ಸ್ಪರ್ಧಾತ್ಮಕ ಕಾರ್ಯಕ್ರಮ ನಿರಂತರ ನಡೆಯಲಿ

ಹುಮನಾಬಾದ್​ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಚಿತ್ರಕಲಾ ಸ್ಪರ್ಧೆ ಹಾಗೂ ಕಲಾ&ವಿಚಾರಧಾರೆ ಕಾರ್ಯಕ್ರಮವನ್ನು ಸಾವಿತ್ರಿಬಾಯಿ ಫುಲೆ ಶಿಕಿಯರ ಸಂದ  ಶರಣಮ್ಮ ನಾರಾಯಣಪೇಟ್ಕರ್​ ಉದ್ಘಾಟಿಸಿದರು. ಸಂಗಮ ಎಂ.ಸಜ್ಜನ, ಶಿವಸ್ವಾಮಿ ಚೀನಕೇರಾ, ಸುನೀತಾ ಪಾಟೀಲ್​, ನಾಗರಾಜ, ಚನ್ನವಿರ ಚಿನೈರೆ ಇತರರಿದ್ದರು.
ಹುಮನಾಬಾದ್​ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಚಿತ್ರಕಲಾ ಸ್ಪರ್ಧೆ ಹಾಗೂ ಕಲಾ&ವಿಚಾರಧಾರೆ ಕಾರ್ಯಕ್ರಮವನ್ನು ಸಾವಿತ್ರಿಬಾಯಿ ಫುಲೆ ಶಿಕಿಯರ ಸಂದ ಶರಣಮ್ಮ ನಾರಾಯಣಪೇಟ್ಕರ್​ ಉದ್ಘಾಟಿಸಿದರು. ಸಂಗಮ ಎಂ.ಸಜ್ಜನ, ಶಿವಸ್ವಾಮಿ ಚೀನಕೇರಾ, ಸುನೀತಾ ಪಾಟೀಲ್​, ನಾಗರಾಜ, ಚನ್ನವಿರ ಚಿನೈರೆ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶರಣಮ್ಮ ನಾರಾಯಣಪೇಟ್ಕರ್​ ಕರೆ
  • ಹುಮನಾಬಾದ್​ನಲ್ಲಿ ಮಕ್ಕಳ ಚಿತ್ರಕಲಾ ಸ್ಪರ್ಧೆ
ಹುಮನಾಬಾದ್​: ಮೊಬೈಲ್​ ಬಳಕೆಯಲ್ಲಿ ತಲ್ಲೀನವಾಗುತ್ತಿರುವ ಮಕ್ಕಳಿಗೆ ಈ ಚಟದಿಂದ ದೂರವಿಡಲು ಹಾಗೂ ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕುವಂತ ಸ್ಪರ್ಧಾತ್ಮಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ಸಾವಿತ್ರಿಬಾಯಿ ಫುಲೆ ಶಿಕಿಯರ ತಾಲೂಕು ಸಂದ ಶರಣಮ್ಮ ನಾರಾಯಣಪೇಟ್ಕರ್​ ಹೇಳಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಬಾಲಕರ ಕಾಲೇಜಿನಲ್ಲಿ ಕರ್ನಾಟಕ ಇಂಟರ್​ನ್ಯಾಷನಲ್​ ಚಾರಿಟೇಬಲ್​ ಟ್ರಸ್​, ಬೆಂಗಳೂರು ವತಿಯಿಂದ ವಿಶ್ವಕಲಾ ದಿನಾಚರಣೆಯ ಅಂಗವಾಗಿ ಬುಧವಾರ ಏರ್ಪಡಿಸಿದ್ದ ಮಕ್ಕಳ ಚಿತ್ರಕಲಾ ಸ್ಪರ್ಧೆ ಹಾಗೂ ಕಲಾ&ವಿಚಾರಧಾರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಆದರ್ಶ ವಿದ್ಯಾಲಯ ಬೇಮಳಖೇಡದ ಚಿತ್ರಕಲಾ ಶಿಕಿ ಸಂಗಮ ಎಂ.ಸಜ್ಜನ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಕಾರ್ಯಕ್ರಮ ಮಕ್ಕಳಲ್ಲಿ ಹುದುಗಿರುವ ಸೃಜನಶೀಲತೆಯನ್ನು ಹೊರಗೆಳೆಯುವ ಉದ್ದೇಶದಿಂದ ಸ್ಪರ್ಧೆ ಆಯೋಜಿಸಿರುವುದು ಸಂತಷ ತಂದಿದೆ. ಮಕ್ಕಳಿಗೆ ತಮ್ಮ ಪ್ರತಿಭೆಯನ್ನು ಹೊರಹಾಕುವ ಉತ್ತಮ ವೇದಿಕೆಯಾಗಿ ಇಂತಹ ಕಾರ್ಯಕ್ರಮಗಳು ರೂಪುಗೊಳ್ಳುತ್ತಿವೆ. ಮಕ್ಕಳ ಪ್ರತಿಭೆಯನ್ನು ಗುರುತಿಸಿ ಪ್ರಶಸ್ತಿ ನೀಡಿ ಪ್ರೋತ್ಸಾಹಿಸುವುದು ಶ್ಲಾನೀಯ ಕಾರ್ಯ. ರಜಾದಿನಗಳಲ್ಲೂ ಯಾವುದೇ ಫಲಾಪೇೆ ಇಲ್ಲದೆ ನಿಸ್ವಾರ್ಥ ಸೇವೆ ಮಾಡುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಎಂದರು.
ವಿಶೇಷ ಉಪನ್ಯಾಸಕರಾಗಿ ಸಂಗೀತ ಶಿಕ ಶಿವಸ್ವಾಮಿ ಚೀನಕೇರಾ ಮಾತನಾಡಿ, ಮಕ್ಕಳಲ್ಲಿ ಅಪಾರ ಪ್ರತಿಭೆ ಅಡಗಿದ್ದು, ಅದನ್ನು ಹೊರತರುವ ಇಂತಹ ಕಲಾ ಚಟುವಟಿಕೆಗಳು ಅತ್ಯಗತ್ಯ. ವಿವಿಧ ಕಲಾವಿದರ ಜೀವನ ಸಂಗತಿಗಳನ್ನು ಮಕ್ಕಳಿಗೆ ಪರಿಚಯಿಸುವ ಮೂಲಕ ಕಲೆಯತ್ತ ಆಸಕ್ತಿ ಹೆಚ್ಚಿಸಬೇಕು ಎಂದರು.
ಸಾಹಿತಿ ಸುನೀತಾ ಪಾಟೀಲ್​ ಮಾತನಾಡಿ, ವಿಶ್ವ ಕಲಾ ದಿನಾಚರಣೆ ಅಂಗವಾಗಿ ನಡೆಸಿದ ಮಕ್ಕಳ ಚಿತ್ರಕಲಾ ಸ್ಪರ್ಧೆ ಉತ್ತಮ ಕಲಾಸ್ಪರ್ಧೆ ಅಯೋಜಿಸಿದ್ದು ಗಮನಹಾರ್ಯವಾಗಿದ್ದು, ವಿದ್ಯಾರ್ಥಿಗಳ ಕಲಾ ಪ್ರತಿಭೆಗೆ ಇದು ಉತ್ತಮ ಕಾರ್ಯಕ್ರಮ ಎಂದರು.
ಚಿತ್ರಕಲಾ ಶಿಕಿ ಸಂಗಮ ಎಂ. ಸಜ್ಜನ ಪ್ರಾಸ್ತಾವಿಕ ಮಾತನಾಡಿದರು. ಬೀದರ್​ನ ಚಿತ್ರಕಲಾವಿದ ಸಚಿನ ಸಜ್ಜನ, ಟ್ರಸ್ಟ್​ ಅಧ್ಯ ನಾಗರಾಜ, ಚನ್ನವಿರ ಚಿನೈರೆ, ಪ್ರಿಯಾಂಕ್​, ಫಾತಿಮಾ, ಐಸಿಯ ಬೇಗಂ ಇತರರಿದ್ದರು. ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net