ಲಯನ್ಸ್​ ಜನಸೇವೆ ಮತ್ತಷ್ಟು ವಿಸ್ತರಿಸಲಿ / DEVANAHALLI

ದೇವನಹಳ್ಳಿ ಲಯನ್ಸ್​ ಸಂಸ್ಥೆಯ 50ನೇ ವರ್ಷದ ನೆನಪಿಗಾಗಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಲಯನ್ಸ್​ ಅಧ್ಯಕ್ಷ ಎಸ್​.ಶಂಕರ್​ ಅವರಿಗೆ ಹೊಸ ಕಾರು ಮತ್ತು ದಾಖಲಾತಿ ಹಸ್ತಾಂತರಿಸಿದರು.
ದೇವನಹಳ್ಳಿ ಲಯನ್ಸ್​ ಸಂಸ್ಥೆಯ 50ನೇ ವರ್ಷದ ನೆನಪಿಗಾಗಿ ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಅವರು ಲಯನ್ಸ್​ ಅಧ್ಯಕ್ಷ ಎಸ್​.ಶಂಕರ್​ ಅವರಿಗೆ ಹೊಸ ಕಾರು ಮತ್ತು ದಾಖಲಾತಿ ಹಸ್ತಾಂತರಿಸಿದರು.
Published on
ದೇವನಹಳ್ಳಿ : ಗ್ರಾಮೀಣ ಭಾಗದ ಬಡವರ ಬಾಳಿನ ಬೆಳಕಾಗಿ ಪ್ರತಿ ತಿಂಗಳೂ ನೇತ್ರಶಸ್ತ್ರ ಚಿಕಿತ್ಸೆ, ಆರೋಗ್ಯ ಶಿಬಿರಗಳಂತಹ ಸೇವಾಕಾರ್ಯಗಳನ್ನು ನಿರಂತರ ನಡೆಸಿಕೊಂಡು ಬಂದಿರುವ ದೇವನಹಳ್ಳಿ ಲಯನ್ಸ್​ ಸೇವಾ ಸಂಸ್ಥೆ 50ನೇ ವಸಂತಕ್ಕೆ ಕಾಲಿಡುವ ಹೊತ್ತಿನಲ್ಲಿ ಮತ್ತಷ್ಟು ಜನಸೇವೆಗಳನ್ನು ವಿಸ್ತರಿಸಲಿ ಎಂದು ಮಾಜಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಆಶಿಸಿದರು.
ಸಂಸ್ಥೆಗೆ ಉಚಿತವಾಗಿ ಹೊಸ ಮಾರುತಿ ಇಕೋ ಕಾರನ್ನು ಕೊಡುಗೆಯಾಗಿ ಲಯನ್ಸ್​ ಅಧ್ಯಕ್ಷರಿಗೆ ಹಸ್ತಾಂತರಿಸಿ ಮಾತನಾಡಿದ ಮಾಜಿ ಶಾಸಕರು, 49 ವರ್ಷಗಳಿಂದ ಸಾವಿರಾರು ಜನರ ಆರೋಗ್ಯದಲ್ಲಿ ಹೆಚ್ಚಿನ ಪಾತ್ರ ವಹಿಸಲಿದೆ. ಹಲವರ ಬದುಕನ್ನು ಬೆಳಗಿಸಿದ ಲಯನ್ಸ್​ನ 50ನೇ ವರ್ಷದ ಸವಿನೆನಪಿಗಾಗಿ ಈ ಕಾರನ್ನು ನೀಡಲಾಗುತ್ತಿದೆ. ಈ ಮೂಲಕ ಅವರು ತಾಲೂಕಿನ ಹಳ್ಳಿ ಹಳ್ಳಿಗಳಿಗೂ ತೆರಳಿ, ಸೇವಾ ಕಾರ್ಯಗಳನ್ನು ಪ್ರಚುರಪಡಿಸಿ, ರೋಗಿಗಳಿಗೆ ನೆರವಾಗಲಿ ಎಂದರು.
ಇದೇ ವೇಳೆ ನೂರಾರು ಮಹಿಳೆಯರಿಗೆ ಬಾಗಿನ ನೀಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಜೆಡಿಎಸ್​ ಅಧ್ಯಕ್ಷ ಕೆ.ವಿ.ಮಂಜುನಾಥ್​, ತಾಲೂಕು ಯುವ ಘಟಕದ ಟಿ.ರವಿ, ತಾಲೂಕು ಕಾರ್ಯಾಧ್ಯಕ್ಷ ಜಿ.ಎ.ರವೀಂದ್ರ, ಅಧ್ಯಕ್ಷ ಎಸ್​.ಮಹೇಶ್​, ಕುಂದಾಣ ಹೋಬಳಿ ಅಧ್ಯಕ್ಷ ಮನಗೊಂಡನಹಳ್ಳಿ ಜಗದೀಶ್​, ನಾಗರತ್ನಮ್ಮ, ಎಸ್ಸಿ ಘಟಕದ ತಾಲೂಕು ಅಧ್ಯಕ್ಷ ರಾಮಣ್ಣ, ಹಿರಿಯ ಮುಖಂಡ ಗುರಪ್ಪ, ಲಯನ್ಸ್​ ಅಧ್ಯಕ್ಷ ಎಸ್​.ಶಂಕರ್​, ಮಾಜಿ ಅಧ್ಯಕ್ಷರಾದ ವೈ.ಸಿ.ಕೃಪಾಕರ್​, ಶ್ರೀರಾಮಯ್ಯ, ಎಸ್​ಆರ್​ಎಸ್​ ಸತೀಶ್​, ಲಕ್ಷಿ$್ಮನಾರಾಯಣ, ವಿ.ಗೋಪಾಲ್​ ಇತರರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net