ಅಂಬೇಡ್ಕರ್​ ಆದರ್ಶ ಜೀವನದಲ್ಲಿ ಅಳವಡಿಸಿಕೊಳ್ಳೋಣ

ಅಫಜಲಪುರದಲ್ಲಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್​ ಜಯಂತಿ, ಬಹಿರಂಗ ಸಭೆಯನ್ನು ಕೆಕೆಆರ್​ಟಿಸಿ ಅಧ್ಯ ಅರುಣಕುಮಾರ ಪಾಟೀಲ್​ ಉದ್ಘಾಟಿಸಿದರು. ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಡಾ.ಸಿದ್ದರಾಮ ಬೆಲ್ದಾಳ ಶರಣರು, ಭಂತೆ ವರಜ್ಯೋತಿ ಇತರರಿದ್ದರು.
ಅಫಜಲಪುರದಲ್ಲಿ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್​ ಜಯಂತಿ, ಬಹಿರಂಗ ಸಭೆಯನ್ನು ಕೆಕೆಆರ್​ಟಿಸಿ ಅಧ್ಯ ಅರುಣಕುಮಾರ ಪಾಟೀಲ್​ ಉದ್ಘಾಟಿಸಿದರು. ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಡಾ.ಸಿದ್ದರಾಮ ಬೆಲ್ದಾಳ ಶರಣರು, ಭಂತೆ ವರಜ್ಯೋತಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಕೆಆರ್​ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್​ ಅನಿಸಿಕೆ
  • ಅಫಜಲಪುರದಲ್ಲಿ ಬಹಿರಂಗ ಸಭೆ
ಅಫಜಲಪುರ: ಬಾಬಾಸಾಹೇಬ್​ ಅವರು ಸಮಾಜ ಪರಿವರ್ತನೆಯ ಶಕ್ತಿ ಮತ್ತು ನಮ್ಮ ಬದುಕಿನ ದಾರಿದೀಪ. ಶಿಕ್ಷಿತರಾಗಿ, ಸಂಘಟಿತರಾಗಿ, ಹೋರಾಟ ಮಾಡಿ ಎಂಬ ಅವರ ಸಂದೇಶ ನಾಗರಿಕ ಸಮಾಜಕ್ಕೆ ದಾರಿದೀಪವಾಗಿವೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯ ಅರುಣಕುಮಾರ ಪಾಟೀಲ್​ ಹೇಳಿದರು.
ನ್ಯಾಷನಲ್​ ಫಂನ್​ ಹಾಲ್​ನಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಅವರ 135ನೇ ಜಯಂತ್ಯುತ್ಸವ ಸಮಿತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಡಾ.ಅಂಬೇಡ್ಕರ್​ ಜಯಂತಿ ಹಾಗೂ ಬಹಿರಂಗ ಸಭೆ ಉದ್ಘಾಟಿಸಿ ಮಾತನಾಡಿ, ನಾವು ಬಾಬಾಸಾಹೇಬರ ಮೇಲಿನ ಅಪಾರ ಗೌರವದಿಂದ ಜಯಂತಿ ಆಚರಿಸುತ್ತೇವೆ. ಜತೆಗೆ ಅವರ ಆಶಯಗಳಿಗೆ ಅನುಗುಣವಾಗಿ ಶಿಣ, ಸಂಟನೆ ಮತ್ತು ಅಭಿವೃದ್ಧಿಗೆ ಒತ್ತು ನೀಡಿದರೆ ಅವರಿಗೆ ನಿಜವಾಗಿಯೂ ಗೌರವ ಸಲ್ಲಿಸಿದಂತಾಗುತ್ತದೆ ಎಂದರು.
ಸಾಧ್ಯವಾದರೆ ಏ.14ರಂದೇ ಎಲ್ಲರೂ ಒಗ್ಗಟ್ಟಿನಿಂದ, ಸಾಮೂಹಿಕವಾಗಿ ಅದ್ದೂರಿ ಜಯಂತಿ ಆಚರಿಸೋಣ. ಜತೆಗೆ ಅನಾವಶ್ಯಕ ವೆಚ್ಚಗಳ ಬದಲಿಗೆ ವಿದ್ಯಾರ್ಥಿಗಳ ಶಿಣ, ಪುಸ್ತಕ ವಿತರಣೆ ಹಾಗೂ ಬಡ ಕುಟುಂಬಗಳ ನೆರವಿಗೆ ನಿಲ್ಲೋಣ. ಇಂದು ಬಾಬಾಸಾಹೇಬ್​ ಅವರನ್ನು ಸ್ಮರಿಸಿದರೆ ಸಾಲದು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡೋಣ ಎಂದು ಹೇಳಿದರು.
ಡಾ.ಸಿದ್ದರಾಮ ಬೆಲ್ದಾಳ ಶರಣರು ಮಾತನಾಡಿ, ದೇಶದಲ್ಲಿಂದು ಕೆಲ ಕಿಡಿಗೇಡಿಗಳು ಸಂವಿಧಾನದ ಮೇಲೆ ದಾಳಿ ಮಾಡುತ್ತಿದ್ದಾರೆ. ಮೀಸಲಾತಿ ತೆಗೆಯಲು ಪ್ರಯತ್ನಿಸುತ್ತಿದ್ದಾರೆ. ಜಾತಿ ಆಧಾರದ ಮೇಲೆ ಮೀಸಲಾತಿ ಬೇಡ ಎನ್ನುವವರು, ಜಾತಿಯನ್ನೇ ತೆಗೆಯಲು ಧ್ವನಿ ಎತ್ತಲಿ. ದೇಶದಲ್ಲಿ ಸರ್ಕಾರಿ ಶಾಲೆಗಳನ್ನು ಬಂದ್​ ಮಾಡಿ, ಗುರುಕುಲ ಪದ್ಧತಿ ತರುವ ಸಂಚು ನಡೆಯುತ್ತಿದೆ. ಎಲ್ಲರೂ ಜಾಗೃತವಾಗಬೇಕು ಎಂದು ಕರೆ ನೀಡಿದರು.
ಉರಿಲಿಂಗ ಪೆದ್ದಿ ಮಠದ ಶ್ರೀ ಾನಪ್ರಕಾಶ ಸ್ವಾಮೀಜಿ ಮಾತನಾಡಿದರು.
ಭಂತೆ ವರಜ್ಯೋತಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್​, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯ ಪ್ರಕಾಶ ಜಮಾದಾರ, ಜಿಪಂ ಮಾಜಿ ಸದಸ್ಯರಾದ ಮತೀನ್​ ಪಟೇಲ್​, ಸಿದ್ಧಾರ್ಥ ಬಸರಿಗಿಡ, ಸಿದ್ದು ಶಿರಸಗಿ, ಕೆಪಿಸಿಸಿ ಸದಸ್ಯ ಪಪ್ಪು ಪಟೇಲ್​, ತಾಪಂ ಮಾಜಿ ಅಧ್ಯ ಶಿವಾನಂದ ಗಾಡಿಸಾಹುಕಾರ, ಜಯಂತ್ಯುತ್ಸವ ಸಮಿತಿ ತಾಲೂಕು ಅಧ್ಯ ಶಿವರಾಜ ಹೊಸಮನಿ, ಪ್ರಮುಖರಾದ ಡಾ.ಹಣಮಂತರಾವ ದೊಡ್ಡಮನಿ, ರಮೇಶ ಪೂಜಾರಿ, ಭೀಮರಾವ ಗೌರ, ಮಹಾಂತೇಶ ಬಡದಾಳ, ಮಲ್ಲಿಕಾರ್ಜುನ ರ್ಖಗೆ, ಗುಂಡಪ್ಪ ಹೊಸಮನಿ, ನಾಗೇಶ ಕೊಳ್ಳಿ, ಮಲ್ಲಿಕಾರ್ಜುನ ಸಿಂಗೆ, ರಾಜಕುಮಾರ ಬಬಲಾದ, ಮಹಾಂತೇಶ ಬಳುಂಡಗಿ, ವಿಜಯಕುಮಾರ ಸಾಲಿಮನಿ, ದಯಾನಂದ ದೊಡ್ಡಮನಿ, ಮಹಾನಿಂಗ ಅಂಗಡಿ, ಪ್ರವಿಣ ಕಲ್ಲೂರ, ಗೌತಮ ಸಕ್ಕರಗಿ, ರವಿ ಗೌರ, ರಾಜು ಆರೇಕರ, ಮಹಾದೇವ ಬಂಕಲಗಿ, ಶಿವು ಹೊಸಮನಿ, ಸಿದ್ದು ಚೌಡಾಪುರ ಇತರರಿದ್ದರು.
ಪ್ರಮುಖ ಬೀದಿಗಳಲ್ಲಿ ಡಾ.ಬಿ.ಆರ್​.ಅಂಬೇಡ್ಕರ್​ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು.
"

ಶರಣರು, ಸಂತರು, ಹೋರಾಟಗಾರರನ್ನು ಜಾತಿಯಿಂದ ನೋಡುವವರು ಭಯೋತ್ಪಾದಕರಿಗೆ ಸಮ. ಅಂಬೇಡ್ಕರ್​ ಅವರನ್ನು ಪುತ್ಥಳಿ, ಬ್ಯಾನರ್​, ಮೆರವಣಿಗೆಗೆ ಸೀಮಿತ ಮಾಡದೆ ಅವರ ತತ್ವ ಆದರ್ಶಗಳನ್ನು ಅಳವಡಿಸಿಕೊಂಡಾಗ ಮಾತ್ರ ಆಚರಣೆಗೆ ಬೆಲೆ ಬರುತ್ತದೆ.

— > ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ಉರಿಲಿಂಗ ಪೆದ್ದಿ ಮಠ


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net