ಸರ್ಕಾರ ಮದ್ಯ ಮಾರಾಟ ನಿಷೇಽಸಲಿ

ಶಹಾಪುರ ತಾಲೂಕಿನ ಭೀಮರಾಯನ ಗುಡಿ ಕೃಷಿ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವ್ಯಸನಮುಕ್ತ ದಿನ ಕಾರ್ಯಕ್ರಮವನ್ನು ಶಾಸಕ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಶ್ರೀ ಡಾ.ನಿಶ್ವಲಾನಂದನಾಥ ಸ್ವಾಮೀಜಿ, ಇಳಕಲ್ ಶ್ರೀ ಗುರುಮಹಾಂತ ಸ್ವಾಮೀಜಿ, ಶ್ರೀ ಬಸವಯ್ಯ ಸ್ವಾಮೀಜಿ, ಶರಣಪ್ಪ ಸಲಾದಪುರ ಇತರರಿದ್ದರು.
ಶಹಾಪುರ ತಾಲೂಕಿನ ಭೀಮರಾಯನ ಗುಡಿ ಕೃಷಿ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವ್ಯಸನಮುಕ್ತ ದಿನ ಕಾರ್ಯಕ್ರಮವನ್ನು ಶಾಸಕ ಶರಣಬಸಪ್ಪ ದರ್ಶನಾಪುರ ಉದ್ಘಾಟಿಸಿದರು. ಶ್ರೀ ಡಾ.ನಿಶ್ವಲಾನಂದನಾಥ ಸ್ವಾಮೀಜಿ, ಇಳಕಲ್ ಶ್ರೀ ಗುರುಮಹಾಂತ ಸ್ವಾಮೀಜಿ, ಶ್ರೀ ಬಸವಯ್ಯ ಸ್ವಾಮೀಜಿ, ಶರಣಪ್ಪ ಸಲಾದಪುರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶ್ರೀ ಡಾ.ನಿಶ್ವಲಾನಂದನಾಥ ಸ್ವಾಮೀಜಿ ಸಲಹೆ
  • ಶಹಾಪುರದಲ್ಲಿ ರಾಜ್ಯ ಮಟ್ಟದ ವ್ಯಸನಮುಕ್ತ ದಿನಾಚರಣೆ
ಶಹಾಪುರ:

ಲೆಕ್ಕವಿದಷ್ಟು ಕುಟುಂಬಗಳ ಸರ್ವನಾಶಕ್ಕೆ ಕಾರಣವಾಗಿರುವ ಮದ್ಯ ಮಾರಾಟವನ್ನು ರಾಜ್ಯದಲ್ಲಿ ಸಂಪೂರ್ಣ ನಿಷೇಽಸಬೇಕು. ಇದರಿಂದ ಬರುವ ಆದಾಯವನ್ನು ಶ್ರೀಮಂತರು ಬಳಸುವ ವಸ್ತುಗಳ ಮೇಲೆ ಹೆಚ್ಚಿನ ತೆರಿಗೆ ಹಾಕಿ ಸರಿದೂಗಿಸಬೇಕು ಎಂದು ಬೆಂಗಳೂರಿನ ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿಶ್ವಲಾನಂದನಾಥ ಸ್ವಾಮೀಜಿ ಸರ್ಕಾರಕ್ಕೆ ಸಲಹೆ ನೀಡಿದರು.

ಚಿತ್ತರಗಿ ಇಳಕಲï ಶ್ರೀ ವಿಜಯಮಹಾಂತೇಶ್ವರ ಸಂಸ್ಥಾನದ ಲಿಂ.ಡಾ.ಮಹಾAತ ಶಿವಯೋಗಿಗಳ ಜಯಂತಿ ನಿಮಿತ್ತ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿ¯್ಲÁಡಳಿತ, ಜಿಲ್ಲಾ ಪಂಚಾಯಿತಿ ನಗರಸಭೆ ಸಹಯೋಗದಡಿ ಭೀಮರಾಯನ ಗುಡಿ ಕೃಷಿ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಮಟ್ಟದ ವ್ಯಸನಮುಕ್ತ ದಿನ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಅವರು, ಮದ್ಯದ ಜತೆ ಗಾಂಜÁ, ಡ್ರU್ಸï, ಅಫೀಮು ಹೀಗೆ ನಾನಾ ತರಹದ ನಶೆಭರಿತ ಚಟಗಳಿಗೆ ಯುವ ಸಮೂಹ ಹೆಚ್ಚು ಬಲಿಯಾಗುತ್ತಿದೆ. ಹಳ್ಳಿಗಳಲ್ಲಿ ಎಗ್ಗಿಲ್ಲದೆ ಮಾರಾಟ ಆಗುತ್ತಿರುವುದರಿಂದ ಕುಟುಂಬಗಳು ಬೀದಿಗೆ ಬರುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.
ದೇಶದಲ್ಲಿ ಶೇ.೩೯ ಯುವ ಸಮೂಹವಿದೆ. ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.೪೯ ಜನರು ದುಡಿದರೆ, ಉಳಿದವರು ದುಡಿಯದೇ ಇರುವವರು. ಇಂಥವರಲ್ಲಿ ಬಹುತೇಕರು ಬೇರೆ-ಬೇರೆ ಕಾರಣಗಳಿಂದ ವ್ಯಸನಿಗಳಾಗುತ್ತಿz್ದÁರೆ. ಅದರಲ್ಲೂ ಯುವಕರು ಬಲಿಯಾಗಿ ಆರೋಗ್ಯ ಕೆಡಿಸಿಕೊಂಡು ಜೀವನ ವ್ಯರ್ಥ ಮಾಡಿಕೊಳ್ಳುತ್ತಿz್ದÁರೆ. ಕಾರಣ ಮಂಡಳಿ ಜತೆ ಜನರು ಕೈಜೋಡಿಸಬೇಕು. ಸರ್ಕಾರಗಳು ಸಹ ಗಟ್ಟಿ ನಿರ್ಧಾರ ಕೈಗೊಳ್ಳುವ ಮೂಲಕ ಮದ್ಯ ಸೇರಿ ಎಲ್ಲ ನಶೆಭರಿತ ವಸ್ತುಗಳ ಮಾರಾಟ ಸಂಪೂರ್ಣ ನಿಷೇಽಸಬೇಕು ಎಂದರು.
ಚಿತ್ತರಗಿ-ಇಳಕಲï ವಿಜಯಮಹಾಂತೇಶ್ವರ ಸಂಸ್ಥಾನ ಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಮಾತನಾಡಿ, ಶ್ರೀ ಡಾ.ಮಹಾಂತ ಶಿವಯೋಗಿಗಳು ವ್ಯಸನಮುಕ್ತ ಸಮಾಜ ನಿರ್ಮಾಣಕ್ಕಾಗಿ ೪೮ ವರ್ಷ ಸುಮಾರು ೧೦ ಸಾವಿರ ಗ್ರಾಮಗಳಿಗೆ ಸಂಚರಿಸಿ ಜೋಳಿಗೆ ಹಿಡಿದು ಚಟಗಳನ್ನು ಬಿಡಿಸುವ ಮೂಲಕ ಮಹಾನ್ ಸಾಧನೆ ಮಾಡಿz್ದÁರೆ. ನಾವು ವ್ಯಸನಿಗಳಾಗಲ್ಲ ಎಂದು ಮಕ್ಕಳು ಇಂದೇ ಶಪಥ ಮಾಡಬೇಕು ಎಂದು ಹಿತೋಪದೇಶ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಶರಣಬಸಪ್ಪ ದರ್ಶನಾಪುರ ಮಾತನಾಡಿ, ಮದ್ಯ ಸೇರಿ ಬೇರೆ ಮಾದಕ ವ್ಯಸನಗಳ ನಿಯಂತ್ರಣಕ್ಕೆ ಜನರಲ್ಲಿ ಅರಿವು ಮುಖ್ಯ. ಮಂಡಳಿ ಜÁಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಆದರೆ ನಮ್ಮ ಕುಟುಂಬ ಇದರಿಂದ ಹಾಳಾಗುತ್ತದೆ ಎಂಬ ಕಲ್ಪನೆ ಬಂದಾಗಲೇ ವ್ಯಸನ ಬಿಡಲು ಸಾಧ್ಯ ಎಂದು ಹೇಳಿದರು.
ಸರ್ಕಾರಗಳ ನಿರ್ವಹಣೆಗೆ ಹೆಚ್ಚಿನ ಸಹಕಾರಿಯಾಗುತ್ತದೆ ಎಂಬ ಕಾರಣಕ್ಕೆ ಪರವಾನಗಿ ಇಲ್ಲದ ಕಡೆ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಡುವುದು ತಪ್ಪು. ಇದರಿಂದ ಸಮಾಜದ ಸ್ವಾಸ್ಥ ಹಾಳಾಗುತ್ತದೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಿಂತನೆ ಮಾಡಿ ಕಾನೂನು ಬಿಗಿಗೊಳಿಸಿ ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.
ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಪ್ರಾಸ್ತಾವಿಕ ಮಾತನಾಡಿದರು. ಚರಬಸವೇಶ್ಚರ ಗದ್ದುಗೆಯ ಶ್ರೀ ಬಸವಯ್ಯ ಶರಣರು, ಜಮಖಂಡಿ ಶ್ರೀಗಳು, ಕಾಡಾ ಅಧ್ಯಕ್ಷ ಬಾಬು ಹೊನ್ನಾನಾಯಕ, ನಗರ ಯೋಜನಾ ಪ್ರಾಽಕಾರ ಅಧ್ಯಕ್ಷ ಸಿದ್ದಣ್ಣ ಆರಬೋಳ, ತಹಸೀಲ್ದಾರ್ ಸಿz್ದÁರೂಡ ಬನ್ನಿಕೊಪ್ಪ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಽಕಾರಿ ಬಸವರಾಜ ಶರಬೈ ಇತರರಿದ್ದರು. ಮದ್ಯಪಾನ ಸಂಯಮ ಮಂಡಳಿ ಕಾರ್ಯದರ್ಶಿ ಎನ್.ಎಸ್. ಮಹೇಶ ಸ್ವಾಗತಿಸಿದರು. ಜ್ಯೋತಿಲತಾ ತಡಿಬಿಡಿಮಠ ನಿರೂಪಣೆ ಮಾಡಿದರು.

ಅಽಕಾರದ ಆಸೆ ನನಗಿಲ್ಲ

ರಾಜ್ಯ ಮಟ್ಟದ ಈ ಕಾರ್ಯಕ್ರಮಕ್ಕೆ ಡಿಸಿ ರಾಹುಲ್ ಪಾಂಡ್ವೆ ಅಸಹಕಾರ ತೋರಿದ್ದಾರೆ. ಎರಡು ಸಲ ಸಭೆ ಮಾಡುವಾಗ ಕಡ್ಡಾಯವಾಗಿ ಇರಬೇಕೆಂದು ಹೇಳಿದರೂ ತಪ್ಪಿಸಿಕೊಂಡಿದ್ದಾರೆ. ನಾನೊಬ್ಬ ಸಂಪುಟ ದರ್ಜೆ ಮಂಡಳಿ ಅಧ್ಯಕ್ಷ. ನನ್ನ ಮಾತಿಗೆ ಕಿಮ್ಮತ್ತು ನೀಡಿಲ್ಲ ಎಂದು ಮದ್ಯಪಾನ ಸಂಯಮ ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಅಸಮಾಧಾನ ಹೊರಹಾಕಿದರು. ಟಾರ್ಗೆಟ್ ಮುಟ್ಟಲು ಎಲ್ಲ ಕಡೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಪೊಲೀಸರು ಸೇರಿ ಎಲ್ಲ ಹಂತದಲ್ಲೂ ಅಽಕಾರಿಗಳು ಮಾಮೂಲು ತಿನ್ನುವುದರಲ್ಲಿ ಬಿಜಿಯಾಗಿದ್ದಾರೆ. ಇದನ್ನು ಯಾರು ತಡೆಯಬೇಕು? ಈ ನನ್ನ ಮಾತಿನಿಂದ ಅಽಕಾರ ಹೋದರೂ ಪರವಾಗಿಲ್ಲ. ಜನರನ್ನು ಸಾಯಿಸಿ ಸರ್ಕಾರ ನಡೆಸಬಾರದು. ಆ.೧೬ರಂದು ಕೊಪ್ಪಳ ಜಿ¯್ಲÉ ಹಟ್ಟಿ ಗ್ರಾಮಕ್ಕೆ ಸಂಯಮ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಹೇಳಿದರು.
"

ನಗರ ಪ್ರದೇಶಗಳಲ್ಲಿ ಡ್ರU್ಸï ಹಾವಳಿ ಮಿತಿಮೀರಿದ್ದು, ಕೇಂದ್ರ ಸರ್ಕಾರ ಗಮನಹರಿಸಿ ನಿಯಂತ್ರಣಕ್ಕೆ ಮುಂದಾಗಬೇಕು. ಈ ನಿಟ್ಟಿನಲ್ಲಿ ಇಲಕಲï ಮಹಾಂತ ಶ್ರೀಗಳ ಕಾರ್ಯ ಶ್ಲಾಘನೀಯ. ಮಂಡಳಿ ಅಧ್ಯಕ್ಷ ಶರಣಪ್ಪ ಸಲಾದಪುರ ಉತ್ತಮ ಕೆಲಸ ಮಾಡುತ್ತಿz್ದÁರೆ.| ಶರಣಬಸಪ್ಪ ದರ್ಶನಾಪುರ ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net