ನಗರದ ಹೆಂಜಗೊಂಡನಹಳ್ಳಿ ಬಡಾವಣೆಯಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು. ಅರ್ಹ ಮತದಾರರ ಸೇರ್ಪಡೆ, ಅನರ್ಹರನ್ನು ತೆಗೆದು ಹಾಕುವುದು, ತಿದ್ದುಪಡಿ ಮಾಡುವ ಕಾರ್ಯ ಜು.29ರವರೆಗೆ ನಡೆಯಲಿದೆ. ಈಗಾಗಲೇ ಬಿಎಲ್ಒಗಳು ಸಂಬಂಧಿಸಿದಂತೆ ಅರ್ಜಿ ನಮೂನೆಗಳನ್ನು ವಿತರಿಸಲಿದ್ದಾರೆ. ಚುನಾವಣಾ ಆಯೋಗ ನೀಡಿರುವ ನಿರ್ದೇಶನದಂತೆ ಮತದಾರರು ಅಗತ್ಯ ದಾಖಲೆಗಳನ್ನು ನೀಡಿ ಸಹಕಾರ ನೀಡಬೇಕು ಎಂದರು.