ಪಿಎಂ ಕುಸುಮ್ ಬಿ ಯೋಜನೆ ಸದ್ಬಳಕೆಯಾಗಲಿ

ನುಗ್ಗೇಹಳ್ಳಿಯ ಬಾಗುರು ರಸ್ತೆಯಲ್ಲಿ ವಿದ್ಯುತ್ ಟಿಸಿಗಳ ಶಿಥಿಲ ಕಂಬ, ಎಲ್‌ಟಿ ಕಿಟ್ ಹಾಗೂ ಪರಿವರ್ತಕಗಳ ಮರು ಜೋಡಣೆ ಕಾಮಗಾರಿಗೆ ಶಾಸಕ ಸಿ.ಎನ್. ಬಾಲಕೃಷ್ಣ ಚಾಲನೆ ನೀಡಿದರು. ವಜ್ರಕುಮಾರ್, ಮಹದೇವ್,  ರಂಗೇಗೌಡ, ದೊರೆಸ್ವಾಮಿ, ಪುಟ್ಟಸ್ವಾಮಿ, ಹೊನ್ನೇಗೌಡ, ಬೆಳ್ಳೇಕರ್ ಪ್ರಕಾಶ್, ಸಂಪತ್ ಕುಮಾರ್, ಮಂಜುನಾಥ್ ಸ್ವಾಮಿ, ನಟರಾಜ್ ಯಾದವ್ ಇತರರು ಇದ್ದರು.

Published on
ನುಗ್ಗೇಹಳ್ಳಿ: ಪಿ.ಎಂ. ಕುಸುಮ್ ಬಿ ಯೋಜನೆಯಡಿ ರೈತರು ಸೋಲಾರ್ ಮೋಟಾರ್ ಪಂಪುಗಳ ಅಳವಡಿಕೆಗೆ ಡಿ.31ರವರೆಗೆ ಅರ್ಜಿ ಸಲ್ಲಿಸಬಹುದು ಎಂದು ಶಾಸಕ ಸಿ.ಎನ್. ಬಾಲಕೃಷ್ಣ ತಿಳಿಸಿದರು.

ಹೋಬಳಿ ಕೇಂದ್ರದ ಬಾಗೂರು ರಸ್ತೆಯಲ್ಲಿ ಶಿಥಿಲಗೊಂಡ ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳ ಬದಲಾವಣೆ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.

ಈ ಯೋಜನೆಗೆ ರಾಜ್ಯ ಸರ್ಕಾರ ಶೇ.50, ಕೇಂದ್ರ ಸರ್ಕಾರ ಶೇ.30 ಹಣ ಬಿಡುಗಡೆ ಮಾಡುತ್ತದೆ. ರೈತರು ಶೇ.20 ಹಣ ಮಾತ್ರ ಕಟ್ಟಬೇಕು. ಈ ಯೋಜನೆಯಿಂದ ರೈತರಿಗೆ ಏಳೂವರೆ ಎಚ್‌ಪಿ ಮೋಟಾರ್ ಪಂಪು ಹಾಗೂ ಪೈಪ್‌ಗಳನ್ನು ಸರ್ಕಾರ ನೀಡುತ್ತದೆ. ರೈತರು ಇದರ ಸೌಲಭ್ಯ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ತಾಲೂಕಿನಲ್ಲಿ ನಾಲ್ಕೂವರೆ ಸಾವಿರ ರೈತರ ಅಕ್ರಮ ಕೊಳವೆ ಬಾವಿಗಳಿವೆ. ಈ ಹಿಂದೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ 7 ಸಾವಿರ ಟ್ರಾನ್ಸ್ಫಾರ್ಮರ್ ಗಳನ್ನು ಅಳವಡಿಸಿ 7 ಸಾವಿರ ಕೊಳವೆ ಬಾವಿಗಳ ಪಂಪ್ ಸೆಟ್ಟುಗಳನ್ನು ಸಕ್ರಮಗೊಳಿಸಲಾಗಿದೆ ಎಂದರು.

ತಾಲೂಕಿನಲ್ಲಿ ಶಿಥಿಲ ಗೊಂಡ ವಿದ್ಯುತ್ ಟಿಸಿ ಕಂಬಗಳು, ಎಲ್‌ಟಿ ಕಿಟ್‌ಗಳು ಹಾಗೂ ಪರಿವರ್ತಕಗಳ ಬದಲಾವಣೆಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿ ಟೆಂಡರ್ ಮೂಲಕ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಇಇ ವಜ್ರಕುಮಾರ್, ಮಹದೇವ್, ರಂಗೇಗೌಡ, ಗ್ರಾಪಂ ಅಧ್ಯಕ್ಷ ಹೊನ್ನೆಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ದೊರೆಸ್ವಾಮಿ, ತಾಪಂ ಮಾಜಿ ಸದಸ್ಯ ಬೆಳಗಳ್ಳಿ ಪುಟ್ಟಸ್ವಾಮಿ, ಗ್ರಾಪಂ ಮಾಜಿ ಅಧ್ಯಕ್ಷ ಬಸವನಪುರ ಬೆಳ್ಳೇಕಾರ್ ಪ್ರಕಾಶ್, ಮುಖಂಡರಾದ ಸಂಪತ್ ಕುಮಾರ್, ನಟರಾಜ್, ಕೊಪ್ಪಲು ಮಂಜುನಾಥ ಸ್ವಾಮಿ, ಎಸ್.ಪ್ರಕಾಶ್, ಎಚ್. ಬಿ.ಶೇಖರ್, ಯಲಪ್ಪ, ನಂಜುಂಡೇಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net