ವೀರಶೈವ ಲಿಂಗಾಯತರು ಒಂದಾಗಲಿ

ವಿಜಯಪುರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ನಡೆದ ರಾಜ್ಯಮಟ್ಟದ ಎರಡನೇ ದಿನದ ಕಾರ್ಯಾಗಾರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.
ವಿಜಯಪುರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ನಡೆದ ರಾಜ್ಯಮಟ್ಟದ ಎರಡನೇ ದಿನದ ಕಾರ್ಯಾಗಾರದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಬಸನಗೌಡ ಪಾಟೀಲ ಯತ್ನಾಳ ಅಭಿಮತ
  • ರಾಜ್ಯಮಟ್ಟದ ಕಾರ್ಯಾಗಾರ
ವಿಜಯಪುರ: ವೀರಶೈವ ಲಿಂಗಾಯತರು ಸಂಪ್ರದಾಯ, ಅನ್ನಪ್ರಸಾದ, ಶಿಕ್ಷಣದ ಮಹತ್ವ ಅರಿಯಬೇಕು. ಆ ಮೂಲಕ ಸಮಾಜದ ಜನರಿಗೆ ಒಳಿತು ಮಾಡಬೇಕು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದ ವೀರಶೈವ ಲಿಂಗಾಯತ ಸಮುದಾಯ ಭವನದಲ್ಲಿ ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾ ಕರ್ನಾಟಕ ರಾಜ್ಯ ಘಟಕ ಮತ್ತು ಜಿಲ್ಲಾ ಘಟಕಗಳ ಸಂಯುಕ್ತಾಶ್ರಯದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಾಜ್ಯಮಟ್ಟದ ಎರಡನೇ ದಿನದ ಕಾರ್ಯಾಗಾರದಲ್ಲಿ ಅವರು ಮಾತನಾಡಿ, ಎಲ್ಲರ ಹಿತವನ್ನು ಬಯಸುವ ವೀರಶೈವ ಲಿಂಗಾಯತರೆಲ್ಲರೂ ಒಂದಾಗಬೇಕು. ಅಂದಾಗಲೇ ಸಮಾಜ ಸಮೃದ್ಧಿಯಾಗಲು ಸಾಧ್ಯ. ಯುವ ಜನತೆ ಸಮಾಜ ಸೇವೆಗೆ ಮುಂದಾಗಬೇಕೆಂದು ಸಲಹೆ ನೀಡಿದರು.
ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಸದ್ಗುರು ಅಭಿನವ ಸಿದ್ದಾರೂಢ ಸ್ವಾಮಿಗಳು ಆಶೀರ್ವಚನ ನೀಡಿ, ವೀರಶೈವ ಲಿಂಗಾಯತ ಸಮಾಜದಲ್ಲಿ ಒಗ್ಗೂಡುವ ಕಾರ್ಯವಾಗಬೇಕು. ಮತ್ತೊಬ್ಬರ ಮನಸ್ಸನ್ನು ಯಾವುದೇ ಕಾರಣಕ್ಕೂ ನೋಯಿಸಬಾರದು. ಅಭಿಮಾನ, ಸ್ವಾಭಿಮಾನ ದೊಡ್ಡದು. ವೀರಶೈವ ತತ್ವ ಸಿದ್ಧಾಂತದಂತೆ ಎಲ್ಲರೂ ಕೂಡಿ ನಡೆಯಬೇಕು ಎಂದು ತಿಳಿಸಿದರು.
ಶಿರಶ್ಯಾಡದ ಅಭಿನವ ಮುರಗೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು. ನಂತರ ನಡೆದ ಗೋಷ್ಠಿಯಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಎಚ್.ಎಂ. ರೇಣುಕ ಪ್ರಸನ್ನ ಮಹಾಸಭೆಯ ಸಂವಿಧಾನ ಮತ್ತು ಸಂಘಟನೆ ಕುರಿತು ವಿಶೇಷ ಉಪನ್ಯಾಸ ನೀಡಿದರು.
ರಾಜ್ಯ ಯುವ ಅಧ್ಯಕ್ಷ ಮನೋಹರ ಅಬ್ಬಿಗೆರೆ, ಎಂ.ಜಿ. ಯಾದವಾಡ, ಆರ್.ಎಂ. ತೋಟದ, ಕಮಲಾ ಗೆಜ್ಜಿ, ವಿಜಯಕುಮಾರ ಹುಂಡೇಕಾರ, ಸಹದೇವ ನಾಡಗೌಡರ, ಸಂಗಮೇಶ ಮೇತ್ರಿ ವೇದಿಕೆಯಲ್ಲಿದ್ದರು.
ರಾಜ್ಯ ಘಟಕದ ಅಧ್ಯಕ್ಷ ಶಂಕರ ಬಿದರಿ ಅಧ್ಯಕ್ಷತೆಯಲ್ಲಿ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಹಾಗೂ ಇತರ ವಿಭಾಗಗಳ ಪದಾಧಿಕಾರಿಗಳು ಸಂಯುಕ್ತ ಸಭೆ ನಡೆಯಿತು. ರಾಜ್ಯ ಸಂಘಟನಾ ಕಾರ್ಯದರ್ಶಿ ಬಸವರಾಜ ಸಾಹುಕಾರ, ಎನ್. ಕುಮಸಗಿ, ಉಪಾಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಜಿಲ್ಲಾಧ್ಯಕ್ಷ ವಿ.ಸಿ. ನಾಗಠಾಣ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ವೇದಿಕೆಯಲ್ಲಿದ್ದರು.
ಅಪ್ಪು ಇಟ್ಟಂಗಿ, ಬಸವರಾಜ ಒಂಟಿಗೂಡಿ, ವಿ.ಡಿ. ಐಹೊಳ್ಳಿ, ಮಲ್ಲಿಕಾರ್ಜುನ ಅಮರಣ್ಣವರ, ಮಹಾದೇವ ಹಾಲಳ್ಳಿ, ಸುಭಾಸ ಬೇಟಗೇರಿ, ಈರಣ್ಣ ತೊಂಡಿಕಟ್ಟಿ, ಜಗದೀಶ ಮೋಟಗಿ ಮತ್ತಿತರರಿದ್ದರು. ಸಂಗಮೇಶ ಬದಾಮಿ, ಸುಭಾಸ ಕನ್ನೂರ ನಿರೂಪಿಸಿದರು. ವಿ.ಎಸ್. ತೇಲಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net