ಕಾರ್ಯಕ್ರಮದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಗಣ್ಯರನ್ನು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳನ್ನು ವಿಶೇಷವಾಗಿ ಸತ್ಕರಿಸಲಾಯಿತು. ತಾಲೂಕು ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಹೇಶಚಂದ್ರ ವಾಲಿ, ಕೈಮಗ್ಗ ಮತ್ತು ಜವಳಿ ಇಲಾಖೆ ಉಪ ನಿರ್ದೇಶಕರು, ಬೈತುಲ್ ಮಾಲ್ -ಫಂಕ್ಷನ್ ಹಾಲ್ ಅಧ್ಯಕ್ಷ ಇರ್ಫಾನ್ ಬಾದಲ್, ಶಶಿ ಚಾರಿಟೇಬಲ್ ಟ್ರಸ್ಟ್ನ ಹಣಮಂತಪ್ಪ ಶಿರಗೋಳ, ಮುಖ್ಯ ಗುರುಗಳಾದ ಬಸವರಾಜಪ್ಪ, ಮುಕುಂದರಾವ್, ಲಿಂಗನಗೌಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಪ್ರೇರಣಾ ತಿಪ್ಪಶೆಟ್ಟಿ ಮತ್ತು ಅಂಕಿತ್‌ರಾಜ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ಸರ್ಕಾರಿ ವಸತಿ ನಿಲಯದ ವಿದ್ಯಾರ್ಥಿನಿಯರಿಗೆ ಉಚಿತ ನೋಟ್‌ಬುಕ್ ವಿತರಿಸಲಾಯಿತು.