ನೈಸರ್ಗಿಕ ಸಂಪತ್ತು ಉಳಿಸಲು ಶ್ರಮಿಸಲಿ Cleanliness movement

Cleanliness movement  ರಾಯಲ್ಪಾಡು ಹೋಬಳಿಯ ಗೌನಿಪಲ್ಲಿ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಂದೋಲನಕ್ಕೆ ಬಿ.ವೀರಪ್ಪ, ಎಂ.ಆರ್​.ರವಿ, ಪ್ರವಿಣ್​ ಪಿ.ಬಾಗೇವಾಡಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಎಂ.ಆರ್​.ರವಿ, ಲೋಕಾಯುಕ್ತ ಎಸ್​ಪಿ ಜೆ.ಕೆ.ಅಟೋನಿಜಾನ್​, ನ್ಯಾಯಮೂರ್ತಿ ಅರವಿಂದ್​, ಇಒ ಕೆ.ಸರ್ವೇಶ್​ ಇದ್ದರು.
Cleanliness movement ರಾಯಲ್ಪಾಡು ಹೋಬಳಿಯ ಗೌನಿಪಲ್ಲಿ ಗ್ರಾಪಂ ಆವರಣದಲ್ಲಿ ಹಮ್ಮಿಕೊಂಡಿದ್ದ ಸ್ವಚ್ಛತಾ ಅಂದೋಲನಕ್ಕೆ ಬಿ.ವೀರಪ್ಪ, ಎಂ.ಆರ್​.ರವಿ, ಪ್ರವಿಣ್​ ಪಿ.ಬಾಗೇವಾಡಿ ಚಾಲನೆ ನೀಡಿದರು. ಜಿಲ್ಲಾಧಿಕಾರಿ ಎಂ.ಆರ್​.ರವಿ, ಲೋಕಾಯುಕ್ತ ಎಸ್​ಪಿ ಜೆ.ಕೆ.ಅಟೋನಿಜಾನ್​, ನ್ಯಾಯಮೂರ್ತಿ ಅರವಿಂದ್​, ಇಒ ಕೆ.ಸರ್ವೇಶ್​ ಇದ್ದರು.
Published on
ರಾಯಲ್ಪಾಡು: ಭೂಮಿಯ ಮೇಲಿನ ಎಲ್ಲ ಜೀವಿಗಳಲ್ಲಿ ಬುದ್ದಿವಂತ ಪ್ರಾಣಿ ಎಂದರೆ ಮನುಷ್ಯ. Cleanliness movement ಇಂದು ಮನುಷ್ಯ ತನ್ನ ಸುತ್ತಮುತ್ತಾ ಸ್ವಚ್ಛತೆ ಕಾಪಾಡುವಲ್ಲಿ ವಿಫಲನಾಗಿದ್ದಾನೆ ಎಂದು ಉಪಲೋಕಾಯುಕ್ತ ಬಿ.ವೀರಪ್ಪ ಹೇಳಿದರು.
ಹೋಬಳಿಯ ಗೌನಿಪಲ್ಲಿ ಗ್ರಾಪಂ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಚ್ಛತಾ ಅಂದೋಲನಕ್ಕೆ ಚಾಲನೆ ನೀಡಿ ಮಾತನಾಡಿ, 8 ತಿಂಗಳ ಹಿಂದೆ ಗ್ರಾಪಂ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದಿದ್ದು, ಯಾವ ಗ್ರಾಪಂನಲ್ಲಿ ಸಾರ್ವಜನಿಕರಿಗೆ ಅನುಕೂಲವಿಲ್ಲವೂ ಆ ಗ್ರಾಪಂ ಅಧಿಕಾರಿಯ ವಿರುದ್ಧ ಸುಮೋಟೊ ಕೇಸು ದಾಖಲಿಸಿದ್ದೇನೆ. ಕಾರಣ, ನಮ್ಮ ಸಾರ್ವಜನಿಕರಿಗೆ ಸರ್ಕಾರದ ಸವಲತ್ತುಗಳು ಸಿಗಲಿ ಎಂಬುದೇ ನನ್ನ ಉದ್ದೇಶ ಹಾಗೂ ನಮ್ಮ ತಾಲೂಕನ್ನು ರಾಜ್ಯದಲ್ಲಿ ತಾಲೂಕು ಮಾದರಿ ಮಾಡಬೇಕೆನ್ನುವುದೆ ನನ್ನ ಉದ್ದೇಶ ಎಂದರು.
ಕೇವಲ ಒಂದು ದಿನ ಸ್ವಚ್ಛತೆ ಕಾಪಾಡಿದರೆ ಸಾಲದು ಪ್ರತಿದಿನ ಸ್ವಚ್ಚತೆ ಬಗ್ಗೆ ಕಾಳಜಿ ವಹಿಸಬೇಕು. ಈ ಜೀವನ ಕೇವಲ ಕಾಲ್ಪನಿಕ. ನಾವು ಒಳ್ಳೇಯ ಕೆಲಸ ಮಾಡಿದರೆ ನಮ್ಮ ಜೀವನ ಪರ್ಯಂತ ನಮ್ಮನ್ನು ನೆನೆಯುತ್ತಾರೆ. ನಾವು ಮಾಡುವ ಒಳ್ಳೇಯ ಕೆಲಸಗಳೆ ನಮ್ಮ ಹಿಂದೆ ಬರುತ್ತದೆ ಎಂದರು.
ಸಾರ್ವಜನಿಕರಲ್ಲಿ ಕೈಮುಗಿದು ಕೇಳುತ್ತೇನೆ, ನೈಸರ್ಗಿಕ ಸಂಪತ್ತನ್ನ ಉಳಿಸಿ. ಈಗಾಗಲೇ ಕೊಳವೆ ಬಾವಿ ಕೊರೆದರೆ ನೂರಾರು ಅಡಿಗಳಷ್ಟು ನೀರು ಸಿಗುತ್ತದೆ. ಅದ್ದರಿಂದ ಸಾರ್ವಜನಿಕರು ಪ್ರತಿದಿನ ನಿಮ್ಮ ಮನೆಯ ಸುತ್ತಮುತ್ತಾ ಸ್ವಚ್ಛತೆ ಕಾಪಾಡಿ. ಅಧಿಕಾರಿಗಳು ಶ್ರದ್ಧೆ, ಭಕ್ತಿಯಿಂದ ತಮ್ಮ ಕೆಲಸ ನಿರ್ವಹಿಸಿ, ಆಗ ನಿಮ್ಮ ಕಾಲುಗಳನ್ನು ಮುಟ್ಟುತ್ತೇನೆ. ನೀವು ಸರಿಯಾಗಿ ಕೆಲಸ ಕಾರ್ಯನಿರ್ವಹಿಸದಿದ್ದರೆ ಜೈಲಿಗೆ ಹಟ್ಟುವವರೆಗೂ ನಾನು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಜಿಪಂ ಸಿಇಒ ಪ್ರವಿಣ್​ ಪಿ. ಬಾಗೇವಾಡಿ ಮಾತನಾಡಿ, ಮೊದಲಿಗೆ ನಮ್ಮ ಮನೆಯ ಸುತ್ತಮುತ್ತಾ ಸ್ವಚ್ಛತೆ ಕಾಪಾಡಬೇಕು. ಸ್ವಚ್ಛತೆಯು ಕೇವಲ ಸರ್ಕಾರವಾಗಲಿ, ಸಂಘ&ಸಂಸ್ಥೆಯಿಂದಾಗಲಿ ಮಾಡಲು ಸಾಧ್ಯವಿಲ್ಲ. ಸಾರ್ವಜನಿಕರು ಸರ್ಕಾರ, ಸಂಘ, ಸಂಸ್ಥೆಗಳೊಂದಿಗೆ ಕೈಜೋಡಿಸಬೇಕು. ಆಗ ನಾವು ನೂರನೂರಕ್ಕೆ ಭಾಗ ಈ ಕಾರ್ಯಕ್ರಮವು ಯಶಸ್ವಿಯಾಗಲು ಸಾಧ್ಯ. ಜಿಲ್ಲೆಯಲ್ಲಿ ಒಟ್ಟು 1,232 ಶುದ್ಧ ನೀರಿನ ಘಟಕಗಳಿದ್ದು, ಸದ್ಯ 54 ಶುದ್ಧ ನೀರಿನ ಘಟಕಗಳು ರಿಪೇರಿ ಇದ್ದು, ಅದನ್ನ ಮುಂದಿನ ದಿನಗಳಲ್ಲಿ ಸರಿಪಡಿಸುವುದಾಗಿ ಭರವಸೆ ನೀಡಿದರು.
ನರೇಗಾ ಕಾರ್ಯಕ್ರಮಗಳ ಮೂಲಕ ನೂರಕ್ಕೆ ನೂರರಷ್ಟು ಕಾರ್ಯಕ್ರಮಗಳನ್ನು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಕಾರ್ಯಯೋಜನೆಗಳ ಬಗ್ಗೆ ಸರ್ಕಾರದಿಂದ ಮೆಚ್ಚುಗೆ ವ್ಯಕ್ತವಾಗಿದೆ. ಅದೇ ರೀತಿಯಾಗಿ 18 ಸಾವಿರ ವಾಟರ್​ಶೆಡ್​ ನಿರ್ಮಿಸಲಾಗಿದೆ. ಅದಕ್ಕೆ ನಮಗೆ ನ್ಯಾಷನಲ್​ಅವಾರ್ಡ್​ ಲಭಿಸಿದೆ. ಈ ಸಾಲಿನಲ್ಲಿ ಇದುವರೆಗೂ 21 ಸಾವಿರ ವಾಟರ್​ಶೆಡ್​ ನಿರ್ಮಿಸಲಾಗಿದೆ ಎಂದರು.
ಶ್ರೀನಿವಾಸಪುರ ಪುರಸಭೆ ಮುಖ್ಯಾಧಿಕಾರಿ ವಿ.ನಾಗರಾಜ್​, ವಾಟರ್​ಬೋರ್ಡ್​ ಎಇಇ ಸುರೇಶ್​, ಪಿಡಬ್ಲ್ಯುಡಿ ಎಇಇ ಮಂಜುನಾಥ್​, ಕೃಷಿ ಅಧಿಕಾರಿ ಕೆ.ಮಹೇಶ್​, ಅಬಕಾರಿ ಇಲಾಖೆ ಇನ್​ಸ್ಪೆಕ್ಟರ್​ ಪುಷ್ಪ, ಜಿಪಂ ಸಿಬ್ಬಂದಿ ರಮೇಶ್​, ಶೃತಿ, ರಾಮಪ್ಪ, ಸಿಡಿಪಿಒ ಬೈರೆಡ್ಡಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net