ಪ್ರಶಿಕ್ಷಣಾರ್ಥಿಗಳು ಸಮಾಜದ ಉನ್ನತಿಗೆ ಶ್ರಮಿಸಲಿ

ಗುಳೇದಗುಡ್ಡ ತಾಲೂಕಿನ ಸಬ್ಬಲ ಹುಣಸಿ ಗ್ರಾಮದಲ್ಲಿ ನಡೆದ ಪೌರತ್ವ ತರಬೇತಿ ಶಿಬಿರವನ್ನು ಗುರುಸಿದ್ಧೇಶ್ವರ ಬಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಉದ್ಘಾಟಿಸಿದರು. ರಾಜು ಜವಳಿ, ಸುರೇಶ ಘಂಟಿ, ರಂಗಪ್ಪ ಶೇಬಿನಕಟ್ಟಿ, ಎಸ್.ಸಿ, ಗದ್ದಿಗೌಡರ, ಎಚ್.ಎಸ್. ಘಂಟಿ ಇತರರಿದ್ದರು.
ಗುಳೇದಗುಡ್ಡ ತಾಲೂಕಿನ ಸಬ್ಬಲ ಹುಣಸಿ ಗ್ರಾಮದಲ್ಲಿ ನಡೆದ ಪೌರತ್ವ ತರಬೇತಿ ಶಿಬಿರವನ್ನು ಗುರುಸಿದ್ಧೇಶ್ವರ ಬಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಉದ್ಘಾಟಿಸಿದರು. ರಾಜು ಜವಳಿ, ಸುರೇಶ ಘಂಟಿ, ರಂಗಪ್ಪ ಶೇಬಿನಕಟ್ಟಿ, ಎಸ್.ಸಿ, ಗದ್ದಿಗೌಡರ, ಎಚ್.ಎಸ್. ಘಂಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಸಲಹೆ
  • ಪೌರತ್ವ ತರಬೇತಿ ಶಿಬಿರ
ಗುಳೇದಗುಡ್ಡ: ಭವಿಷ್ಯತ್ತಿನಲ್ಲಿ ಶಿಕ್ಷಕರಾಗುವ ಪ್ರಶಿಕ್ಷಣಾರ್ಥಿಗಳು ಸೇವಾ ಮನೋಭಾವನೆ ರೂಢಿಸಿಕೊಂಡು ಸಮಾಜದ ಉನ್ನತಿಗೆ ಶ್ರಮಿಸಬೇಕು ಎಂದು ಪಟ್ಟಣದ ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ಧ ಪಟ್ಟದಾರ್ಯ ಶ್ರೀಗಳು ಹೇಳಿದರು.
ತಾಲೂಕಿನ ಸಬ್ಬಲಹುಣಸಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರ ಹಾಗೂ ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ(ಬಿ.ಇಡಿ) ಮಹಾವಿದ್ಯಾಲಯದ ಆಶ್ರಯದಲ್ಲಿ ಹಮ್ಮಿಕೊಂಡಿರುವ ಪೌರತ್ವ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಮಗಳಲ್ಲಿ ಸ್ವಚ್ಛತೆ, ಶೌಚಾಲಯ ನಿರ್ಮಾಣ ಅದರ ಉಪಯೋಗ, ಸಸಿಗಳ ನೆಡುವಿಕೆ ಉತ್ತಮ ಪರಿಸರದ ಕುರಿತು ಗ್ರಾಮದಲ್ಲಿ ಜಾಗೃತಿ ಮೂಡಿಸುವ ಮೂಲಕ ಮಾದರಿ ಕಾರ್ಯ ಮಾಡಬೇಕೆಂದು ಹೇಳಿದರು.
ಗುರುಸಿದ್ಧೇಶ್ವರ ವಿದ್ಯಾವರ್ಧಕ ಮತ್ತು ಸಾಂಸ್ಕೃತಿಕ ಸಂಸ್ಥೆ ಚೇರ್ಮನ್ ರಾಜು ಜವಳಿ ಮಾತನಾಡಿ, ಹಿರಿಯರಲ್ಲಿ ಮೌಲ್ಯಗಳಿವೆ ಗ್ರಾಮದಲ್ಲಿರುವ ಹಿರಿಯರ ಮಾರ್ಗದರ್ಶನ ಪಡೆದುಕೊಂಡು ಶಾಲಾ ಮೈದಾನ, ಸಾಮಾಜಿಕ ಪರಿಸರ ಸ್ವಚ್ಛಗೊಳಿಸುವ ಕಾರ್ಯ ಮಾಡಬೇಕು ಎಂದರು.
ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸುರೇಶ ಘಂಟಿ ಮಾತನಾಡಿ, ಶಿಕ್ಷಣದಿಂದ ಮಾತ್ರ ಗ್ರಾಮಗಳು ಅಭಿವೃದ್ಧಿ ಹೊಂದುತ್ತವೆ. ಪ್ರಶಿಕ್ಷಣಾರ್ಥಿಗಳು ಗ್ರಾಮದಲ್ಲಿ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದರು.
ಆಡಳಿತಾಧಿಕಾರಿ ರಂಗಪ್ಪ ಶೇಬಿನಕಟ್ಟಿ, ಎಸ್.ಸಿ, ಗದ್ದಿಗೌಡರ, ಪ್ರಾಚಾರ್ಯ ಎಚ್ .ಎಸ್. ಘಂಟಿ ಮಾತನಾಡಿದರು.
ಗ್ರಾಪಂ ಮಾಜಿ ಸದಸ್ಯೆ ರೇಣವ್ವ ನಡೆಶೇಸಿ. ಪೌರತ್ವ ತರಬೇತಿ ಶಿಬಿರದ ಸಂಯೋಜಕಿ ಸಕ್ಕೂಬಾಯಿ ನೆಲ್ಲೂರು, ಗ್ರಾ.ಪಂ. ಮಾಜಿ ಸದಸ್ಯ ದ್ಯಾವಪ್ಪ ನರಹಟ್ಟಿ, ಶಿವಪ್ಪ ಘಂಟಿ, ಪರಸಪ್ಪ ನಡಶೇಶಿ, ರಾಯಪ್ಪ ಘಂಟಿ, ಯಲಗುರ್ದಪ್ಪ ನಡಶೇಸಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ವೈ.ಅರ್. ತಳವಾರ, ಶಿಕ್ಷಕ ಸಿದ್ಧಾರೂಢ ಪರಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net