ಬಡ ಮಕ್ಕಳು ಓದುವ ಶಾಲೆಗಳಿಗೆ ಪುಸ್ತಕವನ್ನು ಕೊಡುಗೆ ನೀಡುವ ಮೂಲಕ ಓದುವ ಸಂಸ್ಕೃತಿ ಹೆಚ್ಚಿಸುವ ಅಗತ್ಯವಿದೆ. ಉತ್ತರ ಕರ್ನಾಟಕ, ಹೈದರಾಬಾದ್ ಕರ್ನಾಟಕ ಮತ್ತು ಉತ್ತರ ಕನ್ನಡದಲ್ಲಿ ಹೆಚ್ಚು ಪುಸ್ತಕಗಳನ್ನು ಓದುಗರು ಖರೀದಿಸುತ್ತಿದ್ದಾರೆ. ವಿವಿಧ ತಂತ್ರಜ್ಞಾನ ಮೂಲಕ ಪುಸ್ತಕಗಳನ್ನು ಓದುವವರ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಕಣ್ಣಿಗೆ ಹಾನಿಯಾಗುತ್ತದೆ. ಕೈಯಲ್ಲಿ ಪುಸ್ತಕ ಓದಿದರೆ ಕಣ್ಣಿಗೂ ಸುಖ, ಮನಸ್ಸಿಗೂ ಮುದ ನೀಡುತ್ತದೆ. ಜೊತೆಗೆ, ಆರೋಗ್ಯವೂ ಉಳಿಯುತ್ತದೆ. ಇಂದಿನ ಕಾಲಘಟ್ಟದಲ್ಲಿ ತಂತ್ರಜ್ಞಾನಕ್ಕೆ ದಾಸರಾಗಿ ಭೌತಿಕ ಸೂಕ್ಷ್ಮತೆ ಕಳೆದುಕೊಳ್ಳುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.