ಉಪನ್ಯಾಸಕರು ದಕ್ಷತೆಯಿಂದ ಕೆಲಸ ಮಾಡಲಿ

Let the lecturers work efficiently.
Let the lecturers work efficiently.
Published on
ಶ್ರೀನಿವಾಸಪುರ: ಪ್ರಸ್ತುತ ಸಾಲಿನ ಫಲಿತಾಂಶ ಸಮಾಧಾನವಿಲ್ಲ. ಮುಂದಿನ ವರ್ಷ ಶೇ.90 ಫಲಿತಾಂಶ ಬರಲು ಉಪನ್ಯಾಸಕರು ದಕ್ಷತೆಯಿಂದ ಕೆಲಸ ಮಾಡಬೇಕು ಎಂದು ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸಲಹೆ ನೀಡಿದರು.
ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕ್ರೀಡೆ, ಸಾಂಸತಿಕ ಚಟುವಟಿಕೆ ಹಾಗೂ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪಟ್ಟಣದ ಎರಡೂ ಕಾಲೇಜುಗಳಿಗೆ ಒಂದು ಕಾಲದಲ್ಲಿ ದಾಖಲಾತಿ ಪಡೆದುಕೊಳ್ಳಲು ಸ್ಪರ್ಧೆ ಹೆಚ್ಚಾಗಿ ರಾಜಕಾರಣಿಗಳು ಶಿಫಾರಸು ಮಾಡಬೇಕಾಗಿತ್ತು. ಕಾಲೇಜು ಅಭಿವೃದ್ಧಿಗೆ ಸಹಕಾರ ನೀಡಲಾಗುವುದು. ಜತೆಗೆ ಬಾಲಕರ ಕಾಲೇಜು ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, ಕಾಂಪೌಂಡ್​ ನಿಮಾರ್ಣಕ್ಕೆ ಭೂಮಿಪೂಜೆ ಮಾಡಲಾಗಿದೆ. ಕಾಲೇಜಿಗೆ ಅಗತ್ಯವಿರುವ ಸಭಾಂಗಣ ನಿರ್ಮಿಸಿಕೊಡಲಾಗುವುದು ಎಂದರು.
ಪ್ರಾಂಶುಪಾಲ ಎನ್​.ಶಂಕರೇಗೌಡ ಮಾತನಾಡಿ, ಉತ್ತಮ ಫಲಿತಾಂಶಕ್ಕಾಗಿ ಉಪನ್ಯಾಸಕರು ಸಾಂಘಿಕ ಪ್ರಯತ್ನ ಮಾಡುತ್ತಿದ್ದಾರೆ. ಕಳೆದ ಸಾಲಿನ ದ್ವೀತಿಯ ಪಿಯುಸಿಯಲ್ಲಿ ಒಂಬತ್ತು ಅತ್ಯುನ್ನತ ಶ್ರೇಣಿ, ಐವತ್ನಾಲ್ಕು ವಿದ್ಯಾರ್ಥಿನಿಯರು ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾರೆ. ಶೈಕ್ಷಣಿಕ ಪ್ರಗತಿಗೆ ಪೂರಕವಾಗಿ ಕಾರ್ಯಕ್ರಮ ರೂಪಿಸಿ ಜಾರಿಗೆ ತರಲಾಗಿದೆ ಎಂದರು.
ಸಾಹಿತಿ ಆರ್​.ಚೌಡರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ಸರ್ಕಾರಿ ಶಾಲಾ&ಕಾಲೇಜಿನಲ್ಲಿ ಓದುವುದು ಹೆಮ್ಮೆಯ ಸಂಗತಿಯಾಗಿದ್ದು, ಯಾರು ಕೀಳರಿಮೆ ಹೊಂದಬೇಕಾಗಿಲ್ಲ. ಇಲ್ಲಿ ಕಲಿಯಲು ಒಳ್ಳೆಯ ವಾತಾವರಣವಿದೆ ಎಂದರು.
ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್​ ಮಾತನಾಡಿ, ವಿದ್ಯಾರ್ಥಿನಿಯರು ತಾಳ್ಮೆ ಬೆಳಸಿಕೊಳ್ಳಬೇಕು. ತಾಳ್ಮೆಯಿಂದ ಯಶಸ್ಸು ಸಾಧ್ಯ ಎಂದರು. ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ವೇಣುಗೋಪಾಲರೆಡ್ಡಿ ಮಾತನಾಡಿದರು.
ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಜತೆಗೆ ಕಳೆದ ಸಾಲಿನಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
ಉಪನ್ಯಾಸಕರಾದ ಎನ್​.ಗೋಪಾಲನ್​, ಬಿ.ಎನ್​.ವೀಣಾ, ಜಿ.ವೈ.ಬಾಲಾಜಿ, ಜೆ.ಗೋಪಿನಾಥ್​, ಡಾ.ಫಿಯಾಜ್​ ಅಹಮದ್​, ಆರ್​.ವಿ.ರಘುಪತಿ, ಎಸ್​.ಆರ್​.ಶ್ರೀನಾಥ್​, ಎಸ್​.ವಿ.ಶಿವಾರೆಡ್ಡಿ, ಅನಿಲ್​ ಕುಮಾರ್​, ಮಾನಸಾ ಸುಮಾ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net