ಅಧಿಕಾರಿಗಳು ಕೆರೆಗೆ ನೀರು ಹರಿಸಲಿ

ಇಂಡಿ ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ಧೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಕಿಸಾನ್ ಸಂಘದ ಸದಸ್ಯರ ಹೋರಾಟದ ಪೂರ್ವಭಾವಿ ಸಭೆ ನಡೆಯಿತು.  ಈರಣ್ಣ ಗೋಟ್ಯಾಳ, ಗುರುನಾಥ ಬಗಲಿ, ಶಂಕ್ರಪ್ಪ ರೂಗಿ, ಶರಣು ತಾರಾಪೂರ ಮತ್ತಿತರರಿದ್ದರು.
ಇಂಡಿ ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ಧೇಶ್ವರ ಮಂಗಲ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಕಿಸಾನ್ ಸಂಘದ ಸದಸ್ಯರ ಹೋರಾಟದ ಪೂರ್ವಭಾವಿ ಸಭೆ ನಡೆಯಿತು. ಈರಣ್ಣ ಗೋಟ್ಯಾಳ, ಗುರುನಾಥ ಬಗಲಿ, ಶಂಕ್ರಪ್ಪ ರೂಗಿ, ಶರಣು ತಾರಾಪೂರ ಮತ್ತಿತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಗುರುನಾಥ ಬಗಲಿ ಎಚ್ಚರಿಕೆ
  • ಪೂರ್ವಭಾವಿ ಸಭೆ
  • ರೈತರ ತಾಳ್ಮೆ ಪರೀಕ್ಷಿಸಿದರೆ ಹೋರಾಟ
ಇಂಡಿ : ತಾಲೂಕಿನ ಎಲ್ಲಾ ಕೆರೆ ಕೊಳ್ಳಗಳಿಗೆ ನೀರು ಹರಿಸಿ ಇಂಡಿ ತಾಲೂಕಿನ ಎಲ್ಲಾ ಕೆರೆಗಳನ್ನು ತುಂಬಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಎಲ್ಲಾ ರೈತರು ಸೇರಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅಖಿಲ ಭಾರತೀಯ ಕಿಸಾನ್ ಸಂಘದ ಕಾರ್ಯಕಾರಣಿ ಸದಸ್ಯ ಗುರುನಾಥ ಬಗಲಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ತಾಲೂಕಿನ ತಡವಲಗಾ ಗ್ರಾಮದ ಜೋಡಗುಡಿಯ ಶ್ರೀ ಮರುಳಸಿದ್ಧೇಶ್ವರ ಮಂಗಲ ಕಾರ್ಯಾಲಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಖಿಲ ಭಾರತೀಯ ಕಿಸಾನ್ ಸಂಘದ ಸದಸ್ಯರ ಹೋರಾಟದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಬರ ತಾಂಡ ವಾಡುತ್ತಿದೆ. ರೈತರು ಸಾಲ ಮಾಡಿ ಬಿತ್ತನೆ ಮಾಡಿದ ಬೆಳೆಗಳು ಸಂಪೂರ್ಣ ಒಣಗಿ ಹೋಗುತ್ತಿವೆ. ಸುದೈವ ಮಹಾರಾಷ್ಟದ ಸಹ್ಯಾದ್ರಿಯ ಮಡಿಲಲ್ಲಿ ಉತ್ತಮ ಮಳೆ ಆಗುತ್ತಿರುವುದರಿಂದ ಕೃಷ್ಣಾ ನದಿ ವ್ಯಾಪಕವಾಗಿ ನೀರು ನದಿಗೆ ಹರಿದು ಬರುತ್ತಿದೆ. ಆಲಮಟ್ಟಿ ಆಣೆಕಟ್ಟು ಸಂಪೂರ್ಣ ತುಂಬಿದೆ. ಈಗ ಆಲಮಟ್ಟಿ ಜಲಾಶಯದಿಂದ ಒಂದು ಲಕ್ಷ ಹತ್ತು ಸಾವಿರ ಕ್ಯೂಸೆಕ್ ನೀರು ಹೊರಹೋಗುತ್ತಿದೆ. ಆದರೆ ಈ ಸಂದರ್ಭದಲ್ಲಿ ಇಂಡಿ ತಾಲೂಕಿನ ಎಲ್ಲಾ ಕೆರೆಗಳು ತುಂಬಲು ನಾಲ್ಕರಿಂದ ಏಳು ಟಿಎಂಸಿ ನೀರು ಸಾಕಾಗುತ್ತದೆ. ದಿನಕ್ಕೆ ಸುಮಾರು ಹತ್ತು ಟಿಎಂಸಿ ನೀರು ಆಲಮಟ್ಟಿ ಜಲಾಶಯದಿಂದ ಹೊರ ರಾಜ್ಯಕ್ಕೆ ಹೋಗುತ್ತದೆ. ಆದರೆ ಮೊದಲು ನಮಗೆ ನೀರು ಹರಿಸಿ ಎಲ್ಲಾ ಕೆರೆ ಕೊಳ್ಳಗಳು ತುಂಬಿಸಲು ಇದು ಒಂದು ಸುವರ್ಣಾವಕಾಶ ಹಾಗಾಗಿ ಅಧಿಕಾರಿಗಳು ನೀರು ಹರಿಸಿ ಕೆರೆಗಳನ್ನು ತುಂಬಿಸಬೇಕು. ಇಲ್ಲವಾದರೆ ತಡವಲಗಾ ಗ್ರಾಮದ ಜೋಡಗುಡಿಯ ಹತ್ತಿರ ಇಂಡಿ-ವಿಜಯಪುರ ರಾಷ್ಟ್ರೀೀಯ ಹೆದ್ದಾರಿಯನ್ನು ತಡೆದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ತಾಲೂಕು ಅಖಿಲ ಭಾರತ ಕಿಸಾನ್ ಸಂಘದ ಅಧ್ಯಕ್ಷ ಈರಣ್ಣ ಗೋಟ್ಯಾಳ, ಸಂಘದ ಮುಖಂಡರಾದ ಮರಳಸಿದ್ಧಪ್ಪ ಖಸ್ಕಿ, ಶಂಕ್ರಪ್ಪ ರೂಗಿ, ಶರಣು ತಾರಾಪೂರ, ಅಂಬ್ಬಣ ಪಂತೋಜಿ, ಧಶಗೀರ್ ಬಾಗವಾನ, ಶರಣು ಪಂತೋಜಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net