಬಳಿಯ ದೊಡ್ಡಕೋಲಿಗ ಗ್ರಾಮದ ಬಸವೇಶ್ವರ ದೇವಸ್ಥಾನ ಅಕ್ಕಯಮ್ಮ ಗುಡ್ಡದ ತಪ್ಪಲಿನಲ್ಲಿ ಜಗದ್ಗುರು ವೀರಬ್ರಹ್ಮೇಂದ್ರ ಸ್ವಾಮಿ ಸಮಿತಿ ವತಿಯಿಂದ ನಿರ್ಮಾಣಗೊಂಡಿದ್ದ ಮಹಾಗಣಪತಿ, ವೀರಬ್ರಹ್ಮೇಂದ್ರಸ್ವಾಮಿ, ಕಾಳಿಕಾಂಭ, ಕಮಟೇಶ್ವರಸ್ವಾಮಿ ಮೂರ್ತಿಗಳನ್ನು ಸೋಮವಾರ ಪ್ರತಿಷ್ಠಾಪಿಸಿ ಮಾತನಾಡಿದರು. ಕಡಪ ಜಿಲ್ಲೆಯ ಶ್ರೀ ವೀರಭದ್ರಸ್ವಾಮಿ ಮಾತನಾಡಿ, ಮನುಷ್ಯ ಕ್ಷಣಿಕ ಆಸೆ, ಆಕರ್ಷಣೆಗಳಿಗೆ ಬಲಿಯಾಗಿ ತನ್ನತನವನ್ನು ಕಳೆದುಕೊಳ್ಳುತ್ತಾ ಅಮೂಲ್ಯ ಜೀವನಕ್ಕೆ ಕೊಳ್ಳಿ ಇಟ್ಟುಕೊಳ್ಳುವ ಪ್ರಸಂಗಗಳು ಸಾಮಾನ್ಯವಾಗುತ್ತಿವೆ ಎಂಬುದನ್ನು 17ನೇ ಶತಮಾನದಲ್ಲಿಯೇ ಕಾಲಜ್ಞಾನಿ ಪೋತಲೂರು ವೀರಬ್ರಹ್ಮೇಂದ್ರರು ಜಗತ್ತಿಗೆ ಸಾರಿದ್ದರು. ಇದನ್ನು ಮನುಷ್ಯ ಅರ್ಥ ಮಾಡಿಕೊಳ್ಳದ ಸ್ಥಿತಿಯಲ್ಲಿ ಬದುಕುತ್ತಿದ್ದಾನೆ ಎಂದರು.
ನೂತನ ದೇವತಾ ಮೂರ್ತಿಗಳ ಪ್ರತಿಷ್ಠಾಪನೆ ಅಂಗವಾಗಿ ವೇದಪಾರಾಯಣ, ಗಂಗೆಪೂಜೆ, ಗೋಪೂಜೆ, ಗಣಪತಿ ಪೂಜೆ, ಸಪ್ತಮಾತೃಕಾ ಪೂಜೆ, ಅಗ್ನಿ ಪ್ರತಿಷ್ಠೆ ಭಜನೆ, ಬೆಳ್ಳಿ ರಥದಲ್ಲಿ ವಿಗ್ರಹಗಳ ಮೆರವಣಿಗೆ ನೆರವೇರಿಸಲಾಯಿತು. ವಿವಿಧ ಕಲಾತಂಡಗಳಿಂದ ಭಕ್ತಿ ಪ್ರಧಾನ ಸಂಗೀತ ಕಾರ್ಯಕ್ರಮ ನಡೆಯಿತು.
ಮಾಜಿ ಸಂಸದ ಬಿ.ಎನ್​.ಬಚ್ಚೇಗೌಡ, ಬಮುಲ್​ ನಿರ್ದೇಶಕ ಬಿ.ವಿ.ಸತೀಶಗೌಡ, ರಾಜ್ಯ ಒಕ್ಕಲಿಗ ಸಂದ ಮಾಜಿ ನಿರ್ದೇಶಕ ಬಿ.ಎನ್​.ಗೋಪಾಲಗೌಡ, ಸಹಕಾರ ಬ್ಯಾಂಕ್​ ನಿರ್ದೇಶಕ ಬಿ.ತಮ್ಮೇಗೌಡ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಜಂಟಿ ಆಯುಕ್ತ ಮಾಳಿಗಾಚಾರ್​, ಪದ್ಮಶ್ರೀ ಪುರಸತ ಚಂದ್ರಶೇಖರ್​, ಗ್ರಾಪಂ ಸದಸ್ಯ ಶಿವಕುಮಾರ್​, ಡೇರಿ ಅಧ್ಯಕ್ಷ ರಾಜಣ್ಣ, ವಿಶ್ವಕರ್ಮ ಸಮಾಜದ ಸತ್ಯವತಿ, ಸಮಿತಿಯ ರಾಜಣ್ಣಚಾರ್​, ಸುಬ್ರಮಣಿಚಾರ್​, ರಾಮಾಚಾರ್​, ರವೀಂದ್ರಚಾರ್​, ಮಂಜುನಾಥ್​ ಹಾಗೂ ಸಂದ ಪದಾಧಿಕಾರಿಗಳು, ಗ್ರಾಮಸ್ಥರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net