ಕುಲಗೋಡ ಗ್ರಾಮದ ಎನ್ಎಸ್ಎ್ ಶಾಲಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಎಸ್.ಬಿ.ಹಳಿಗೌಡರ ಉದ್ಘಾಟಿಸಿದರು. ಎಚ್.ಬಿ.ಪಾಟೀಲ, ಎಸ್.ಪಿ.ಕಬ್ಬೂರಮಠ ಇತರರಿದ್ದರು.
Published on:
Copied
Follow Us
ಕುಲಗೋಡ: ಕ್ರೀಡೆ ಕೇವಲ ಮನರಂಜನೆ ಅಲ್ಲ, ಆಟೋಟಗಳು ಮನುಷ್ಯನ ಸರ್ವಾಂಗೀಣ ಅಭಿವೃದ್ಧಿಗೆ ಬುನಾದಿಯಾಗಿದೆ ಎಂದು ತಾಲೂಕು ದೈಹಿಕ ಶಿಣಾಧಿಕಾರಿ ಎಸ್.ಬಿ.ಹಳಿಗೌಡರ ಹೇಳಿದರು.
ಗ್ರಾಮದ ಎನ್ಎಸ್ಎ್ ಶಾಲಾ ಮೈದಾನದಲ್ಲಿ ಸರಸ್ವತಿ ನವೋದಯ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಆಟಗಳಲ್ಲಿ ಸೋಲು-&ಗೆಲುವು ಸಮಾನವಾಗಿ ಸ್ವೀಕರಿಸುವ ಗುಣ ಬೆಳೆಯುತ್ತದೆ. ಮಾನಸಿಕ ಒತ್ತಡ ಕಡಿಮೆ ಮಾಡಿ ಉಲ್ಲಾಸ ಮೂಡಿಸುತ್ತದೆ. ರಕ್ತ ಸಂಚಾರ ಹೆಚ್ಚಿಸಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕ್ರೀಡೆ ಸಹಕಾರಿ ಎಂದರು.