ಸಾಲ ಪಡೆದವರು ಸಕಾಲಕ್ಕೆ ಮರುಪಾವತಿಸಲಿ

ಅನುಘಟ್ಟ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಎಂ.ಎ.ನಾಗರಾಜ್ ಮಾತನಾಡಿದರು. ವೀರಭದ್ರಶೆಟ್ಟಿ, ಎಚ್.ಇ.ಇಂದಿರಾ, ಕೆ.ಜಿ.ಕುಮಾರ್, ಡಿ.ಎಚ್.ಗೌಡ, ವೆಂಕಟೇಶ್, ಮಂಜುನಾಥ್, ಸುಧಾ, ಬಸವರಾಜ್, ನಟರಾಜ್ ಇದ್ದರು.
ಅನುಘಟ್ಟ ಪ್ರಾಥಾಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸರ್ವ ಸದಸ್ಯರ ಸಭೆಯಲ್ಲಿ ಎಂ.ಎ.ನಾಗರಾಜ್ ಮಾತನಾಡಿದರು. ವೀರಭದ್ರಶೆಟ್ಟಿ, ಎಚ್.ಇ.ಇಂದಿರಾ, ಕೆ.ಜಿ.ಕುಮಾರ್, ಡಿ.ಎಚ್.ಗೌಡ, ವೆಂಕಟೇಶ್, ಮಂಜುನಾಥ್, ಸುಧಾ, ಬಸವರಾಜ್, ನಟರಾಜ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಅನುಘಟ್ಟ ಸಹಕಾರ ಸಂಘ
  • ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್

ಬೇಲೂರು:

ಅನುಘಟ್ಟ ಸಹಕಾರ ಸಂಘದಿಂದ ಈವರೆಗೆ ಮೂರು ಕೋಟಿ ರೂ.ಗೂ ಅಧಿಕ ಸಾಲ ಸೌಲಭ್ಯವನ್ನು ಸಂಘದ ಷೇರುದಾರರಿಗೆ ಕಡಿಮೆ ಬಡ್ಡಿ ದರದಲ್ಲಿ ವಿತರಿಸಲಾಗಿದ್ದು, ರೈತರು ಇದರ ಸದೂಪಯೋಗ ಪಡೆದು ಮರು ಪಾವತಿಗೆ ಮುಂದಾಗಬೇಕು ಎಂದು ಎಚ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎ.ನಾಗರಾಜ್ ಹೇಳಿದರು.

ತಾಲೂಕಿನ ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2025-26ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಅನುಘಟ್ಟ ಸಹಕಾರ ಸಂಘ ತಾಲೂಕಿನಲ್ಲಿ ಮುಂಚೂಣಿಯಲ್ಲಿದೆ. ಈಗಾಗಲೇ ರೈತರಿಗೆ ಹೆಚ್ಚಿನ ಸಾಲ ಸೌಲಬ್ಯಗಳನ್ನೂ ಕಲ್ಪಿಸಲಾಗಿದೆ. ಜತೆಗೆ ಹಸು ಸಾಕಣೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮೂರು ಲಕ್ಷ ರೂ. ವರೆಗೆ ಸಾಲ ನೀಡುವ ಯೋಜನೆ ರೂಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ಡೇರಿ ಸ್ಥಾಪಿಸುವ ಗುರಿ ಹೊಂದಲಾಗಿದೆ. ಸದಸ್ಯರು ಸಹಕಾರ ಸಂಘದ ಮೂಲಕವೇ ರಸಗೊಬ್ಬರ ಖರೀದಿಸುವಂತೆ ಮನವಿ ಮಾಡಿದ ಅವರು, ಇದರೊಂದಿಗೆ ಸಂಘದಲ್ಲಿ ಠೇವಣಿ ಇಡುವುದರಿಂದ ಹೆಚ್ಚಿನ ಬಡ್ಡಿ ಸಹ ಪಡೆಯಬಹುದಾಗಿದೆ. ಇದನ್ನು ಷೇರುದಾರರು ಸರಿಯಾಗಿ ಬಳಸಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದರು.
ಸಂಘದ ಅಧ್ಯಕ್ಷ ವೀರಭದ್ರಶೆಟ್ಟಿ ಮಾತನಾಡಿ, ಪ್ರತಿ ಸದಸ್ಯ ಯಶಸ್ವಿನಿ ಯೋಜನೆಯ ಸೌಲಭ್ಯ ಪಡೆಯಬೇಕು. ಸಹಕಾರ ಸಂಘದ ವಿವಿಧ ಸೌಲಭ್ಯಗಳನ್ನು ಪಡೆದುಕೊಳ್ಳುವ ಸದಸ್ಯರು ರಸಗೊಬ್ಬರವನ್ನು ಖಾಸಗಿ ಮಾರಾಟಗಾರರಿಂದ ಖರೀದಿಸುವುದು ಸರಿಯಲ್ಲ. ಸಂಘದಲ್ಲಿಯೇ ಖರೀದಿಸಿದರೆ ಸಂಘಕ್ಕೂ ಲಾಭವಾಗಲಿದ್ದು, ಆ ಲಾಭದಿಂದ ಸಂಸ್ಥೆ ಮತ್ತಷ್ಟು ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಸಹಕಾರ ಸಂಘದ ಅಭಿವೃದ್ಧಿಯಲ್ಲಿ ಸದಸ್ಯರ ಸಹಕಾರ ಅತ್ಯಂತ ಮುಖ್ಯವಾಗಿದ್ದು, ಆ ಮೂಲಕ ದೊರೆಯುವ ಸಾಲ, ರಸಗೊಬ್ಬರ ಹಾಗೂ ಇತರ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ತಿಳಿಸಿದರು.
ಸಂಘದ ಉಪಾಧ್ಯಕ್ಷೆ ಎಚ್.ಇ.ಇಂದಿರಾ, ನಿರ್ದೇಶಕರಾದ ಕೆ.ಜಿ.ಕುಮಾರ್, ಡಿ.ಎಚ್.ಗೌಡ, ವೆಂಕಟೇಶ್, ಮಂಜುನಾಥ್, ಸುಧಾ, ಬಸವರಾಜ್, ನಟರಾಜ್, ಕಾರ್ಯದರ್ಶಿ ಸತೀಶ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net