ಯುವಕರು ದೇಶದ ಪ್ರಗತಿಗೆ ಶ್ರಮಿಸಲಿ country

ಯುವಕರು ದೇಶದ ಪ್ರಗತಿಗೆ ಶ್ರಮಿಸಲಿ country
ಯುವಕರು ದೇಶದ ಪ್ರಗತಿಗೆ ಶ್ರಮಿಸಲಿ country
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಹೇಳಿಕೆ
ಶ್ರೀನಿವಾಸಪುರ: ಸ್ವತಂತ್ರ್ಯ ಬಂದ ನಂತರ ಸಂವಿಧಾನ ನಮ್ಮ ದೇಶ ಪ್ರಜಾತಂತ್ರ ವ್ಯವಸ್ಥೆ, ಮುನ್ನಡೆಯಲು ಜತೆಗೆ ಮೂಲ ಹಕ್ಕುಗಳು, ಕರ್ತವ್ಯಗಳು ಸವಾನತೆ ಎಲ್ಲವನ್ನು ನಮಗೆ ನೀಡಿದೆ ಸಂವಿಧಾನ ಆಶಯಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕೆಂದು ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ತಿಳಿಸಿದರು. country
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಾತನಾಡಿ, ಅಂಬೇಡ್ಕರ್ ರಚಿಸಿದ ಸಂವಿಧಾನ ನಮಗೆ ದಾರಿ ದೀಪವಾಗಿದೆ. ಸವಾನತೆ, ಸ್ವಾತಂತ್ರ್ಯ, ಸಹೋದರತ್ವ ಎಲ್ಲವನ್ನು ನಮಗೆ ನೀಡಿದೆ. ಇವುಗಳನ್ನು ನಿತ್ಯ ನಾವು ಅನುಸರಿಸಿ ದೇಶದ ಪ್ರಗತಿಗೆ ಶ್ರಮಿಸಬೇಕೆಂದು ತಿಳಿಸಿದರು.
ತಾಲೂಕಿನ ಸರ್ವತೋಮುಖ ಅಭಿವೃದ್ಧಿಪಡಿಸುವುದು ನನ್ನ ಆದ್ಯಕರ್ತವ್ಯ. ಈಗಾಗಲೇ ರಸ್ತೆಗಳ ಕಾಮಗಾರಿಗಳು ಸಾಗುತ್ತಿವೆ. ಗ್ರಾಮೀಣ ಭಾಗದಲ್ಲಿ ಮೂಲ ಸೌಲಭ್ಯಗಳು ಒದಗಿಸಲಾಗಿದೆ. ತಾಲೂಕಿನ ಶಾಲಾ-ಕಾಲೇಜುಗಳ ಮೂಲ ಸೌಲಭ್ಯಗಳಿಗೆ ನೀಡುತ್ತಿದ್ದೇನೆ. ಸಮಸ್ಯೆಯನ್ನು ಬಗೆಹರಿಸಲು ಕೈಗಾರಿಕೆಗಳು ಈ ಭಾಗದಲ್ಲಿ ಪ್ರಾರಂಭಿಸಬೇಕೆಂಬುದು ನನ್ನ ಗುರಿಯಾಗಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಸುಧೀಂದ್ರ ಮಾತನಾಡಿ, ಸ್ವತಂತ್ರ್ಯ ಪೂರ್ವ ನಮ್ಮ ದೇಶಕ್ಕೆ ಸ್ವತಂತ್ರ್ಯ ಬರಲು ಪ್ರಾಣ, ತ್ಯಾಗ ಬಲಿದಾನಗಳನ್ನು ವಾಡಿದ ಮಹನೀಯರನ್ನು ಸ್ಮರಿಸಬೇಕು ಎಂದರು.
ಬಿಇಒ ಮುನಿಲಕ್ಷ್ಯಯ್ಯ, ಕಾರ್ಯ ನಿರ್ವಹಣಾ ಅಧಿಕಾರಿ ಸರ್ವೇಶ್, ಸಿಪಿಐ ಶಂಕರಚಾರಿ, ಮುಖ್ಯಅಧಿಕಾರಿ ವಿ.ನಾಗರಾಜ್, ಬಿಆರ್‌ಸಿ ವಸಂತ, ಸಿಡಿಪಿಒ ಬೈರಾರೆಡ್ಡಿ, ಸಹಾಯಕ ಕೃಷಿ ನಿರ್ದೇಶಕ ಮಹೇಶ್ ಬಾಬು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net