ಅರ್ಹರಿಗೆ ಸೌಲಭ್ಯಗಳು ಸಿಗಲಿ / ANEKAL

ಆನೇಕಲ್​ನ ಶ್ರೀರಾಮ ಕುಟೀರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಕ್ಕುಪತ್ರ ಪಡೆದ ಫಲಾನುಭವಿಗಳೊಂದಿಗೆ ಶಾಸಕ ಬಿ.ಶಿವಣ್ಣ, ತಹಸೀಲ್ದಾರ್​ ಶಶಿಧರ್​ ಮಾಡ್ಯಾಳ್​, ತಾಪಂ ಇಒ ಬೈರಪ್ಪ, ಎಡಿಎಲ್​ಆರ್​ ಮದನ್​, ಆರ್​ಐ ನಾಗೇಂದ್ರ ಇತರರು ಇದ್ದರು.
ಆನೇಕಲ್​ನ ಶ್ರೀರಾಮ ಕುಟೀರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಕ್ಕುಪತ್ರ ಪಡೆದ ಫಲಾನುಭವಿಗಳೊಂದಿಗೆ ಶಾಸಕ ಬಿ.ಶಿವಣ್ಣ, ತಹಸೀಲ್ದಾರ್​ ಶಶಿಧರ್​ ಮಾಡ್ಯಾಳ್​, ತಾಪಂ ಇಒ ಬೈರಪ್ಪ, ಎಡಿಎಲ್​ಆರ್​ ಮದನ್​, ಆರ್​ಐ ನಾಗೇಂದ್ರ ಇತರರು ಇದ್ದರು.
Published on

ಆನೇಕಲ್​ :

ಜನಪ್ರತಿನಿಧಿಗಳು ಹಾಗೂ ಸರ್ಕಾರಿ ಅಧಿಕಾರಿಗಳು ಬದ್ಧತೆಯಿಂದ ಕಾರ್ಯನಿರ್ವಹಿಸಿದಾಗ ಸರ್ಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ನೇರವಾಗಿ ತಲುಪಿಸಲು ಸಾಧ್ಯ ಎಂದು ಶಾಸಕ ಬಿ. ಶಿವಣ್ಣ ತಿಳಿಸಿದರು.

ಪಟ್ಟಣದ ಶ್ರೀರಾಮ ಕುಟೀರದಲ್ಲಿ ತಾಲೂಕು ಆಡಳಿತದಿಂದ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 94ಸಿ ಅಡಿಯಲ್ಲಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಿ ಮಾತನಾಡಿದರು.

ಜನರಿಗೆ ಮೂಲ ಸೌಕರ್ಯಗಳನ್ನು ಒದಗಿಸುವುದು ಜನಪ್ರತಿನಿಧಿಗಳ ಪ್ರಮುಖ ಜವಾಬ್ದಾರಿ. ಈ ನಿಟ್ಟಿನಲ್ಲಿ ರಸ್ತೆ, ಕುಡಿಯುವ ನೀರು, ವಿದ್ಯುತ್​ ದೀಪ ಸೇರಿ ಅಗತ್ಯ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ.

ವಸತಿರಹಿತ ಬಡವರಿಗೆ ಸ್ವಂತ ಜಾಗದ ಹಕ್ಕು ದೊರೆಯಲು ತಾಲೂಕಿನಾದ್ಯಂತ ಈಗಾಗಲೇ ಸುಮಾರು 8 ಸಾವಿರ ಹಕ್ಕುಪತ್ರಗಳನ್ನು ವಿತರಿಸಲಾಗಿದೆ. ಇದೀಗ ಕಸಬಾ ಹೋಬಳಿಯ ಕಾಲವಹೊಸಹಳ್ಳಿ ಜನತಾ ಕಾಲನಿ, ರಾಚಮಾನಹಳ್ಳಿ, ಮುತ್ತಗಟ್ಟಿ ಜನತಾ ಕಾಲನಿ ಹಾಗೂ ಸಬ್ಬಮಂಗಲ ಸೇರಿದಂತೆ ಗ್ರಾಮಗಳ ಒಟ್ಟು 112 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಉಳಿದ ಅರ್ಹ ಫಲಾನುಭವಿಗಳಿಗೂ ಹಕ್ಕುಪತ್ರ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕರು ಹೇಳಿದರು.

ಮುಖಂಡರಾದ ಪದ್ಮನಾಭ್​, ಬಿ.ಪಿ.ರಮೇಶ್​, ಪಷ್ಪರಾಜ್​,ಅಚ್ಯುತರಾಜ್​, ಗಟ್ಟಿಹಳ್ಳಿ ಶ್ರೀನಿವಾಸ್​, ರಾಜೇಂದ್ರಬಾಬು, ಮಹಂತೇಶ್​, ರೇವಣ್ಣ, ಮುನಿರಾಜು, ಜಿ.ವಿ. ರೆಡ್ಡಿ, ಅಂಬರೀಶ್​, ಅಪ್ಪಾಚಾರಿ, ಆಟೋ ಕೃಷ್ಣಪ್ಪ, ಅಭಿಷೇಕ್​,ಮನೋಹರ್​, ಮಧುಕುಮಾರ್​, ಹರೀಶ್​, ರಾಕೇಶ್​, ವಿನೋದ್​ ಸೇರಿದಂತೆ ಹಲವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net