ವಿದ್ಯಾರ್ಥಿಗಳು ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಲಿ

ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.  ರಾಯಚೂರು ಡಿವೈಎಸ್ಪಿ ಶಾಂತವೀರ ಈ., ಗಂಗಾಧರ ಪೂಜಾರಿ, ಸಿದ್ದು ಬಿರಾದಾರ ಇತರರಿದ್ದರು.
ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದಲ್ಲಿ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ರಾಯಚೂರು ಡಿವೈಎಸ್ಪಿ ಶಾಂತವೀರ ಈ., ಗಂಗಾಧರ ಪೂಜಾರಿ, ಸಿದ್ದು ಬಿರಾದಾರ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಯಚೂರು ಡಿವೈಎಸ್ಪಿ ಶಾಂತವೀರ ಈ. ಹೇಳಿಕೆ
  • ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ತುಬಚಿ: ಕೇವಲ ಅಂಕ ಗಳಿಕೆಯಷ್ಟೇ ಜೀವನದ ಗುರಿಯಾಗಬಾರದು. ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ, ನೈತಿಕ ಮೌಲ್ಯಗಳು ಮತ್ತು ಸಮಾಜದ ಬಗ್ಗೆ ಕಳಕಳಿಯನ್ನು ಪ್ರತಿಯೊಬ್ಬ ವಿದ್ಯಾರ್ಥಿಯೂ ಬೆಳೆಸಿಕೊಳ್ಳಬೇಕು ಎಂದು ರಾಯಚೂರು ಡಿವೈಎಸ್‌ಪಿ ಶಾಂತವೀರ ಈ. ಹೇಳಿದರು.
ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಂಡಿದ್ದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ‘ಪ್ರತಿಭಾ ಪುರಸ್ಕಾರ’ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಭವ್ಯ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಪಾರ ಪ್ರತಿಭೆಯಿದೆ. ಅವರಿಗೆ ಸರಿಯಾದ ಮಾರ್ಗದರ್ಶನ ಮತ್ತು ಪ್ರೋತ್ಸಾಹ ಸಿಕ್ಕರೆ ಜಗತ್ತೇ ಮೆಚ್ಚುವಂತಹ ಸಾಧನೆ ಮಾಡಲು ಸಾಧ್ಯವಿದೆ ಎಂದರು.
ಜಮಖಂಡಿ ಪಿಎಸ್‌ಐ ಗಂಗಾಧರ್ ಪೂಜಾರಿ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಗುರಿ ಸ್ಪಷ್ಟವಾಗಿಟ್ಟುಕೊಂಡು, ಶ್ರದ್ಧೆ ಮತ್ತು ನಿರಂತರ ಪರಿಶ್ರಮದಿಂದ ಅಧ್ಯಯನ ಮಾಡಿದರೆ ಯಶಸ್ಸು ಖಂಡಿತ ಒಲಿಯುತ್ತದೆ. ಪ್ರತಿ ವರ್ಷ ಡಿವೈಎಸ್ಪಿ ಶಾಂತವೀರ ಅವರು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಅವರ ಈ ಕಾರ್ಯ ಇಡೀ ಗ್ರಾಮಕ್ಕೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಅತ್ಯುತ್ತಮ ಜನಪರ ಸೇವೆ ಮತ್ತು ಇಲಾಖೆಯಲ್ಲಿನ ದಕ್ಷ ಕಾರ್ಯವೈಖರಿ ಗುರುತಿಸಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಮುಖ್ಯಮಂತ್ರಿ ಪದಕಕ್ಕೆ ಭಾಜನರಾದ ಡಿವೈಎಸ್ಪಿ ಶಾಂತವೀರ ಅವರಿಗೆ ಗ್ರಾಮಸ್ಥರು, ಅಭಿಮಾನಿಗಳು, ಸನ್ಮಾನಿಸಿ ಗೌರವಿಸಿದರು.
ಪ್ರಹ್ಲಾದ ಕುಲಕರ್ಣಿ, ರಾವಸಾಬಗೌಡ ಪಾಟೀಲ, ಬಸಯ್ಯ ಹಿರೇಮಠ, ಮಾನಿಂಗ ಜಮಖಂಡಿ, ಗುರುಲಿಂಗ ಕುಂಚನೂರ, ಶೇಖರ್ ಪಾಟೀಲ, ನರಸಿಂಹ ಪಾಟೀಲ, ನರಸಿಂಹ ಕಲ್ಲೋಳಿ, ಈಶ್ವರ್ ಕನಬೂರ ಇತರರಿದ್ದರು. ಚನ್ನಗಿರಿ ಹೊಸೂರ್ ಸ್ವಾಗತಿಸಿದರು, ಗುರುಲಿಂಗ ಕೊಕ್ಕನವರ ನಿರೂಪಿಸಿದರು, ಸಂಜು ನಾವಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net