ಜನರಿಗೆ ಸೇವೆ ಪಾರದರ್ಶಕವಾಗಿ ದೊರೆಯಲಿ transparently

ಜನರಿಗೆ ಸೇವೆ ಪಾರದರ್ಶಕವಾಗಿ ದೊರೆಯಲಿ transparently
ಜನರಿಗೆ ಸೇವೆ ಪಾರದರ್ಶಕವಾಗಿ ದೊರೆಯಲಿ transparently
Published on
ಶಿಡ್ಲಘಟ್ಟ: ಇಲ್ಲಿನ ನ್ಯಾಯಾಲಯದಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಿರುವುದರಿಂದ ವಾರದಲ್ಲಿ 3 ದಿನಗಳ ಕಾಲ ಅಪರ ಜಿಲ್ಲಾ ನ್ಯಾಯಾಲಯವನ್ನು ಶಿಡ್ಲಘಟ್ಟದಲ್ಲಿ ಮಧ್ಯಂತರವಾಗಿ ನ್ಯಾಯಪೀಠಾಸನ ಕಾರ್ಯನಿರ್ವಹಿಸುವಂತೆ ಮಾಡಿಕೊಡುವುದಾಗಿ ಹೈಕೋರ್ಟ್​ ನ್ಯಾಯಾಮೂರ್ತಿ, ಚಿಕ್ಕಬಳ್ಳಾಪುರ ಆಡಳಿತಾತ್ಮಕ ನ್ಯಾಯಾಧೀಶ ಹಂಚಾಟೆ ಸಂಜೀವಕುಮಾರ್​ ತಿಳಿಸಿದರು.transparently
ನಗರದ ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಇ&ಸೇವಾ ಕೇಂದ್ರ ಮತ್ತು ಅಂಚೆ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಪ್ರಕರಣಗಳ ಸಂಖ್ಯೆ ಹೆಚ್ಚಾದಾಗ ವಕೀಲರು ಚಿಂತಾಮಣಿಗೆ ಹೋಗಿ ಬರಲು ತೊಂದರೆಯಾಗುವುದರಿಂದ ಇಲ್ಲಿಯೇ ನ್ಯಾಯಪೀಠಾಸನ ತೆರೆಯಲಾಗುತ್ತಿದೆ. ನ್ಯಾಯಾಲಯದಲ್ಲಿ ಇ-&ಸೇವಾ ಕೇಂದ್ರ ಸ್ಥಾಪಿಸುವ ಉದ್ದೇಶ ವಕೀಲರಿಗೆ ಮತ್ತು ದಾವೆದಾರರಿಗೆ ಡಿಜಿಟಲ್​ ತಂತ್ರಜ್ಞಾನದ ಮೂಲಕ ಸೇವೆ ಸುಲಭವಾಗಿ, ಪಾರದರ್ಶಕವಾಗಿ ದೊರೆಯಲಿ ಎಂದರು.
ಗಿಡ ನೆಡುವುದರಿಂದ ಪರಿಸರ ಸಂರಕ್ಷಣೆ, ಶುದ್ಧ ಗಾಳಿ, ಮಳೆ ಹೆಚ್ಚಾಗುತ್ತದೆ. ಭೂಮಿಯ ಸಮತೋಲನ ಕಾಪಾಡಲು ಸಾಧ್ಯವಾಗುತ್ತದೆ. ಇಂದು ನಾವು ನೆಡುವ ಗಿಡ ಭವಿಷ್ಯದ ಪೀಳಿಗೆಗೆ ಅಮೂಲ್ಯವಾದ ಕೊಡುಗೆಯಾಗುತ್ತದೆ. ಪ್ರತಿಯೊಬ್ಬರೂ ಗಿಡಗಳನ್ನು ನೆಡುವುದರ ಜತೆಗೆ ಅವುಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನೂ ವಹಿಸಬೇಕು. ಹಸಿರು ಪರಿಸರ ನಿಮಾರ್ಣವು ನಮ್ಮೆಲ್ಲರ ಕರ್ತವ್ಯವಾಗಿದೆ. ಮಿಯಾವಾಕಿ ಪದ್ಧತಿ ಮೂಲಕ ಗಿಡಗಳನ್ನು ನೆಡುವುದರಿಂದ ಕಡಿಮೆ ಜಾಗದಲ್ಲೇ ದಟ್ಟವಾದ ಅರಣ್ಯ ನಿರ್ಮಿಸಬಹುದು. ಇದು ಪರಿಸರ ರಕ್ಷಣೆ, ವಾಯುಮಾಲಿನ್ಯ ನಿಯಂತ್ರಣ, ಜಲಮಟ್ಟದ ವೃದ್ಧಿ ಹಾಗೂ ಜೀವ ವೈವಿಧ್ಯತೆಯ ರಕ್ಷಣೆಗೆ ಸಹಕಾರಿಯಾಗಿದೆ ಎಂದರು.
ಪ್ರಧಾನ ಸಿವಿಲ್​ ನ್ಯಾಯಾಧೀಶೆ ಸಿ.ಎಸ್​.ಸುಕನ್ಯಾ, ಅಪರ ಸಿವಿಲ್​ ನ್ಯಾಯಾಧೀಶೆ ರಂಜಿತಾ, ಭಾವನಾ, ತಾಲೂಕು ವಕೀಲರ ಸಂಘದ ಅಧ್ಯಕ್ಷ ನಾರಾಯಣಸ್ವಾಮಿ, ಕಾರ್ಯದರ್ಶಿ ಭಾಸ್ಕರ್​, ವಕೀಲರಾದ ಎಂ.ಪಾಪಿರೆಡ್ಡಿ, ಶಾಬುದ್ದೀನ್​, ಶಿವಕುಮಾರ್​, ಕೃಷ್ಣಮೂರ್ತಿ, ಅಶೋಕ್​, ಮೋಹನ್​, ಶಾರತ್​ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net