ವಿದ್ಯಾರ್ಥಿಗಳಿಗೆ ರ್ನಿದಿಷ್ಟ ಗುರಿ ಇರಲಿ goals

ವಿದ್ಯಾರ್ಥಿಗಳಿಗೆ ರ್ನಿದಿಷ್ಟ ಗುರಿ ಇರಲಿ goals
ವಿದ್ಯಾರ್ಥಿಗಳಿಗೆ ರ್ನಿದಿಷ್ಟ ಗುರಿ ಇರಲಿ goals
Published on
ಪಾತಪಾಳ್ಯ: ವಿದ್ಯಾರ್ಥಿ ಜೀವನದಲ್ಲಿ ರ್ನಿದಿಷ್ಟ ಗುರಿ ಮುಖ್ಯ. ಅದರಂತೆ ಸಮಯದ ಸದ್ಬಳಿಸಿಕೊಂಡು ಸಾಧಕನಾಗಬೇಕು ಎಂದು ಬೆಂಗಳೂರಿನ ಲೈಟ್​ ಎ ಡ್ರೀಮ್​ ಸಂಸ್ಥೆ ಹಿರಿಯ ವ್ಯವಸ್ಥಾಪಕ ಪಿ.ಕೆ.ದೌಲತುಲ್ಲಾ ತಿಳಿಸಿದರು. goals
ಪಾತಪಾಳ್ಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಶನಿವಾರ ಬೆಂಗಳೂರಿನ ಲೈಟ್​ ಎ ಡ್ರೀಮ್​ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಉಚಿತ ನೋಟ್​ ಪುಸ್ತಕ ವಿತರಿಸಿ ಮಾತನಾಡಿ, ಕಠಿಣ ಪರಿಶ್ರಮಕ್ಕೆ ಪರ್ಯಾಯ ಮಾರ್ಗವಿಲ್ಲ. ಏಕಾಗ್ರತೆ, ಸಮಯದ ನಿರ್ವಹಣೆ, ತಂದೆ-&ತಾಯಿ, ಗುರು&ಹಿರಿಯರ ಮೇಲೆ ಗೌರವ ಮನೋಭಾವ ವಿದ್ಯಾರ್ಥಿಗಳಲ್ಲಿ ಅವಶ್ಯಕ. ಸಂಸ್ಕಾರ, ಸಂಸತಿ, ಶಿಸ್ತು, ಶ್ರದ್ಧೆ ಎಂಬ ಬುನಾದಿಯ ಮೇಲೆ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಬೆಂಗಳೂರಿನ ಎ.ಪಿ.ಮೊಲ್ಲಾರ್​ ಮೆರ್ಸ್ಕ ಸಂಸ್ಥೆಯ ಎಐಎಂಎಲ್​ ಅನ್ವಿತಾ ಆನಂದ್​ ಮಾತನಾಡಿ, ಗ್ರಾಮೀಣ ವಿದ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನ ಮಾಡಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ಮೂಲಕ ಉನ್ನತ ಸ್ಥಾನಕ್ಕೇರಬೇಕು. ಸತತ ಪರಿಶ್ರಮದಲ್ಲಿ ಯಶಸ್ಸಿನ ಮಂತ್ರ ಅಡಗಿದೆ ಎಂದರು.
ಪ್ರಾಂಶುಪಾಲ ಪ್ರಸನ್ನ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ರೂಪಿಸಿಕೊಳ್ಳಲು ಸರ್ಕಾರ ಸಾಕಷ್ಟು ಅನುಕೂಲ ಮಾಡಿದೆ. ಜತೆಗೆ ದಾನಿಗಳು ಕೊಡುಗೆ ನೀಡುತ್ತಿದ್ದು, ಅವುಗಳನ್ನು ಸದ್ಬಳಿಕೆ ಮಾಡಿಕೊಳ್ಳಬೇಕು ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net