ಉಪನ್ಯಾಸಕ ಇಸ್ಮಾಯಿಲ್ ಮಾತನಾಡಿ, ಮನುಷ್ಯ ಆಡಂಬರದ ಜೀವನಕ್ಕೆ ಮಾರಿಹೋಗಿದ್ದಾನೆ. ಇದರ ಗುಂಗಿನಲ್ಲಿ ತಾನು ಏನು ಮಾಡುತ್ತಿದ್ದಾನೆ ಎಂಬುದರ ಅರಿವೇ ಇಲ್ಲದಂತಾಗಿದೆ. ತನ್ನ ಅಗತ್ಯತೆ ಹಾಗೂ ತಾನು ಮಾಡಿದ ತಪ್ಪಿಗೆ ಶಿಕ್ಷೆ, ಪಶ್ಚಾತಾಪ ಪಡಬೇಕಾದ ಕಾಲ ಸನ್ನಿಹಿತವಾಗುತ್ತಿದ್ದು, ಅದಕ್ಕೂ ಮುನ್ನವೇ ತಪ್ಪನ್ನು ತಿದ್ದುಕೊಳ್ಳಬೇಕಾಗಿದೆ. ಈ ದಿಸೆಯಲ್ಲಿ ಮನುಷ್ಯ ಆಡಂಬರದ ಬದುಕಿಗೆ ಅಂತ್ಯ ಹಾಡಿ, ಪರಿಸರದ ಮೇಲಾಗುತ್ತಿರುವ ದೌರ್ಜನ್ಯಕ್ಕೆ ಕಡಿವಾಣ ಹಾಕಬೇಕು ಎಂದರು.