ಗೌರಿಬಿದನೂರಿನ ಹಿರೇಬಿದನೂರು ದಲಿತ ಕೇರಿಯಲ್ಲಿ ದೇಸಿ ಸಂಭ್ರಮದಲ್ಲಿ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ವೈ.ಟಿ.ಪ್ರಸನ್ನ ಕುಮಾರ್, ಕಲಾವಿದ ಹಾಗೂ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಎಚ್. ನರಸಿಂಹಮೂರ್ತಿ ಇದ್ದರು.
ಗೌರಿಬಿದನೂರು :ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸತಿಕ ಸಂ ಇಡಗೂರು, ಕನ್ನಡ ಮತ್ತು ಸಂಸತಿ ಇಲಾಖೆ ಬೆಂಗಳೂರು ಸಹಾಯಧನದೊಂದಿಗೆ ನಗರದ ಹಿರೇಬಿದನೂರು ದಲಿತ ಕೇರಿಯಲ್ಲಿ ದೇಸಿ ಸಂಭ್ರಮ ಆಯೋಜಿಸಲಾಗಿತ್ತು.
ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸತಿಕ ಸಂಸ್ಥೆ ಅಧ್ಯಕ್ಷ ವೈ.ಟಿ.ಪ್ರಸನ್ನ ಕುಮಾರ್ ಮಾತನಾಡಿ, ದಲಿತ ಕೇರಿಗಳಲ್ಲಿನ ಯುವಕರು ಆಧುನಿಕ ಸಂಸತಿಗೆ ಮರುಳಾಗದೆ ದೇಸಿ ಸಂಸತಿ ಕಡೆ ಒಲವು ತೋರಬೇಕು. ಸ್ಥಳಿಯ ಕೇರಿಗಳಲ್ಲಿನ ಕಲಾ ಪ್ರತಿಭೆಗಳನ್ನು ಹುಡುಕಿ ಅವರನ್ನು ಮುನ್ನೆಲೆಗೆ ತರಲು ಕಾರ್ಯಕ್ರಮ ಆಯೋಜಿಸುತ್ತಿದೆ ಎಂದರು.
ಕಲಾವಿದ ಹಾಗೂ ಎಸ್ಡಿಎಂಸಿ ಮಾಜಿ ಅಧ್ಯಕ್ಷ ಎಚ್.ನರಸಿಂಹಮೂರ್ತಿ ಮಾತನಾಡಿ, ಸ್ಥಳಿಯ ಕಲಾವಿದರಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ತರುವ ಕೆಲಸ ಗೌತಮ ಬುದ್ಧ ಸಾಮಾಜಿಕ ಮತ್ತು ಸಾಂಸತಿಕ ಸಂಸ್ಥೆ ಮಾಡುತ್ತಿದೆ.
ಕಾರ್ಯಕ್ರಮವನ್ನು ದಲಿತ ಮಹಿಳೆಯರಿಂದ ಉದ್ಘಾಟಿಸಿ ತಲೆಮಾರುಗಳ ಜೀವನ ಕ್ರಮದಲ್ಲಿ ಸಾಂಸತಿಕ ಮೈಲುಗಲ್ಲನ್ನು ಹೊಸತನದೊಂದಿಗೆ ಮೂಡಿಸುತ್ತಿರುವುದು ಸಂತಸ ಎಂದರು.
ಸ್ಥಳಿಯರಾದ ಭಾಗ್ಯಮ್ಮ, ಮೂರ್ತಿ ಮುದ್ದು, ಗಂಗಮ್ಮ, ಮಂಗಳಮ್ಮ, ಬಲರಾಮಪ್ಪ ಯಾದಗಿರಿ ಇದ್ದರು.