ಎಸ್‌ಐಆರ್ ಕಾರ್ಯದಲ್ಲಿ ಲೋಪವಾಗದಿರಲಿ

ಮಂಗಲ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು ಅವರು ಮತದಾರರಿಗೆ ಗಣತಿ ಅರ್ಜಿಯನ್ನು ವಿತರಿಸಿದರು. ಕೆ.ಎನ್ ಚೈತ್ರಾ, ವಿದ್ಯಾ, ಮರಿಯಮ್ಮ ಇತರರಿದ್ದರು.
ಮಂಗಲ ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು ಅವರು ಮತದಾರರಿಗೆ ಗಣತಿ ಅರ್ಜಿಯನ್ನು ವಿತರಿಸಿದರು. ಕೆ.ಎನ್ ಚೈತ್ರಾ, ವಿದ್ಯಾ, ಮರಿಯಮ್ಮ ಇತರರಿದ್ದರು.
Published on
ಹನೂರು: ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಕಾರ್ಯದಲ್ಲಿ ಪ್ರತಿಯೊಬ್ಬರೂ ಉತ್ತಮವಾಗಿ ಕಾರ್ಯನಿರ್ವಹಿಸುವುದರ ಮೂಲಕ ಯಾವುದೇ ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮುನಿರಾಜು ತಿಳಿಸಿದರು.

ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿ ಎಸ್‌ಐಆರ್ ಕೇಂದ್ರಕ್ಕೆ ಬುಧವಾರ ಭೇಟಿ ನೀಡಿ ಬೂತ್ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದು ಮಾತನಾಡಿದರು.

ಎಸ್‌ಐಆರ್‌ನಲ್ಲಿ ಪ್ರತಿಯೊಬ್ಬ ಮತದಾರರ ಸಂಪೂರ್ಣ ಮಾಹಿತಿ ಅಗತ್ಯ. ಹಾಗಾಗಿ ಮನೆ ಮನೆಗೆ ತೆರಳಿ ಮತದಾರರಿಗೆ ವಿವರವನ್ನು ಒಳಗೊಂಡ ಗಣತಿ ಅರ್ಜಿಯನ್ನು ನೀಡಿ ಭರ್ತಿ ಮಾಡಿಸಬೇಕು. ಈ ಕಾರ್ಯ ತ್ವರಿತ ಗತಿಯಲ್ಲಿ ಆಗಬೇಕು. ಅರ್ಜಿ ಭರ್ತಿ ಮಾಡುವಲ್ಲಿ ಮತದಾರರಿಗೆ ಗೊಂದಲ ಎನಿಸಿದರೆ ಅಗತ್ಯ ಸಲಹೆ ನೀಡಬೇಕು. ಒಂದು ವೇಳೆ ಸಮಸ್ಯೆಯಾದಲ್ಲಿ ಅಧಿಕಾರಿಗಳ ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಒಟ್ಟಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಸಮರ್ಪಕವಾಗಿ ಆಗಬೇಕು. ಕೇಂದ್ರಕ್ಕೆ ಆಗಮಿಸುವ ಬಿಎಲ್‌ಒಗಳಿಗೆ ಕುಡಿಯುವ ನೀರು, ಶೌಚಗೃಹ ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸಬೇಕು ಎಂದು ತಿಳಿಸಿದರು.

ಬಳಿಕ ಕೆಲವು ಮನೆಗಳಿಗೆ ತೆರಳಿದ ಉಪ ನಿರ್ದೇಶಕರು ಮತದಾರರಿಗೆ ಗಣತಿ ಅರ್ಜಿಯನ್ನು ನೀಡಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆಯು ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದೇ ಅರ್ಜಿಯನ್ನು ಭರ್ತಿ ಮಾಡಿ ಬಿಎಲ್‌ಒಗೆ ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಕೆ.ಎನ್ ಚೈತ್ರಾ, ಗ್ರಾಮ ಆಡಳಿತಾಧಿಕಾರಿ ವಿದ್ಯಾ, ಬಿಎಲ್‌ಒ ಮರಿಯಮ್ಮ, ಹರ್ಷಿತಾ, ರಶ್ಮಿ, ಗ್ರಾಪಂ ಕಂಪ್ಯೂಟರ್ ಅಪರೇಟರ್ ವಸಂತ್‌ಕುಮಾರ್ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net