ಸಮಾಜದ ಏಳಿಗೆಗಾಗಿ ಗಾಣಿಗರು ಒಗ್ಗಟ್ಟಾಗಲಿ

ಹುಣಸಗಿಯಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಡಾ.ಸುರೇಶ ಸಜ್ಜನ್​ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬಸವರಾಜ ಸಜ್ಜನ್​, ರಾಜು ಸಾಲವಾಡಗಿ ಇತರರಿದ್ದರು.
ಹುಣಸಗಿಯಲ್ಲಿ ಗುರುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಡಾ.ಸುರೇಶ ಸಜ್ಜನ್​ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು. ಬಸವರಾಜ ಸಜ್ಜನ್​, ರಾಜು ಸಾಲವಾಡಗಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯಾಧ್ಯಕ್ಷ ಸುರೇಶ ಸಜ್ಜನ್​ ಕರೆ
  • ಹುಣಸಗಿಯಲ್ಲಿ ಸನ್ಮಾನ ಕಾರ್ಯಕ್ರಮ
ಹುಣಸಗಿ: ಗಾಣಿಗ ಸಮಾಜ ಒಗ್ಗಟ್ಟಾದಾಗ ಮಾತ್ರ ರಾಜಕೀಯ ಸ್ಥಾನಮಾನ ಜತೆ ಆರ್ಥಿಕ ಮತ್ತು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಾಧ್ಯ ಎಂದು ಸಮಾಜದ ರಾಜ್ಯಾಧ್ಯಕ್ಷ ಡಾ.ಸುರೇಶ ಆರ್​.ಸಜ್ಜನ್​ ಹೇಳಿದರು.
ಪಟ್ಟಣದಲ್ಲಿ ಗಾಣಿಗ ಸಮಾಜ ಗುರುವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ವೀರಶೈವ ಲಿಂಗಾಯತ ಒಳಪಂಗಡಗಳು ತಮ್ಮದೇ ಆದ ಸಂಟನೆಗಳನ್ನು ಕಟ್ಟಿಕೊಂಡು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿವೆ. ಅದೇ ರೀತಿ ಗಾಣಿಗ ಸಮಾಜವನ್ನು ಶೈಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಬಲಿಷ್ಠಗೊಳಿಸುವ ಉದ್ದೇಶದಿಂದ ರಾಜ್ಯಾಧ್ಯರ ಜವಾಬ್ದಾರಿ ವಹಿಸಿಕೊಂಡಿರುವುದಾಗಿ ತಿಳಿಸಿದರು.
ಸಮಾಜದ ಮಕ್ಕಳಲ್ಲಿ ಶಿಣ ಜತೆ ಸಂಸ್ಕಾರ, ಶಿಸ್ತು ಮತ್ತು ಸಾಮಾಜಿಕ ಪ್ರೆ ಬೆಳೆಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಾಲಕರು ಮಕ್ಕಳ ಭವಿಷ್ಯ ರೂಪಿಸುವತ್ತ ಹೆಚ್ಚಿನ ಗಮನಹರಿಸಬೇಕು ಎಂದು ಸಲಹೆ ನೀಡಿದ ಸಜ್ಜನ್​, ಸಮಾಜದ ಯುವಕರು ರಾಜಕೀಯ, ಶಿಣ, ಉದ್ಯೋಗ ಸೇರಿ ವಿವಿಧ ಕ್ಷೇತ್ರಗಳಲ್ಲಿ ಹೆಚ್ಚಿನ ಅವಕಾಶ ಪಡೆದು ಸಾಧನೆಯತ್ತ ಮುಂದಡಿ ಇಡಬೇಕು ಎಂದು ಕಿವಿಮಾತು ಹೇಳಿದರು.
ಮುಖಂಡ ಗುರುಲಿಂಗಪ್ಪ ಸಜ್ಜನ್​ ಮಾತನಾಡಿ, ಸುರೇಶ ಸಜ್ಜನ್​ ಸಹಕಾರ, ಶೈಣಿಕವಾಗಿ ವೀರಶೈವ ಸಮಾಜಕ್ಕೆ ನೀಡಿದ ಕೊಡುಗೆ ಬಗ್ಗೆ ತಿಳಿಸಿದರು.
ಮುಖಂಡರಾದ ಬಸವರಾಜ ಸಜ್ಜನ್​ ಹಾಗೂ ರಾಜು ಸಾಲವಾಡಗಿ ಮಾತನಾಡಿದರು. ಪ್ರಮುಖರಾದ ಚಂದ್ರಶೇಖರ ಬೋರಮಗುಂಡ, ನಿಂಗನಗೌಡ ಕಲ್ಲದೇವನಹಳ್ಳಿ, ಚಂದ್ರಶೇಖರ ಸಜ್ಜನ್​, ಪ್ರಕಾಶ ಸಜ್ಜನ್​, ಪರಮಣ್ಣ ಕಮತಗಿ ಕಕ್ಕೇರಾ, ವಿಜಯಕುಮಾರ ಗುಡಗುಂಟಿ, ಪರಮಾನಂದ ಚಟ್ಟಿ, ನಾಗಪ್ಪ ಸಜ್ಜನ್​, ಬಸವರಾಜ ಕಮತಗಿ ಕಕ್ಕೇರಾ ಇತರರಿದ್ದರು. ಸಂಗಮ್ಮ ಸಜ್ಜನ್​ ಸ್ವಾಗತಿಸಿ ನಿರೂಪಣೆ ಮಾಡಿದರು. ಶ್ರೀಶೈಲ್​ ಸಜ್ಜನ್​ ವಂದಿಸಿದರು.
ನಂತರ ಡಾ.ಸುರೇಶ ಸಜ್ಜನ್​, ಎಸ್​ಎಸ್​ಎಲ್​ಸಿ, ಪಿಯುಸಿ, ಸೈನಿಕ ಹಾಗೂ ವೈದ್ಯಕಿಯ ೇತ್ರಗಳಲ್ಲಿ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net