ಗಡಿಯಲ್ಲಿ ಭಾಷೆ ಪಸರಿಸಲಿ | language spread across the border

Let the language spread across the border.
Let the language spread across the border.
Published on
ಸಮಾಜ ಸೇವಕ ಸಿಎಂಆರ್​ ಶ್ರೀನಾಥ್​ ಅಭಿಮತ (language)
ಕೋಲಾರ: ರಾಜ್ಯೋತ್ಸವವು ಒಂದು ದಿನಕ್ಕೆ ಸಿಮೀಗೊಳ್ಳಬಾರದು, ಅದು ನಿತ್ಯೋತ್ಸವವಾಗಬೇಕು. ಗಡಿ ಜಿಲ್ಲೆಯ ಪ್ರತಿ ಹಳ್ಳಿಗೂ ಕನ್ನಡವನ್ನು ಪರಿಸುವ ಕೆಲಸ ಸಂ&ಸಂಸ್ಥೆಗಳಿಂದ ಆಗಬೇಕಿದೆ ಎಂದು ಸಮಾಜ ಸೇವಕ ಸಿಎಂಆರ್​ ಶ್ರೀನಾಥ್​ ಹೇಳಿದರು.
ನಗರದ ಪತ್ರಕರ್ತರ ಭವನದಲ್ಲಿ ಸ್ವರ್ಣಭೂಮಿ ೌಂಡೇಷನ್​ ಹಾಗೂ ಕೋಲಾರ ರೋಟರಿ ಕ್ಲಬ್​ನಿಂದ ಭಾನುವಾರ ಹಮ್ಮಿಕೊಂಡಿದ್ದ ನುಡಿ ಸಂಭ್ರಮದಲ್ಲಿ ಮಾತನಾಡಿ, ಕನ್ನಡ ನಾಡು, ನುಡಿ ರಾಜ್ಯದ ಪ್ರತಿಯೊಬ್ಬರ ಭಾಷೆಯ ಪ್ರತಿಕ, ಇದು ನಮ್ಮ ಕನ್ನಡ ಭಾಷೆಯ ಹೆಮ್ಮೆ ಎಂದರು.
ಚೋಳರು, ಗಂಗರು ಆಳ್ವಿಕೆ ನಡೆಸಿರುವ ನಾಡು ಕೋಲಾರ ಜಿಲ್ಲೆ. ನೆಲದ ಸಂಸತಿ, ಕೆಲ, ಸಾಹಿತ್ಯವನ್ನು ಶ್ರೀಮಂತಗೊಳಿಸುವ ಮೂಲಕ ಕನ್ನಡವನ್ನು ಉನ್ನತ ಸ್ಥಾನಮಾನಕ್ಕೆ ಏರಿಸಿದ್ದಾರೆ ಎಂದರು.
ನಾನು ಒಬ್ಬ ಕನ್ನಡಿಗ ಎಂದು ರಾಜ್ಯದಲ್ಲಿ ಪ್ರತಿಯೊಬ್ಬರೂ ನಾನು ಕೋಲಾರದ ಹೆಮ್ಮೆಯ ಪುತ್ರ ಎಂದು ಧೈರ್ಯವಾಗಿ ಹೇಳುವ ಶಕ್ತಿ ಆ ಒಂದು ನಾಡ ಧ್ವಜದಲ್ಲಿನ ಅರಿಶಿಣ&ಕುಂಕುಮ ಬಣ್ಣ ನೀಡಿದೆ. ರಾಷ್ಟ$ಧ್ವಜಕ್ಕೆ ನೀಡುವ ಗೌರವವನ್ನೇ ರಾಜ್ಯದ ಜನತೆ ನಾಡ ದ್ವಜಕ್ಕೂ ನೀಡಿದರೆ ಅದು ನಿಜವಾದ ಆಚರಣೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಸ.ರುನಾಥ್​, ಸ್ವರ್ಣಭೂಮಿ ೌಂಡೇಷನ್​ ಸಂಸ್ಥಾಪಕ ಬಿ.ಶಿವಕುಮಾರ್​, ಚುಟುಕು ಸಾಹಿತ್ಯ ಪರಿಷತ್​ನ ಪಿ.ನಾರಾಯಣಪ್ಪ, ಸುಬ್ಬರಾಮಯ್ಯ, ಗಮನ ಸಂಸ್ಥೆಯ ಶಾಂತಮ್ಮ, ಕಾ.ಹು.ಚಾನ್​ಪಾಷ, ಇಂಚರ ನಾರಾಯಣಸ್ವಾಮಿ, ಆನಂದರೆಡ್ಡಿ, ಪ್ರೊ.ಷಕೀರಖಾನಂ, ರಮೇಶ್​, ಬಿ.ಆರ್​.ರವೀಂದ್ರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net